ವಿನಾಶಕಾರಿಯಾದುದು-ದೇವನೂರ ಮಹಾದೇವ

[ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ದೇವನೂರ ಮಹಾದೇವ ಅವರ ಹೇಳಿಕೆ.  12.6.2020 ರ ಪ್ರಜಾವಾಣಿ ಪತ್ರಿಕೆಯಲ್ಲಿ…..]

 

                                                               

 

ಭೂಮಿ ಖರೀದಿಯ ಗರಿಷ್ಠ ಮಿತಿಯನ್ನು ಹೆಚ್ಚಿಸಿದ್ದಲ್ಲಿ ಹೆಚ್ಚು ಜನ ಜಮೀನನ್ನು ಖರೀದಿಸಲು ಪ್ರಾರಂಭಿಸಿದರೆ, ರೈತರ ಜಮೀನಿನ ಬೆಲೆಯೂ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಬೇರೆ ರಾಜ್ಯದಲ್ಲಿ ಈ ಕಾನೂನು ಅಸ್ತಿತ್ವದಲ್ಲಿಲ್ಲ ಎಂಬುದಾಗಿ ತಿದ್ದುಪಡ್ಡಿ ಪ್ರಸ್ತಾವನೆ ಹೇಳುತ್ತದೆ. ಯಾವ ರಾಜ್ಯದಲ್ಲೂ ಅಸ್ತಿತ್ವದಲ್ಲಿರದ ಕಾನೂನನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ  ಹೊರಟಿದೆ. ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂದೂ ಹೇಳುತ್ತದೆ. ಆಗ ಭೂಮಿ ಉಳ್ಳವರ ಸ್ವತ್ತಾಗುತ್ತದೆ. ತಕ್ಷಣಕ್ಕೆ ಬೆಲೆ ಬರುತ್ತದೆ ನಿಜ. ಆದರೆ ನಿಧಾನವಾಗಿ ರೈತ ಗತಕಾಲಕ್ಕೆ ಸೇರಿಹೋಗುತ್ತಾನೆ. ಈ ಆಲೋಚನೆ ತುಂಬಾ ವಿನಾಶಕಾರಿಯಾದುದು. ಗ್ರಾಮೀಣ  ಉದ್ಯೋಗ  ಮತ್ತು ಗ್ರಾಮದಿಂದ ವಲಸೆ ಉಲ್ಬಣಗೊಳ್ಳುತ್ತದೆ.