ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ತೆಗೆದ ಸಾಕ್ಷ್ಯಚಿತ್ರ ‘ಧರೆ ಹೊತ್ತಿ ಉರಿದೊಡೆ’ಯಲ್ಲಿ ದೇವನೂರರ ಮಾತು.

ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ತೆಗೆದ ಸಾಕ್ಷ್ಯಚಿತ್ರ ‘ಧರೆ ಹೊತ್ತಿ ಉರಿದೊಡೆ’ಯಲ್ಲಿ ಹೃದಯಹೀನ, ಬುದ್ಧಿಹೀನ ಮಾರುಕಟ್ಟೆ ಆರ್ಥಿಕ ನೀತಿಗಳು ಹಾಗೂ ದಲ್ಲಾಳಿಗಳು ಹೇಗೆ ರೈತರ ಬದುಕನ್ನು ಛಿದ್ರ ಮಾಡುತ್ತಿವೆ ಮತ್ತು ಅದರಿಂದ ಹೊರ ಬಂದು ನೈಸರ್ಗಿಕ ಕೃಷಿ ಮತ್ತು ಸ್ವಯಂ ಮಾರುಕಟ್ಟೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ್ಮನಾಶದ ಹಾದಿಯಿಂದ ಹೇಗೆ ತಪ್ಪಿಸಿಕೊಳ್ಳಬಹುದೆಂಬ ಪರಿಣಾಮಕಾರಿ ಚಿತ್ರಣವಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ವಿವರಣೆ ನೀಡಲಾಗಿದೆ.

Infact Films ಮೂಲಕ ತಯಾರಿಸಿರುವ ಈ ಸಾಕ್ಷ್ಯಚಿತ್ರವನ್ನು ಮಾಯಾಜಲದೀಪ್ ಮತ್ತು ಕೆಸ್ತೂರ್ ವಾಸುಕಿಯವರು ನಿರ್ಮಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಗಳ ಸಂಪರ್ಕಿಸಬಹುದು.

 mayajaladeep@gmail.com
 www.infact.in