ರಾಜ್ಯ ರೈತರ ಬೃಹತ್ ಸಮಾವೇಶದಲ್ಲಿ ದೇವನೂರ ಮಹಾದೇವ ಮಾತುಗಳ ಪತ್ರಿಕೆಯ ವರದಿಗಳು
ನೀತಿ ಸಂಹಿತೆ ಅಡ್ಡಿಯಾಗದಂತೆ ಕಾನೂನು ರೂಪಿಸಿ
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಸಂಗ್ರಾಮ ಪರಿಷತ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಭಾರತ ಜ್ಞಾನ– ವಿಜ್ಞಾನ ಸಮಿತಿ, ಹೈದರಾಬಾದ್ ಕರ್ನಾಟಕ ರೈತ ಸಂಘ ಮತ್ತು ರಾಜ್ಯ ಬಿಟಿ ಹತ್ತಿ ನಿರ್ಮೂಲನಾ ಮತ್ತು ನಷ್ಟ ಪರಿಹಾರ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ರೈತರ ಬೃಹತ್ ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತನಾಡಿದರು.
ಪ್ರಧಾನಿ ಅವರಿಗೆ ರೈತರ ಬಗ್ಗೆ ಕಳಾಜಿ ಇದ್ದರೆ ಮೊದಲು ಬೆಳೆ ವಿಮೆ ಹಣವನ್ನು ವಿತರಿಸಲು ಕ್ರಮಕ್ಕೆ ಆಗ್ರಹಿಸಿದರು.
ಸಮಾವೇಶವನ್ನು ಬಿ.ಟಿ. ಹತ್ತಿ ಬೆಳೆ ಸುಡುವು ಮೂಲಕ ಉದ್ಘಾಟಿಸಿದ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಎರಡನೇ ಮಹಾಯುದ್ಧದ ವೇಳೆ ಬಾವಿಗೆ ಮತ್ತು ಆಹಾರಕ್ಕೆ ವಿಷ ಹಾಕಿ ಕೊಲ್ಲುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲೂ ತಿನ್ನುವ ಆಹಾರ ಕುಡಿವ ನೀರು ವಿಷಕಾರಿ ಆಗಿದೆ ಎಂದರು.
ಪಟ್ಟಣಗಳು ಗ್ಯಾಸ್ ಚೇಬಂರ್ಗ ಳಾಗಿವೆ. ಕುಲಾಂತರಿ ತಳಿಗಳು ಬಂದು ದೇಶಿ ಬೇಸಾಯ ಪದ್ಧತಿ ಸರ್ವನಾಶ ಆಗಿದೆ. ರೈತರು ಭೂಮಿ ಮಾರಾಟ ಮಾಡುವಂತಹ ಪರಿಸ್ಥಿತಿ ಸರ್ಕಾರಗಳೇ ನಿರ್ಮಾಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಳಕಲ್ ಮಠದ ಬಸವ ಪ್ರಸಾದ ಸ್ವಾಮೀಜಿ ಮಾತನಾಡಿ, ಬಹು ರಾಷ್ಟ್ರೀಯ ಕಂಪೆನಿಗಳ ಬೀಜ ಖರೀದಿ ಸುವುದು ಬಿಟ್ಟು, ರೈತರು ಹಿಂದಿನ ಪದ್ಧತಿಯಂತೆ ತಾವೇ ಬೀಜ ಪೋಷಣೆ ಮಾಡಿಕೊಂಡು ಪರಸ್ಪರ ವಿನಿಮಯದ ಮೂಲಕ ಕೃಷಿಯಲ್ಲಿ ಮುನ್ನಡೆದರೆ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ಜನಸಂಗ್ರಮಾ ಪರಿಷತ್ನ ಉಪಾ ಧ್ಯಕ್ಷ ಯತಿರಾಜ್, ರೈತ ಸಂಘದ ಉಪಾಧ್ಯಕ್ಷ ಜೆ.ಟಿ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಹೈದರಾಬಾದ್ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿ.ದಯಾನಂದ ಪಾಟೀಲ, ರೈತ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಕೊಮತ್ತೂರಿನ ನಲ್ಲಗೌಂಡರ್ ಮಾತನಾ ಡಿದರು. ಜನಸಂಗ್ರಾಮ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು.
ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ವೀರಸಂಗಯ್ಯ, ನಾಗ ರತ್ನಮ್ಮ, ಮಹಾದೇವಮ್ಮ, ಬಂದೆಪ್ಪ ಗೌಡ, ಭೀಮೇಶ್ವರರಾವ್ ಇದ್ದರು. ವೆಂಕ ಟೇಶ ಪಾಟೀಲ ವಟಗಲ್ ಸ್ವಾಗತಿಸಿದರು. ಈರಣ್ಣ ಬೆಂಗಾಲಿ ನಿರೂಪಿಸಿದರು.
‘ರಾಜಕಾರಣಿಗಳಿಂದ ರೈತರಿಗೆ ಮೋಸ’- ಸಾಹಿತಿ ದೇವನೂರ ಮಹಾದೇವ
ರಾಯಚೂರು: ‘ರಾಜಕಾರಣಿಗಳಿಂದ ರೈತರಿಗೆ ಮೋಸ ಮಾಡುವುದು ನಿರಂತರವಾಗಿ ನಡೆದಿದೆ. ಏಕೆಂದರೆ ರಾಜಕಾರಣಿಗಳಿಗೆ ಹೇಳೋರೂ ಇಲ್ಲ, ಕೇಳೋರೂ ಇಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಸರ್ಕಾರ ಸಂವೇದನಾಶೀಲತೆ ಕಳೆದುಕೊಂಡಿದೆ. ಹಾಲಿನ ದರ ಹೆಚ್ಚಿಸಿತು, ನಂತರ ಪಶು ಆಹಾರ ದರ ಏರಿಸಲು ಮುಂದಾಗಿತ್ತು’ ಎಂದು ದೂಷಿಸಿದರು.
‘ರೈತನಿಗೆ ಮನೆಯಲ್ಲಿ ಬೆಲೆ ಇಲ್ಲ. ಸಮಾಜದಲ್ಲೂ ಬೆಲೆ ಇಲ್ಲ ಮತ್ತು ಬೆಳೆದ ಬೆಳೆಗೂ ಬೆಲೆ ದೊರೆಯುತ್ತಿಲ್ಲ. ಇದರಿಂದ ಪ್ರಸ್ತುತ ಸ್ಥಿತಿ ಸಂಕೀರ್ಣವಾಗಿದೆ’ ಎಂದರು.
‘ಬ್ರಹ್ಮ ಅತ್ಯಾಚಾರಿ, ಕೃಷ್ಣ ಕುಡುಕ, ರಾಮ ಕಳ್ಳ ಎಂದು ಬರೆದಿರುವ ಯೋಗೇಂದ್ರ ಮಾಸ್ತರ್ ಅವರ ಅಭಿಪ್ರಾಯ ವೈಯಕ್ತಿಕ. ಪುರಾಣವನ್ನು ವಾಸ್ತವದಲ್ಲಿ ವಿಶ್ಲೇಷಣೆ ಮಾಡಬಾರದು. ಮಾಡಿದರೆ ಈ ತರಹದ ಸಮಸ್ಯೆ ಬರುತ್ತೆ. ಇದು ಅನಗತ್ಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕುಡುಕರ ವಾತಾವರಣ, ಜಾತಿ ಬೇಧ ಪರಿಣಾಮದಿಂದ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಎಂಬುದು ಕುಷ್ಟರೋಗ, ಜಾತಿ ಕಾರಣಕ್ಕೆ ಸಮಾಜ ಸಂವೇದನಾ ಹೀನತೆಗೆ ಒಳಗಾಗಿದೆ. ಇನ್ನೊಬ್ಬರ ಕಷ್ಟದ ಬಗ್ಗೆ ಸ್ಪಂದಿಸವುದನ್ನು ಕಲಿಯಬೇಕು’ ಎಂದರು.
‘ಐ.ಎಸ್. ಉಗ್ರರಿಗೆ ಉಗ್ರ ಶಿಕ್ಷೆ ನೀಡಬೇಕು. ಆದರೆ, ಮುಸ್ಲಿಂ ಮತ್ತು ದಲಿತರನ್ನು ಅನುಮಾನಿಸಿ ನೋಡುವುದು ಒಳ್ಳೆಯದಲ್ಲ. ಬ್ರಾಹ್ಮಣರಲ್ಲಿ ದೇಶದ್ರೋಹ ಮಾಡಿದವರಿದ್ದಾರೆ. ಆದರೆ, ಅವರನ್ನು ದೇಶದ್ರೋಹಿಗಳು ಎನ್ನುತ್ತಾರೆಯೇ’ ಎಂದು ಪ್ರಶ್ನಿಸಿದರು.
‘ನವಾಜ್ ಷರೀಫ್ ಮತ್ತು ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಒಟ್ಟಿಗೆ ಕುಳಿತಿದ್ದರು. ಇಬ್ಬರೂ ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಅಸಾಯಕ ರಾಗಿ ಕುಳಿತಂತೆ ನನಗೆ ಕಾಣುತ್ತಿತ್ತು. ಅದು ಒಂದು ರೀತಿ ಒಳ್ಳೆಯದು ಕೂಡ ಅನಿಸಿತು. ಕಾಶ್ಮೀರ ವಿಷಯ ಬಗೆಹರಿದರೆ ಎರಡು ದೇಶಗಳಿಗೂ ಒಳಿತಲ್ಲವೆ’ ಎಂದು ಹೇಳಿದರು.
THE HINDU
An invisible war is being waged on the working class: Devanur Mahadeva
Farmers setting fire to Bt cotton crop destroyed by pink bollworm to mark the inauguration of a conference in Raichur on Sunday.— PHOTO: SANTOSH SAGAR
‘Corporate companies have turned our food and water into poison’
Referring to corporate control over the farm sector and the resultant agrarian crisis and farmer suicide, writer Devanur Mahadeva said that an invisible war was being waged against the working class. He was addressing a State-level farmers conference at the APMC Market Yard here on Sunday after inaugurating the event by burning Bt cotton plants destroyed by pink bollworm pest attack.
The event was organised jointly by the Karnataka Rajya Raitha Sangha (KRRS), the Jana Sangram Parishath (JSP), the Grameena Krishi Cooli Karmikara Sanghatane, the Bharat Gyan Vigyan Samiti, the Hyderabad Karnataka Raitha Sangha, the State Bt Cotton Eradication Committee and other organisations.
“If we look around with sensitivity, we find an invisible imperialist war being waged on the working class. Unlike the wars in the past, this war is invisible. Imperialist forces have turned our food and water into poison. Our soil and seed are being killed. The farmers who have grown crops with the seeds provided by corporate companies are getting killed. It is a war being waged by imperialist forces on the common people. In the pre-Independence era, only one company plundered us. Now, hundreds of foreign companies are looting us,” he said.
Bt cotton
Mr. Mahadeva focussed on Bt cotton crop destroyed by pink bollworm pest attack in Raichur and other districts despite the claims of Bt cotton seed producers that they resistant to pests.
“Bt cotton cultivation is proving to be fatal for farmers. Impact of Bt cotton is similar to that of an explosion of nuclear bomb. The Bt cotton fields are being destroyed by the pest forcing the farmers to prepare a noose from the same cotton fibre that they are growing,” he said.
Mr. Mahadeva criticised successive Indian governments for serving their imperialist masters by formulating pro-corporate and anti-farmer agrarian policies.
“As many as 38 countries in the world have banned Bt cotton cultivation. But India didn’t do it. For multinational corporations, India, and its people, have become a laboratory for their research,” he said.
Mr. Mahadeva called upon the people to wean away from corporate-driven agriculture and gradually move towards sustainable natural farming. “We need to be more sensitive and get united for a larger fight for protecting Indian agriculture from corporate onslaught,” he said.
Pay compensation
Chamarasa Malipatil, State president of KRRS, demanded that the government hold Bt cotton seed companies responsible for crop destruction in the pest attack and compel them to pay compensation to affected farmers.
“The seed producing companies had claimed that Bt cotton crop was resistant to pink bollworm pest. However, the very same pest has destroyed the crop in the State. The government should hold the seed producers responsible and force them to pay compensation,” he said. He also demanded disbursement of relief to all drought-hit farmers both in rain-fed and irrigated areas and farm loan waiver.
The conference was presided over by Raghavendra Kushtagi, State working president of Jana Sangram Parishath. Amaranna Gudihal, Bandeppa Gowda, Lakshman Gowda, Mahadevi, Yatiraj, Venkatesh Patil Watagal and Eeranna Bengali were present.