ರಾಜ್ಯದ ಹಿತಾಸಕ್ತಿ ಕಾಪಾಡಿ: ದೇವನೂರ
[ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ 12.10 2016 ರಂದು ಭೇಟಿ ನೀಡಿದ ಸಾಹಿತಿ ದೇವನೂರ ಮಹಾದೇವ ಅವರ ಮುಖ್ಯಮಂತ್ರಿಯವರೊಂದಿಗಿನ ಮಾತುಕತೆ ಕುರಿತು ಪ್ರಜಾವಾಣಿ ವರದಿ. ]
ಮೈಸೂರು: ಕಾವೇರಿ, ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಯಲು ಬದ್ಧರಾಗಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ ದೇವನೂರ ಮಹಾದೇವ ಅವರು ಸಲಹೆ ನೀಡಿದ್ದಾರೆ.
ಟಿ.ಕೆ.ಬಡಾವಣೆಯ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ ಅವರು, ‘ರಾಜ್ಯದಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಿತ ಕಾಯಬೇಕು. ಕುಡಿಯುವ ನೀರಿನ ಸಮಸ್ಯೆಗೂ ಸ್ಪಂದಿಸಬೇಕು. ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಇದುವರೆಗೆ ಅನ್ಯಾಯವಾಗಿದೆ. ಇನ್ನು ಮುಂದೆ ರಾಜ್ಯದ ಜನರು ತೊಂದರೆಗೆ ಈಡಾಗಬಾದು. ಈ ನಿಟ್ಟಿನಲ್ಲಿ ಗಟ್ಟಿತನ ಕಾಪಾಡಿಕೊಂಡು ಬದ್ಧತೆ ಪ್ರದರ್ಶಿಸಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಹಣ ಬಿಡುಗಡೆಗೆ ಒತ್ತಾಯ: ಮೈಸೂರಿನ ‘ಶಕ್ತಿಧಾಮ’ದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹ 5 ಕೋಟಿ ಮಂಜೂರು ಮಾಡಿದ್ದು, ಅದರಲ್ಲಿ ₹ 3 ಕೋಟಿ ಬಿಡುಗಡೆಯಾಗಿದೆ. ಬಾಕಿ ₹ 2 ಕೋಟಿಯನ್ನು ಬಿಡುಗಡೆಗೊಳಿಸಿದರೆ ಅರ್ಧಕ್ಕೆ ನಿಂತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸಬಹುದು ಎಂದು ಶಕ್ತಿಧಾಮದ ಟ್ರಸ್ಟಿಗಳಾದ ಮಹಾದೇವ ಹಾಗೂ ದೀನಬಂಧು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಜಯದೇವ ಇದೇ ಸಂದರ್ಭದಲ್ಲಿ ಕೋರಿದ್ದಾರೆ.