ರತನ್ ಟಾಟಾ ಹೇಳಿದ್ದು….ಮಹಾದೇವ ಅವರು ಮೆಚ್ಚಿದ್ದು

[ರತನ್ ಟಾಟಾ ಸಂಪನ್ಮೂಲ ಮತ್ತು ಕೊಳ್ಳುವ ತಾಕತ್ತಿನ ಕುರಿತು ಹೇಳಿದ ಸ್ವಾನುಭವ 3.12.2015ರ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಅನುಭವ ಯಾರದೆಂದು ತಿಳಿಯದೇ ಹಲವು ವರ್ಷಗಳಿಂದ ಮಹಾದೇವ ಅವರು ತಮ್ಮ ಮಾತು-ಬರವಣಿಗೆಯಲ್ಲಿ ಹೇಳುತ್ತಾ ಬಂದಿದ್ದು, ಇದು ಅವರು ಒಪ್ಪುವ ಸಿದ್ಧಾಂತವೇ ಆಗಿ ಹೋಗಿದೆ. ]

 

ರತನ್ ಟಾಟಾ ಹೇಳಿದ್ದು….

purchasing capasity

ಒಂದು ಸಾರಿ ನಾವು ಜರ್ಮನಿಗೆ ಹೋಗಿದ್ದೆವು. ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು. ಊಟ ಮಾಡಲು ಅಲ್ಲಿನ ಹೊಟೇಲ್‍ಗೆ ಹೋದೆವು. ಬಹಳ ಟೇಬಲ್ ಖಾಲಿ ಇವೆ. ನಮಗೆ ಆಶ್ಚರ್ಯವಾಯಿತು. ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ. ಒಂದು ಮೂಲೆಯ ಟೇಬಲ್‍ನಲ್ಲಿ ವೃದ್ಧರ ಗುಂಪೊಂದು ಒಂದೇ ಊಟ ತರಿಸಿಕೊಂಡು ತಿನ್ನುತ್ತಿದ್ದರು. ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದಾರಲ್ಲಾ ಎನ್ನಿಸಿತು.
ನಾವು ನಮ್ಮ ಸ್ಟೇಟಸ್‍ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು. ನಮ್ಮವರು ಕೆಲವು ತಿನಿಸುಗಳು ಇಷ್ಟವಾಗಲಿಲ್ಲವೆಂದು, ಜಾಸ್ತಿಯಾಯಿತೆಂದು ಆಹಾರವನ್ನು ಪ್ಲೇಟ್‍ನಲ್ಲಿಯೇ ಬಿಟ್ಟರು. ನಾವು ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೇಸ್ಟ್ ಮಾಡಬಾರದು, ಅದು ನಮ್ಮ ಆಹಾರ ಎಂದಳು. ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಮೊಬೈಲ್ ಫೋನ್ ತೆಗೆದು ಆಕೆ ಯಾರಿಗೋ ಫೋನ್ ಮಾಡಿದಳು. ಪೊಲೀಸರು ಬಂದರು. ನಡೆದಿದ್ದನ್ನ ಕೇಳಿದರು. ನಮಗೆ 50 ಯೂರೋ ದಂಡ ಹಾಕಿದರು. ಮರು ಮಾತಾಡದೇ ಕಟ್ಟಿ ಬಂದೆವು. ಅವರು ಹೇಳಿದ್ದೇನೆಂದರೆ…
“ಹಣ ನಿಮ್ಮದು ಅಷ್ಟೇ. ಇಲ್ಲಿಯ ಸಂಪನ್ಮೂಲಗಳಲ್ಲ. ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ. ಆ ಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರ. ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.”
ನಾವು ಮದುವೆ ಸಮಾರಂಭಗಳನ್ನು ಸ್ಟೇಟಸ್ ಎಂಬ ಹೆಸರಿನಲ್ಲಿ ಎಷ್ಟು ಆಡಂಬರದಿಂದ ಮಾಡುತ್ತೇವೆ…? ಇದು ನಮಗೆ ಒಂದು ಗುಣಪಾಠವಲ್ಲವೇ…? ಇದರಿಂದ ನಾವು ಕಲಿಯೋಣ.-
“ಮನಿ ಈಸ್ ಯುವರ್ಸ್. ಬಟ್ ರಿಸೋರ್ಸ್‍ಸ್ ಬಿಲಾಂಗ್ ಟು ದಿ ಸೊಸೈಟಿ.”