ಮೈಸೂರಿನಲ್ಲಿ ದೇವನೂರ ಮಹಾದೇವ ಅವರ ಧರಣಿ: 12.10.2019
ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು ಇಂದು[ 12.10.2019] ಶಿಕ್ಷಣಾಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು. ಈ ಶಾಲೆಯಲ್ಲಿ ವಿವೇಕಾನಂದರು ಹಿಂದೆ ಒಂದು ರಾತ್ರಿ ತಂಗಿದ್ದರಿಂದ ಶಾಲೆಯನ್ನು ಸ್ಮಾರಕವಾಗಿಸಬೇಕೆಂಬ ಅಭಿಪ್ರಾಯ ರಾಮಕೃಷ್ಣ ಆಶ್ರಮದ್ದು. ಇದನ್ನು ವಿರೋಧಿಸುತ್ತಿರುವ ಬಡ ಮಕ್ಕಳ ಪೋಷಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಡೆ ಒಡ್ಡಿ ಶಾಲೆ ತೆರವುಗೊಳಿಸುವ ಆದೇಶವನ್ನು ತೋರಿಸುವಂತೆ ಒತ್ತಾಯಿಸಿದರು. ಈ ವಿಚಾರ ಉಚ್ಚನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಅದರ ತೀರ್ಪಿಗೂ ಕಾಯದೆ ಸರ್ಕಾರಿ ಆದೇಶವೂ ಇಲ್ಲದೆ ಹೀಗೆ ತೆರವುಗೊಳಿಸಲಾಗದೆಂದು ಹಠ ಹಿಡಿದರು. ಪೊಲೀಸರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ವಿಷಯ ತಿಳಿದ ಸಾಹಿತಿ ದೇವನೂರ ಮಹಾದೇವ ಅವರು ಶಾಲೆಗೆ ಆಗಮಿಸಿ, ಒತ್ತಾಯ ನಡೆಸುತ್ತಿರುವವರನ್ನು ಭೇಟಿಮಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಮತ್ತು ಶಿಕ್ಷಣಾಧಿಕಾರಿಗಳಿಗೆ ವಿವೇಕಾನಂದರು ದೀನ ದಲಿತರ ಬಗ್ಗೆ ಹೊಂದಿದ್ದ ಭಾವನೆಗಳನ್ನು ವಿವರಿಸಿದರು….