ಬೆಳ್ಳಕ್ಕಿ ಸಾಲುಗಳ ನೆನಪಾಗಿ-ಪು.ತಿ.ನ
[ದೇವನೂರರ ಕುಸುಮಬಾಲೆ ಓದಿ, ಪು.ತಿ.ನ ಅವರು ಬರೆದ ಪತ್ರದಿಂದ ಆಯ್ದ ಸಾಲುಗಳು ನಮ್ಮ ಮರು ಓದಿಗಾಗಿ… ]
ಬೆಳ್ಳಕ್ಕಿ ಸಾಲುಗಳ ನೆನಪಾಗಿ………
ಕುಸುಮಬಾಲೆ ಓದುವಾಗ ಬೆಳ್ಳಕ್ಕಿಯ ಸಾಲುಗಳು ಸಾಲುಸಾಲಾಗಿ ಬಾನಿಂದ ಇಳಿದು ಬಂದು ನೀರನ್ನು ಮುಟ್ಟಿ ಮುಟ್ಟಿ ಮೇಲೇರಿ ಹಾರಾಡುವ ಲೀಲೆಯಂತೆ ಅನುಭವವಾಯ್ತು. ಸತ್ಯಯುತವೂ ಸೂಕ್ಷ್ಮ ಸಂವೇದಿಯೂ ಆದ ಸೃಜನಶೀಲ ಮನಸ್ಸು, ಕನಸು-ನನಸುಗಳ ನಡುವೆ ಓಡಾಡುತ್ತಾ ನಿರ್ಮಿಸಿದ ಕಲಾಕೃತಿಯಿದು.