ನಿಜವಾದ ಕ್ಲೈಮ್ಯಾಕ್ಸ್ ನಡೂ ಬಂದದ-ಶಂಕರ ಮೊಕಾಶಿ ಪುಣೇಕರ

mokashi punekar[ದೇವನೂರರ ಕುಸುಮಬಾಲೆ ಕುರಿತು ಶಂಕರ ಮೊಕಾಶಿ ಪುಣೇಕರ ಅವರು  ರಹಮತ್ ತರೀಕೆರೆಯವರು, 1998ರಲ್ಲಿ ಹಂಪಿ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ’ ಸಂಚಿಕೆಗಾಗಿ  ನಡೆಸಿದ  ಸಂದರ್ಶನದಲ್ಲಿ, ಆಡಿದ ಮಾತುಗಳು ನಮ್ಮ ಮರು ಓದಿಗಾಗಿ…]

 

 

 

 

 

 

 

 

ನಿಜವಾದ ಕ್ಲೈಮ್ಯಾಕ್ಸ್ ನಡೂ ಬಂದದ…

…..’ಕುಸುಮಬಾಲೆ’ ಒಳ್ಳೇ ಕಥೆ. ಹೆಂಗೆ ತಗೋತಾನೆ ಅಂತಂದ್ರೆ ಐದಾರು ಜ್ಯೋತ್ಯಮ್ಮದಿರು ಮಾತಾಡ್ತಿರ್ತಾರೆ. ಅವು ಕ್ಯಾರೆಕ್ಟರ್ಸೇ ಅಲ್ಲ. ಸಾಮಾಜಿಕ ರಿಯಾಕ್ಷನ್ಸ್ ಚಿತ್ರಗಳು ಇದು. ಬಿಟ್ರೂ ನಡೀತದೆ ಇದ್ರೂ ನಡೀತದೆ. ಆದ್ರೆ ನಿಜವಾಗಿ ಕ್ಲೈಮ್ಯಾಕ್ಸ್ ಎಲ್ಲಿ ಬರ್ತದೆ ಅಂತಂದ್ರೆ ತಂದೆ ತನ್ನ ಮಗ ಜೀವಂತ ಇದ್ದಾನ ಅಂತ ಭಾವನೆಯಿಂದ ಹೆಂಡ್ತಿಗೆ ಸಮಾಧಾನ ಹೇಳ್ತಾನೆ. ಅಂವ ಮುಂಬೈಯೊಳಗೆ ಇದ್ದಾನ, ದೊಡ್ಡ ಹೊಟೇಲ್ ಮಾಲೀಕ ಆಗ್ಯಾನ, ಹಾಗೆ ಹೀಗೆ ಅಂತ ಹೇಳ್ತಾನಲ್ಲ, ಅದು ಕ್ಲೈಮ್ಯಾಕ್ಸು, ನಿಜವಾದ ಕ್ಲೈಮ್ಯಾಕ್ಸ್ ನಡೂ ಬಂದದ…. ಕೊನೆಗೆ ಬರಬೇಕಿತ್ತಾ ಅಂತ ನೀವು ಕೇಳಿದರೆ…. ಆ ಪ್ರಯೋಗ ಓದುಗರಿಗೆ ಸ್ವಲ್ಪ ಕಷ್ಟ ಆಗ್ತದೆ. ಆದ್ರೆ ದೇವನೂರ ಧೈರ್ಯವಂತ… ಈಗ ಒಂದು ರಚನಾ ಆಗದೆ. ಅದಕ್ಕೆ ಲೀಡ್ ಮಾಡ್ಬೇಕು. ಅದು ಹಂಗ್ ಮಾಡಿಲ್ಲ. ಇಂವ ಬಾಳ ದೊಡ್ಡ ಕತೆಗಾರ. ಸಾಮಾನ್ಯ ಲೇಖಕ ಅಲ್ಲ…