‘ದಿ ಸ್ಟೇಟ್’ನಲ್ಲಿ ದೇವನೂರ ಮಹಾದೇವ ಅವರ ನಿಯಮಿತ ಅಂಕಣ
[ಸುಗತ ಶ್ರೀನಿವಾಸರಾಜು ಅವರ ಸಂಪಾದಕತ್ವದಲ್ಲಿ ಸಧ್ಯದಲ್ಲೇ ಪ್ರಾರಂಭವಾಗಲಿರುವ,’ದಿ ಸ್ಟೇಟ್’ ಆನ್ ಲೈನ್ ಪತ್ರಿಕೆಗೆ ದೇವನೂರ ಮಹಾದೇವ ಅವರು ನಿಯಮಿತವಾಗಿ ಅಂಕಣ ಬರೆಯಲು ಒಪ್ಪಿದ್ದಾರೆ. ಅವರ ಮಾತುಗಳ ಒಪ್ಪಂದದ ‘ನೋಡಿಯೋ’ ಇಲ್ಲಿದೆ.]
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೈಸೂರಿನಲ್ಲಿ ಮೊದಲು ಭೇಟಿ ಮಾಡಿದ್ದು ಸಾಹಿತಿ ದೇವನೂರ ಮಹಾದೇವ ಅವರನ್ನು. ದೇವನೂರರು ತಮ್ಮನ್ನು ತಾವು ವಿಜೃಂಭಿಸಿಕೊಳ್ಳದಿದ್ದರೂ ರಾಜಕಾರಣಿಗಳೂ ಸೇರಿದಂತೆ ಜನಸಮುದಾಯ ಅವರನ್ನು ಕರ್ನಾಟಕದ ಆತ್ಮಸಾಕ್ಷಿ ಎಂದೇ ನಂಬಿದೆ. ಸಾಮಾಜಿಕ ಮತ್ತು ರಾಜಕೀಯವಾಗಿ ವಿವೇಕವನ್ನು ವಿಸ್ತರಿಸುತ್ತಿರುವ ಅವರು, ‘ದಿ ಸ್ಟೇಟ್’ನಲ್ಲಿ ನಿಯಮಿತವಾಗಿ ಅಂಕಣ ಬರೆಯಲಿದ್ದಾರೆ.
-ಸಂಪಾದಕರು, ‘ದಿ ಸ್ಟೇಟ್’