ಗೌರಿ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟನೆ

[ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ ಹಾಲ್‌ನಲ್ಲಿ 4.12.2017 ರಂದು ಆಯೋಜಿಸಲಾಗಿದ್ದ ಗೌರಿ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟನೆ ಮತ್ತು ವಿಚಾರಸಂಕಿರಣದಲ್ಲಿ ಮಾತನಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಮಾತುಗಳ ನೋಡಿಯೋ ಕೃಪೆ THE STATE ಆನ್ ಲೈನ್ ಪತ್ರಿಕೆ. ಮತ್ತು ಪ್ರಜಾವಾಣಿ ವರದಿ ಮತ್ತು ಫೋಟೋ ಕೃಪೆ ]


[ಪ್ರಜಾವಾಣಿ ವರದಿ ಮತ್ತು ಫೋಟೋ ಕೃಪೆ ]

ಸಾಹಿತಿ ದೇವನೂರ ಮಹಾದೇವ, ‘ಪ್ರತಿದಿನ ಹತ್ತಾರು ಕೊಲೆಗಳು ನಡೆಯುತ್ತವೆ. ಆದರೆ, ಗೌರಿ ಹತ್ಯೆ ಕುರಿತೇ ಮಾತನಾಡುತ್ತೀರಿ ಏಕೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇಲ್ಲಿ ಗೌರಿ ನಿಮಿತ್ತ. ಗುಂಡು ಬಿದ್ದಿರುವುದು ಅಭಿವ್ಯಕ್ತಿಯ ಮೇಲೆ. ಅದನ್ನು ಬಯಸುವ ಎಲ್ಲರಿಗೂ ಗುಂಡು ಬಿದ್ದಿದೆ’ ಎಂದು ಹೇಳಿದರು.‌

‘ಬಿಹಾರದ ಕನ್ಹಯ್ಯಾ, ಗುಜರಾತಿನ ಜಿಗ್ನೇಶ್‌ ಮೇವಾನಿ ಅವರನ್ನು ಗೌರಿ ತನ್ನ ಮಕ್ಕಳೆಂದೇ ಭಾವಿಸಿದ್ದರು. ಇವರ ರಾಜ್ಯ, ಜಾತಿ ಬೇರೆ ಬೇರೆ. ಆದರೆ, ಅವರಲ್ಲಿದ್ದ ಸಮಾನತೆಯ ತುಡಿತವು ಗೌರಿಯನ್ನು ಸೆಳೆದಿತ್ತು. ಈ ಸಮಾನತೆ, ಸಹಬಾಳ್ವೆಗಾಗಿ ನಾವೆಲ್ಲ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ’ ಎಂದರು.

‘ಈ ಟ್ರಸ್ಟ್‌ ಕೇವಲ ಗೌರಿ ಕೇಂದ್ರಿತವಾಗಬಾರದು. ಅದು ಅಭಿವ್ಯಕ್ತಿಯ ಕೇಂದ್ರವಾಗಬೇಕು. ಪಿ.ಲಂಕೇಶರ ಟೀಕೆ–ಟಿಪ್ಪಣಿ, ಮರೆಯುವ ಮುನ್ನ ಕೃತಿಯನ್ನು ಪಠ್ಯವಾಗಿಸಿಕೊಳ್ಳಬೇಕು. ಅವರ ಬರಹಗಳಲ್ಲಿ ಒಳನೋಟ, ಶೋಧ ಇರುತ್ತದೆ’ ಎಂದು ಹೇಳಿದರು.