ಕಥೆಯನ್ನೂ ಹೇಳುತ್ತದೆ, ಚಿತ್ರವನ್ನೂ ಮೂಡಿಸುತ್ತದೆ, ಹಾಡುತ್ತದೆ-ಕೀರ್ತಿನಾಥ ಕುರ್ತಕೋಟಿ
[ದೇವನೂರರ ಕುಸುಮಬಾಲೆ ಕಾದಂಬರಿ ಕುರಿತು, ಕೀರ್ತಿನಾಥ ಕುರ್ತಕೋಟಿ ಅವರು ಹೇಳಿರುವ ಈ ಮಾತುಗಳು, 1998ರಲ್ಲಿ ಪ್ರಕಟವಾದ ‘ನೂರು ಮರ ನೂರು ಸ್ವರ,’ ಸಂಕಲನದಲ್ಲಿ ದಾಖಲಾಗಿದೆ. ]
ದೇವನೂರ ಮಹಾದೇವರ ‘ಕುಸುಮಬಾಲೆ’ಯನ್ನು ಒಂದು ಕಿರುಕಾದಂಬರಿ ಎಂದು ಈಗ ಕರೆಯಬೇಕಿದೆ. ಸರಿಯಾಗಿ ಈ ಕೃತಿಯನ್ನು ಬಣ್ಣಿಸಲು ಶಬ್ದಗಳು ದೊರೆಯುವುದಿಲ್ಲ. ಈ ಕೃತಿ ಕತೆಯನ್ನೇನೋ ಹೇಳುತ್ತದೆ, ಅದರ ಜೊತೆಗೇ ಬಣ್ಣಿಸುತ್ತದೆ, ಹಾಡುತ್ತದೆ, ಚಿತ್ರಗಳನ್ನು ಮೂಡಿಸುತ್ತದೆ. ಸಂವಹನದ ಹತ್ತು ಮಾಧ್ಯಮಗಳನ್ನು ಉಪಯೋಗಿಸುತ್ತಲೇ ಅಥವಾ ಆ ಕಾರಣಕ್ಕಾಗಿಯೇ ಗೊಂದಲವನ್ನು ಎಬ್ಬಿಸುತ್ತದೆ…