ಅಸ್ಪೃಶ್ಯತೆ ದಲಿತರ ಸಮಸ್ಯೆ ಅಲ್ಲ-ಸಾಹಿತಿ ದೇವನೂರ ಮಹದೇವ ಅಭಿಪ್ರಾಯ
[ ಹಾಸನ ಜಿಲ್ಲೆ ಹೊಳೆನರಸಿಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿ ಸಂಘರ್ಷ ಮತ್ತು ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ 20.4.2016ರ ಪ್ರಜಾವಾಣಿಯಲ್ಲಿ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ]
‘ಅಸ್ಪೃಶ್ಯತೆ ಎನ್ನುವುದು ದಲಿತರ ಸಮಸ್ಯೆಯಲ್ಲ. ಅದನ್ನು ಯಾರು ಆಚರಿಸುತ್ತಾರೋ ಅವರ ಸಮಸ್ಯೆ’ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು. ಹೊಳೆನರಸೀಪುರದ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ಪ್ರವೇಶ ನಿರಾಕರಿಸಿರುವ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಅವರು ಮಾತನಾಡಿದರು.
‘ಅಸ್ಪೃಶ್ಯತೆ ಎನ್ನುವುದು ಯಾರು ಆಚರಿಸುತ್ತಾರೋ ಅವರ ಸಮಸ್ಯೆ ಎಂಬ ದೃಷ್ಟಿಯಿಂದ ನೋಡಿದಾಗ, ಅಸ್ಪೃಶ್ಯತೆ ಆಚರಿಸುವ ವ್ಯಕ್ತಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
‘ಅಸ್ಪೃಶ್ಯತೆಯನ್ನು ಆಚರಿಸುವ ಸಮುದಾಯಗಳಲ್ಲೂ ಪ್ರಜ್ಞಾವಂತರಿದ್ದಾರೆ. ಅವರು ತಮ್ಮ ಸಮುದಾಯದವರನ್ನು ಯಾವ ರೀತಿಯಲ್ಲಿ ನಾಗರಿಕರನ್ನಾಗಿ, ಮನುಷ್ಯರನ್ನಾಗಿ ಮಾಡಬೇಕು ಎಂದು ಯೋಚಿಸಬೇಕು. ಅಂಥ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಅಸ್ಪೃಶ್ಯತೆಯನ್ನು ತೊರೆಯುವುದು ಬೇರೆಯವರಿಗಾಗಿ ಅಲ್ಲ. ಮನುಷ್ಯತ್ವದ ಕಡೆಗೆ ಹೆಜ್ಜೆ ಎಂದು ತಿಳಿಯಬೇಕು’ ಎಂದರು.
To Top