ಅಮೃತಯಾನ ಕೃತಿ ಬಿಡುಗಡೆ ಕಾರ್ಯಕಮದಲ್ಲಿ ….
ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ 10.12.2017 ರಂದು ಸಕಲೇಶಪುರದ ರಕ್ಷಿದಿಯ ರಂಗಕರ್ಮಿ, ಲೇಖಕ ರಕ್ಷಿದಿ ಪ್ರಸಾದ್ ಅವರ ಅಕಾಲಿಕ ಸಾವಿಗೀಡಾದ ಮಗಳು ಅಮೃತ ಅವರು ಬರೆದ ಐದು ಸಂಪುಟಗಳ ‘ಅಮೃತಯಾನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮೊದಲ ಪ್ರತಿಯನ್ನು ದೇವನೂರ ಮಹಾದೇವ ಅವರಿಗೆ ನೀಡಲಾಯ್ತು. ಸಮಾರಂಭದಲ್ಲಿ ಕೇಸರಿ ಹರವೂ, ಡಾ.ಕೆ.ಆರ್.ಅಶೋಕ್, ಮೀನಾ ಮೈಸೂರು, ಕೆ.ಪಿ.ಸುರೇಶ, ಅಭಿರುಚಿ ಗಣೇಶ್, ಪ್ರಸಾದ್ ರಕ್ಷಿದಿ, ರಾಧೇ ರಕ್ಷಿದಿ ಇತರರು ಇದ್ದರು.