ಬಂಜಗೆರೆ ಜಯಪ್ರಕಾಶ್ ಅವರು ದೇವನೂರ ಮಹಾದೇವ ಅವರನ್ನು ಕುರಿತು…
ದೇವನೂರ ಮಹಾದೇವ ತಮ್ಮ ಬರವಣಿಗೆಯ ನಡಿಗೆಯಲ್ಲಿ ತಮ್ಮದೇ ಆಗಿರುವಂತಹ ಒಂದು ರೀತಿಯ ಲಘುಹಾಸ್ಯದ ದಾಟಿಯಲ್ಲಿ, ಎಂತಹ ಪಾಪದ ಅತಿರೇಕಗಳನ್ನೂ ಕೂಡ ಕ್ಷಮಿಸಿ, ಇನ್ನಿದು ನಡೆಯಬಾರದು ಎನ್ನುವಂತಹ ನೈತಿಕ ಆಗ್ರಹದಿಂದ ಖಂಡಿಸಿ, ಪಾಪ ಇವರು ಮನುಷ್ಯರಲ್ಲವೇ? ಏನೋ ಹೀಗಾಗಿಬಿಟ್ಟಿದ್ದಾರೆ ಎನ್ನುವ ಕನಿಕರದಿಂದ ಅವರನ್ನೂ ಜೊತೆಗೆ ಕರೆದುಕೊಂಡು ಈ ಸಮಾನತೆಯ ಹಾದಿಗೆ ಅಂದರೆ ಎಲ್ಲರ ಬಿಡುಗಡೆಯ, ಎಲ್ಲರ ಸೌಖ್ಯದ ಒಂದು ಆದರ್ಶದ ಕಡೆಗೆ ಅಥವಾ ಒಂದು ಆಶಯದ ಕಡೆಗೆ ನಡೆಸುತ್ತಿರುವ ಅವರ ಆ ತಾಯ್ತನ, ಆ ದೃಷ್ಟಿಕೋನ… ಅದನ್ನು ಮಾತ್ರವೇ ನಾವು ಭಾರತೀಯ ಸಂಸ್ಕೃತಿಯ ನಿಜವಾದ ನಿಲುದಾಣ ಎಂದು ಕರೆಯಬಹುದು. ಇದರ ಮುಂದೆ ಇನ್ನುಳಿದ ಎಲ್ಲ ಉಗ್ರ ಪ್ರತಿಪಾದನೆಗಳು, ವಕ್ರ ಪ್ರತಿಪಾದನೆಗಳು ನಾಚಿಕೆಪಟ್ಟುಕೊಂಡು ನೇಪಥ್ಯಕ್ಕೆ ಸರಿಯಬೇಕು.
- ಬಂಜಗೆರೆ ಜಯಪ್ರಕಾಶ್