ಭೂಮಿ, ಆಹಾರ ಹಕ್ಕು ರಕ್ಷಣೆಗೆ ಹೋರಾಟ-ಪ್ರಜಾವಾಣಿ
[ದಲಿತರಿಗೆ ಭೂಮಿ ನೀಡಬೇಕು ಹಾಗೂ ಪ್ರತಿಯೊಬ್ಬರ ಆಹಾರ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ದಲಿತರ, ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ‘ಉಡುಪಿ ಚಲೋ’ ಜಾಥಾಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 4.10.2016 ಮಂಗಳವಾರ ಚಾಲನೆ ನೀಡಲಾಯಿತು. ಅದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ಪ್ರಜಾವಾಣಿ ವರದಿ]
‘ಗೋ ಭಯೋತ್ಪಾದನೆಯನ್ನು ಜಗತ್ತಿಗೆ ನೀಡುತ್ತಿರುವ ಭಾರತ’
‘ಸಮಾಜದಲ್ಲಿ ಅನೇಕ ರೀತಿಯ ಭಯೋತ್ಪಾದನೆಗಳಿವೆ. ಜಗತ್ತಿಗೆ ಭಾರತ ಮತ್ತೊಂದು ಭಯೋತ್ಪಾದನೆಯನ್ನು ಸೇರಿಸಿದೆ. ಅದು ಗೋ ಭಯೋತ್ಪಾದನೆ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. ‘ಗೋ ರಫ್ತು ಮಾಡುವ ದೇಶ ಗೋಮಾಂಸ ನಿಷೇಧ ಮಾಡುವುದರ ಹಿಂದಿನ ಉದ್ದೇಶ ಏನೆಂದೇ ಅರ್ಥ ಆಗುತ್ತಿಲ್ಲ. ನಮ್ಮ ದೇಶದಲ್ಲಿ ಸತ್ತ ಪ್ರೇತಾತ್ಮಗಳು ಹೆಚ್ಚು ಕ್ರಿಯಾಶೀಲವಾಗಿವೆ. ಮನುಷ್ಯನ ಮೈದುಂಬಿ ಚೇಷ್ಟೆ ಮಾಡುತ್ತಿವೆ. ಬದುಕಿರುವವರು ಪ್ರಜ್ಞೆ ಪಡೆದುಕೊಳ್ಳದಿದ್ದರೆ ಯಾರು ಸತ್ತಿದ್ದಾರೆ, ಯಾರು ಬದುಕಿದ್ದಾರೆ ಎಂದು ಗೊತ್ತಾಗುವುದಿಲ್ಲ’ ಎಂದು ಹೇಳಿದರು.
***
ಬಲಿ ಚಕ್ರವರ್ತಿಯ ರಾಜ್ಯದಲ್ಲಿ ಸಮಾನತೆ ಇತ್ತು. ಆತನನ್ನು ಭಾರತ ತುಳಿದುಹಾಕಿದೆ. ಇವತ್ತು ವಾಮನನ ಆರಾಧಿಸುವ ಬದಲು ಬಲಿ ಚಕ್ರವರ್ತಿ ಸಾರಿದ ಮೌಲ್ಯಗಳನ್ನು ಆರಾಧಿಸಬೇಕಿದೆ
-ದೇವನೂರ ಮಹಾದೇವ, ಸಾಹಿತಿ