ಹೆಜ್ಜೆಗುರುತು

ದೇವನೂರ ಮಹಾದೇವ ಅವರ ಬದುಕು-ಬರಹದ ಕುರಿತು ಕಿರು ಪರಿಚಯ ಹಾಗೂ ಮುಖ್ಯ ಘಟ್ಟಗಳ ದಾಖಲೀಕರಣ ಈ ಹೆಜ್ಜೆಗುರುತು.

ಮೈಲಿಗಲ್ಲುಗಳು

ಹುಟ್ಟಿದ್ದು-1948ರ ಏಪ್ರಿಲ್ ತಿಂಗಳಿನ ಯಾವುದೋ ಒಂದು ಸೋಮವಾರ, [ಶಾಲಾ ದಾಖಲಾತಿಗಳಲ್ಲಿ 10 ಜೂನ್ 1948]

ಹುಟ್ಟೂರು- ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮ.
ಹೆತ್ತವರು-ನಂಜಮ್ಮ ಮತ್ತು ಸಿ,ನಂಜಯ್ಯ
ಕುಟುಂಬ– ಪತ್ನಿ ಪ್ರೊ.ಕೆ. ಸುಮಿತ್ರಾಬಾಯಿ
ಹಿರಿಯ ಮಗಳು ಉಜ್ವಲ, ಅಳಿಯ ವೆಂಕಟೇಶ್, ಮೊಮ್ಮಗ ಅರವಿಂದ
ಕಿರಿಯ ಮಗಳು ಡಾ.ಮಿತಾ, ಅಳಿಯ ಅವಿನಾಶ್, ಮೊಮ್ಮಗಳು ರುಹಾನಿ

ಪ್ರೀತಿಯ ಕೃಷಿ ಭೂಮಿ-ಬನವಾಸಿ

ಪ್ರಾಥಮಿಕ ಶಿಕ್ಷಣ-ಚಿಕ್ಕ ಕವಲಂದೆ, ಹುಣಸೂರು

ಮಾಧ್ಯಮಿಕ-ಹೊಮ್ಮರಗಳ್ಳಿ, ಹುಣಸೂರು

ಪ್ರೌಢಶಾಲೆ-ದೇವನೂರು, ಸಾಲಿಗ್ರಾಮ

ಪಿ ಯು ಸಿ-ಯುವರಾಜ ಕಾಲೇಜು, ಮೈಸೂರು

ಬಿ.ಎ-ಮಹಾರಾಜ ಕಾಲೇಜು, ಮೈಸೂರು

ಕನ್ನಡ ಎಂ.ಎ- 1973-74[ಕನ್ನಡ ಅಧ್ಯಯನ ಸಂಸ್ಥೆ, ಗಂಗೋತ್ರಿ, ಮೈಸೂರು]

ವೃತ್ತಿ- ಭಾರತೀಯ ಭಾಷಾ ಸಂಸ್ಥಾನ, ಮೈಸೂರು,[ಸಿಐಐಎಲ್‌]ನಲ್ಲಿ ಅಧ್ಯಾಪಕ 1975-1989

ಕೃಷಿ- ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ಸಹಜ ಕೃಷಿಯಲ್ಲಿ ತೊಡಗಿದ್ದು -1989

ಸಾಹಿತ್ಯ ಕುರಿತು

ಮೊದಲಕತೆ- “ಕತ್ತಲ ತಿರುವು” ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದು-1967
ದ್ಯಾವನೂರು-[ಕಥಾಸಂಕಲನ]-1973
ಒಡಲಾಳ-[ನೀಳ್ಗತೆ]- 1979
ಕುಸುಮಬಾಲೆ– [ಕಾದಂಬರಿ]-1984

ಸಮಗ್ರ ಕೃತಿ ಪ್ರಕಟಣೆ-1992 [ಲಂಕೇಶ್ ಪ್ರಕಾಶನ]
ಯಾರ ಜಪ್ತಿಗೂ ಸಿಗದ ನವಿಲುಗಳು-1999 [ಪರಿಷ್ಕೃತ ಮುದ್ರಣ 2013]ಮಹಾದೇವರ ಸಾಹಿತ್ಯ ಕುರಿತು ಅಭಿನವ ಪ್ರಕಾಶನ ವಿಶೇಷ ಸಂಚಿಕೆ
ಎದೆಗೆ ಬಿದ್ದ ಅಕ್ಷರ-[ಲೇಖನಗಳ ಸಂಕಲನ]- 2012 [ಇದುವರೆಗೆ 25 ಮುದ್ರಣ ಕಂಡಿದೆ]

ನೋಡು ಮತ್ತು ಕೂಡು-[ವಯಸ್ಕರ ಶಿಕ್ಷಣ ಪಠ್ಯ]

ಗಾಂಧಿ ಮತ್ತು ಮಾವೋ-[ಅನುವಾದ]

ಈಗ ಭಾರತ ಮಾತಾಡುತ್ತಿದೆ-2020

ಆರ್.ಎಸ್.ಎಸ್. ಆಳ ಮತ್ತು ಅಗಲ-2022 [ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ಹಾಗೂ ಇಂಗ್ಲಿಷ್, ಉರ್ದು, ಮರಾಠಿ, ತೆಲುಗು, ತಮಿಳು, ಮಲಯಾಳಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ]

ವಚನಪಾಲಕ ಶ್ರೀರಾಮನ ನ್ಯಾಯದ ಘಂಟೆ ಮತ್ತು ಚುನಾವಣಾ ಅಖಾಡದ ಕ್ಷೋಭೆ-2024

ದೇವನೂರ ಮಹಾದೇವ ಜೊತೆ ಮಾತುಕತೆ-ಆಯ್ದ ಸಂದರ್ಶನಗಳ ಸಂಕಲನ-2024

ಪ್ರಶಸ್ತಿ-ಗೌರವಗಳು

ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-1984

ಒಡಲಾಳಕ್ಕೆ ಕೊಲ್ಕತ್ತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ-1984

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಿರಾಕರಣೆ -1983

ಅಮೇರಿಕಾದ ಅಯೋವಾದಲ್ಲಿ ಅಂತರಾಷ್ಟ್ರೀಯ ಬರಹಗಾರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು-1989

ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1990 [ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕನ್ನಡಿಗ] [14.11.2015 ರಂದು ಹಿಂದಿರುಗಿಸಲಾಗಿದೆ. ]

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-1995

ಕರ್ನಾಟಕ ರಾಜ್ಯ ಅಂಬೇಡ್ಕರ್ ಪ್ರಶಸ್ತಿ

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸಾಹಿತ್ಯ ಸಾಧನೆಗಾಗಿ-2011   [14.11.2015 ರಂದು ಹಿಂದಿರುಗಿಸಲಾಗಿದೆ.]

ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ನಿರಾಕರಣೆ-2012

ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಪ್ರಜಾವಾಣಿ ರೂಪಿಸಿದ ವಿಶೇಷ ಸಂಚಿಕೆ ಸಂಪಾದಕರಾಗಿ -14.4.2012

ಅವಧಿ ವೆಬ್ ವತಿಯಿಂದ ಮಹಾದೇವರ ಕುರಿತ ವಿಶೇಷ ಸಂಚಿಕೆ-11.12.2012

ಅಲ್ಲಮಪ್ರಭುವಿನ ಹೆಸರಿನಲ್ಲಿ ನೀಡುವ ದಾವಣಗೆರೆಯ ಶಿವಯೋಗಾಶ್ರಮ ವಿರಕ್ತಮಠದ ಶೂನ್ಯಪೀಠ ಪ್ರಶಸ್ತಿ-2012

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ-2013

ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್-2013

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವಿ.ಎಮ್.ಇನಾಂದಾರ್ ಪ್ರಶಸ್ತಿ-2013

ಬೆಂಗಳೂರು ಸ್ಪೂರ್ತಿಧಾಮದ ಬೋಧಿವೃಕ್ಷ ಪ್ರಶಸ್ತಿ-2013

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ನಿರಾಕರಣೆ-2014 [ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ನಡೆಸುವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ತಾತ್ವಿಕ ಕಾರಣಗಳಿಗಾಗಿ ನಿರಾಕರಿಸಿದ್ದಾರೆ.]

ಕುವೆಂಪು ರಾಷ್ಟ್ರೀಯ ಪುರಸ್ಕಾರ 2016- 29.12.2016ರಂದು ಪ್ರದಾನ.

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ  ಶಿವರಾಮ ಕಾರಂತ ಪ್ರಶಸ್ತಿ -3.2.2018ರಂದು  ಪ್ರದಾನ.

ವೈಕಂ ಚಳವಳಿಯ ನೂರು ವರ್ಷಗಳ ನೆನಪಿಗಾಗಿ ತಮಿಳುನಾಡು ಸರ್ಕಾರದಿಂದ ಮೊದಲ ವೈಕಂ ಪ್ರಶಸ್ತಿ-2024

ಇತರೆ

ಜೆ.ಪಿ. ಸ್ವಾಗತ ಸಮಿತಿ ಅಧ್ಯಕ್ಷ

ದಲಿತ ಸಂಘರ್ಷ ಸಮಿತಿ ಸಂಚಾಲಕ

ಕನ್ನಡ ಕಾವಲು ಸಮಿತಿ ಸದಸ್ಯ

ಹಂಪಿ, ಕನ್ನಡ ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕ

ಕನ್ನಡಕ್ಕೆ ಅಂಬೇಡ್ಕರ್ ಅನುವಾದ ಸಂಪಾದಕ ಮಂಡಳಿ ಸದಸ್ಯ… ಇತ್ಯಾದಿ 

ಸಮುದಾಯದೊಂದಿಗೆ-ಕಳೆದ ಐದು ದಶಕಗಳಿಂದ ಕರ್ನಾಟಕ ಸಮಾಜವಾದಿ ಚಳವಳಿಯಲ್ಲಿ, ನಾಲ್ಕು ದಶಕಗಳಿಂದ ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ರೈತಸಂಘ ಮತ್ತು ಕೆಲ ದಲಿತ ಸಂಘಟನೆಗಳೊಡಗೂಡಿ 2005ರಲ್ಲಿ ಹುಟ್ಟಿಕೊಂಡ ಪರ್ಯಾಯ ರಾಜಕಾರಣದ ಪ್ರಯೋಗವಾದ ರಾಜಕೀಯ ಪಕ್ಷ ಸರ್ವೋದಯ ಕರ್ನಾಟಕದ ಅಧ್ಯಕ್ಷರಾಗಿದ್ದರು. 2016 ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಂಡ ವಿವಿಧ ಸಂಘಟನೆ ಮತ್ತು ಪ್ರಮುಖ ವ್ಯಕ್ತಿಗಳ ಒಕ್ಕೂಟ ‘ಜನಾಂದೋಲನಗಳ ಮಹಾಮೈತ್ರಿ’ಯಲ್ಲಿ ಮುಖ್ಯರು. 25.3.2017ರಲ್ಲಿ ಸರ್ವೋದಯ ಪಕ್ಷವು ರಾಷ್ಟ್ರೀಯ ಪಕ್ಷವಾದ ಸ್ವರಾಜ್ ಇಂಡಿಯಾ ಜೊತೆಗೆ ವಿಲೀನಗೊಂಡ ನಂತರ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.

ಅನುವಾದಗಳು
ಕುಸುಮಬಾಲೆ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಇಂಗ್ಲಿಷ್‌ಗೆ ಸೂಸಾನ್
ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ.
ಮರಾಠಿಗೆ  ರಾಜಶ್ರೀ ಜಯರಾಮ ಅವರಿಂದ,
ಬೆಂಗಾಲಿಗೆ ಮೀರಾ ಚಕ್ರವರ್ತಿಯವರಿಂದ,
ಮಲೆಯಾಳಿಗೆ ಸಿ.ಕಮಲಾದೇವಿಯವರಿಂದ ತರ್ಜುಮೆಗೊಂಡಿದೆ.

ಒಡಲಾಳ ಮತ್ತು ಕೆಲ ಸಣ್ಣ ಕಥೆಗಳು-
ಇಂಗ್ಲಿಷ್‌ಗೆ ಎ.ಕೆ.ರಾಮಾನುಜನ್ ಮತ್ತು ಮನುಶೆಟ್ಟಿ
ಒಡಲಾಳ ತೆಲುಗಿಗೆ ವೆಂಕಟಸುಬ್ಬಯ್ಯ
ಒಡಲಾಳ ತಮಿಳಿಗೆ ಪವನನ್- ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಣೆ