ಸಹ ಪಯಣ
-
ಗಿರಿಜನರ ಜ್ಞಾನವನ್ನು ನಾವು ಸ್ವಲ್ಪವೂ ಗಣನೆಗೆ ತೆಗೆದುಕೊಳ್ಳದೇ ಕಾಡಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಆ ನೆಲಮೂಲದ ನೈಸರ್ಗಿಕ ಜ್ಞಾನದ ಕಡೆಗೆ ನಮ್ಮ ಗಮನವನ್ನು ಸೆಳೆಯುವ ಜಿ.ಎಸ್.ಜಯದೇವ್ ಅವರ ಮನಮುಟ್ಟುವ ಲೇಖನ 19.1.2017ರ ಪ್ರಜಾವಾಣಿ ವಿಶ್ಲೇಷಣೆ ಅಂಕಣದಲ್ಲಿದೆ.
ಮುಂದೆ ಓದಿ -
ತುಂಬಾಡಿ ರಾಮಯ್ಯನವರ ‘ಮಣೆಗಾರ’ ಎಂಬ ಆತ್ಮಕತೆ ಕುರಿತು ನಟರಾಜ್ ಹುಳಿಯಾರ್ ಅವರು ಮಾರ್ಚ್ 22, 2000 ರಂದು ಬರೆದ ಈ ಲೇಖನ ಅವರ ‘ಗಾಳಿ ಬೆಳಕು’ [ಸಾಂಸ್ಕೃತಿಕ ಬರಹಗಳ]ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಈ ಲೇಖನ ….
» -
ಡಾ. ಬಂಜಗೆರೆ ಜಯಪ್ರಕಾಶ್ಅವರ ‘ಜಾತಿ ಮುಖ್ಯ ನಿಜ ; ಆದರೆ ಜಾತಿಯೊಂದೇ ನಿರ್ಣಾಯಕವಲ್ಲ’ ಎಂಬ ಲೇಖನ ಜನವರಿ 7, 2007 ಗೌರಿ ಲಂಕೇಶ್, ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಅವರ ‘ನಿಲ’ ವರ್ತಮಾನ ಮುಖಾಬಿಲೆ ಎಂಬ ಲೇಖನಗಳ ಸಂಕಲನದಲ್ಲಿ ದಾಖಲಾಗಿದೆ. ಅದು ನಮ್ಮ ಬನವಾಸಿಯ ಮರು ಓದಿಗಾಗಿ …..
ಮುಂದೆ ಓದಿ -
ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್.ನಾಗಮೋಹನದಾಸ್ ಅವರು ಮಾತೃಭಾಷಾ ಬಿಕ್ಕಟ್ಟು ಮತ್ತು ಪರಿಹಾರ ಕುರಿತು ಬರೆದ ಲೇಖನ ನಮ್ಮ ಸಹಪಯಣಕ್ಕೆ….
» -
31.12.2016ರ ಪ್ರಜಾವಾಣಿ ವಿಶ್ಲೇಷಣೆ ಅಂಕಣದಲ್ಲಿ ‘ಆಶಾ’ ಕಾರ್ಯಕರ್ತೆಯರು, ಅವರ ಕೆಲಸ, ಸಮಸ್ಯೆಗಳ ಕುರಿತ ವಿಶ್ಲೇಷಣೆ ರೂಪ ಹಾಸನ ಅವರಿಂದ.
ಮುಂದೆ ನೋಡಿ -
ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ‘ಭಾರತದಲ್ಲಿ ಮಹಿಳೆಯರಿಗೆ ಮೀಸಲಾತಿ’ ಎಂಬ ವಿಷಯದ ಬಗ್ಗೆ ಬರೆದ ಕೈ ಬರಹದ ಲೇಖನವನ್ನು ಅವರ ಮಗಳು ಚುಕ್ಕಿ ನಂಜುಂಡಸ್ವಾಮಿಯವರು ನೀಡಿದ್ದಾರೆ. ಅವರಿಗೆ ನಮ್ಮ ವಂದನೆಗಳು.
ಮುಂದೆ ಓದಿ -
ಕನ್ನಡಪ್ರಭದ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಅವರ 1.1.2017ರ ‘ಎಲ್ಲ ಬಲ್ಲವರಿಲ್ಲ’ ಅಂಕಣ ಮಾರ್ಮಿಕವಾಗಿದೆ, ಮನಸುಮುಟ್ಟುವಂತಿದೆ ಮತ್ತು ಮಾಧ್ಯಮ ಮಾಡಿಕೊಳ್ಳಬೇಕಾದ ಆತ್ಮಾವಲೋಕನಕ್ಕೆ ಕೈಗನ್ನಡಿಯಂತಿದೆ.
ಮುಂದೆ ನೋಡಿ -
ಯೋಜನೆಗಳ ಹೆಸರಿನಲ್ಲಿ ನಮ್ಮ ಆಡಳಿತಶಾಹಿ ಮತ್ತು ಅಧಿಕಾರಶಾಹಿ ಲೂಟಿ ಹೊಡೆದು, ಒಂದಿಷ್ಟು ಭಿಕ್ಷೆಯಂತೆ ನೀಡಿ ಜನರನ್ನು ಪ್ರಶ್ನೆ ಮಾಡದಂತೆ ಬಾಯ್ಮುಚ್ಚಿಸುತ್ತಿರುವ ವರ್ತಮಾನದ ನಿಜವಾದ ತಲ್ಲಣವನ್ನು ಆತಂಕ ಮತ್ತು ಎಚ್ಚರದಲ್ಲಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ ತಮ್ಮ 13.12.2016ರ ವಿಜಯಕರ್ನಾಟಕದ ಅಗೇಡಿ ಅಂಕಣದಲ್ಲಿ ಕೆ.ಪಿ.ಸುರೇಶ ಅವರು.
ಮುಂದೆ ಓದಿ -
ಹರೀಶ್ ಹಂದೆ ಬಡವರ ಪಾಲಿನ ನಿಜವಾದ ಬೆಳಕು. ಇನ್ನೂ ಇಂಜಿನೀಯರ್ ಓದುವಾಗಲೇ, ಗೆಳೆಯರೊಡಗೂಡಿ ಕೇವಲ 2000 ರೂಪಾಯಿಗಳಲ್ಲಿ ಬಡವರಿಗೆ ಸೌರವಿದ್ಯುತ್ ನೀಡಲು ಸೆಲ್ಕೋ ಇಂಡಿಯಾ ಕಂಪನಿ ಸ್ಥಾಪಿಸಿದ, ಇದುವರೆಗೆ ಎರಡು ಲಕ್ಷ ಬಡವರ ಮನೆಗಳಿಗೆ ಬೆಳಕು ನೀಡಿದ ಕಾರಣಕ್ಕೆ ಮ್ಯಾಗೆಸ್ಸೇ ಪ್ರಶಸ್ತಿ ಪಡೆದ, ಹರೀಶ್ ಹಂದೆ ಕುರಿತು 4.12.2016ರ ಪ್ರಜಾವಾಣಿಯ ಮುಕ್ತಛಂದ ಪುರವಣಿಯ ತಮ್ಮ ‘ಪುಸಾಫಿರ್’ ಅಂಕಣದಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ ಲೇಖಕ ಸತೀಶ್ ಚಪ್ಪರಿಕೆಯವರು. ಹರೀಶ್ ಹಂದೆಯವರೊಂದಿಗೆ ನಮ್ಮ ಸಹಪಯಣ ….
ಮುಂದೆ ಓದಿ -
ನೋಟುಗಳ ರದ್ಧತಿಯಿಂದ ಇಡೀ ಆರ್ಥಿಕ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮಗಳು ಒಂದೊಂದಾಗಿ ಈಗ ಗೋಚರಿಸುತ್ತಿವೆ. ಅದರಲ್ಲಿ ಮುಖ್ಯವಾದುದು ಗ್ರಾಮೀಣ ಅನೌಪಚಾರಿಕ ಆರ್ಥಿಕ ವ್ಯವಹಾರ ಮತ್ತು ಕೊಡುಕೊಳ್ಳುವಿಕೆಗಳ ಮೇಲೆ ಆದ ಪ್ರಹಾರ. ಸಹಕಾರಿ ಬಂಡವಾಳ ಮತ್ತು ಕೈ ಸಾಲಗಳೇ ಕೃಷಿ ವ್ಯವಹಾರದ ಆಧಾರಗಳು. ಅದು ಈಗ ಹೇಗೆ ಮುರಿದು ಬಿದ್ದಿದೆ ಎಂಬುದನ್ನು ಪರಿಣಾಮಕಾರಿಯಾಗಿ ಬರೆದಿದ್ದಾರೆ 29.11.2016ರ ವಿಜಯಕರ್ನಾಟಕದ ತಮ್ಮ ‘ಅಗೇಡಿ’ ಅಂಕಣದಲ್ಲಿ ಕೆ.ಪಿ.ಸುರೇಶ ಅವರು.
ಮುಂದೆ ಓದಿ