ಸಹ ಪಯಣ
-
ದಶಕಗಳಿಂದಲೇ ನೀರಿನ ಸಂಕಷ್ಟ ಪ್ರಾರಂಭವಾಗಿದ್ದು ಈಗ ಹಾಹಾಕಾರವೆದ್ದಿದೆ. ನೀರಿಲ್ಲದೆ ಯಾವ ಕೆಲಸವೂ ಪ್ರಾರಂಭವಾಗುವುದಿಲ್ಲವಾದ್ದರಿಂದ ಅದನ್ನೀಗ ಚಿನ್ನದಂತೆ ಜೋಪಾನ ಮಾಡಬೇಕಿದೆ. ಆ ಕುರಿತು ಮುರು ದಶಕಗಳಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ವೈಜ್ಞಾನಿಕ ಬರಹಗಾರ ಕೆ.ಎಸ್.ರವಿಕುಮಾರ್ ಅವರ ಈ ಲೇಖನ ಏಪ್ರಿಲ್ 2016 ರ ‘ಹೊಸತು’ ಮಾಸಿಕದಲ್ಲಿ ಪ್ರಕಟವಾಗಿದೆ. ನಮ್ಮ ಜಾಗೃತಿಗಾಗಿ ಮರು ಓದಿಗಾಗಿ …
ಮುಂದೆ ನೋಡಿ -
ಸರ್ಕಾರಗಳು ಯೋಜಿಸುವ ಮಹಿಳಾ ಉದ್ದೇಶಿತ ಆಯವ್ಯಯ ಎಂಬುದು ಹೇಗೆ ಅರ್ಥಹೀನವೂ ಮತ್ತು ಬಾಯ್ಮಾತಿನ ತಂತ್ರವೂ ಆಗಿ ಉಳಿದುಹೋಗುತ್ತಿದೆ ಎಂಬುದರೆಡೆಗೆ 7.3.2017 ರ ವಿಜಯಕರ್ನಾಟಕದ ತಮ್ಮ ‘ಅಗೇಡಿ’ ಅಂಕಣದ ಮೂಲಕ ಕೆ.ಪಿ.ಸುರೇಶ ಅವರು ವಿಶ್ಲೇಷಿಸಿದ್ದಾರೆ.
ಮುಂದೆ ಓದಿ -
21.2.2017 ರ ವಿಜಯಕರ್ನಾಟಕದ ಕೆ.ಪಿ.ಸುರೇಶ ಅವರ ಅಂಕಣ ‘ಅಗೇಡಿ’ಯಲ್ಲಿ ಈ ಬರಹವಿದೆ. ಕರ್ನಾಟಕದ ಮಹಿಳಾ ಸ್ವಸಹಾಯ ಸಂಘಗಳು ಈಗ ತಲುಪಿರುವ ಹಂತ, ಪಕ್ಕದ ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಇದೇ ಮಾದರಿಯ ಸಂಘಗಳು ಇಡೀ ಗ್ರಾಮೀಣಾಭಿವೃದ್ಧಿ, ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಆರೋಗ್ಯಕರ ಮಹಿಳಾ ಬದುಕನ್ನು ಹಾಗೂ ಗ್ರಾಮ ಭಾರತವನ್ನ ಕಟ್ಟುತ್ತಿರುವ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ.
ಮುಂದೆ ಓದಿ -
‘ನಿರಂಕುಶಮತಿಗೊಂದು ನೈತಿಕ ನೆಲೆ ಒದಗಿಸಿದ ಕವಿ’ ಎಂಬ ಪ್ರಸನ್ನ ಅವರ ಈ ಲೇಖನ ಪ್ರಜಾವಾಣಿಯ ಅವರ ಅಂಕಣ ‘ಸಂಭಾಷಣೆ’ಯಲ್ಲಿ ಪ್ರಕಟವಾಗಿದೆ. ನಿರಂಕುಶಮತಿಗಳಾಗಿ ಎಂದು ಕವಿ ಕುವೆಂಪು ಹೇಳಿದ ಧ್ಯೇಯ ವಾಕ್ಯವನ್ನು ಇಂದಿನ ಸಂದರ್ಭಕ್ಕ್ಕೆ ಅನ್ವಯಿಸಿ ಅರ್ಥಗರ್ಭಿತವಾಗಿ ವಿಶ್ಲೇಷಿಸಿದ್ದಾರೆ.
ಮುಂದೆ ಓದಿ -
ಪೃಥ್ವಿ ದತ್ತ ಚಂದ್ರ ಶೋಭಿ ಅವರ ಈ ಲೇಖನ 3.3.2017 ರ ಪ್ರಜಾವಾಣಿಯ ಅವರ ಅಂಕಣ ‘ನಿಜದನಿ’ ಯಲ್ಲಿ ಪ್ರಕಟವಾಗಿದೆ. ನೆರೆ ದೇಶಗಳ ದ್ವೇಷ, ಯುದ್ಧ, ಸಾವು -ನೋವುಗಳನ್ನು ನೋಡುವ ಬಗೆಯನ್ನು ಅರ್ಥಪೂರ್ಣವಾಗಿ ಬಿಡಿಸಿಟ್ಟಿದ್ದಾರೆ.
ಮುಂದೆ ಓದಿ -
ಪಿತೃಪ್ರಧಾನ ಭಾರತೀಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಬಿಕ್ಕಟ್ಟುಗಳನ್ನು ಆತ್ಮಹತ್ಯೆಯಾದ ರೈತ ಕುಟುಂಬದ ವಿಧವೆಯರ ದೃಷ್ಟಿಯಿಂದ ನೋಡಬೇಕು ಎಂದು ಒತ್ತಾಯಿಸುವ ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ರಂಜನಾ ಪಾಡಿ, ಮಾರ್ಚ್ 8ರ ‘ಮಹಿಳಾ ದಿನ’ ಕಾರ್ಯಕ್ರಮಕ್ಕೆಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು, 4.3.2017ರ ಪ್ರಜಾವಾಣಿ ‘ಭೂಮಿಕಾ’ ಪುರವಣಿಗಾಗಿ ಡಾ. ಎಚ್.ಎಸ್. ಅನುಪಮಾ ಮಾತನಾಡಿಸಿದ್ದಾರೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಓದಿಗಾಗಿ…
ಮುಂದೆ ಓದಿ -
ಜಯಂತ ಕಾಯ್ಕಿಣಿ ಅವರ ‘ಬೊಗಸೆಯಲ್ಲಿ ಮಳೆ’ ಅಂಕಣ ಬರಹಗಳ ಕೃತಿಯಲ್ಲಿ ಈ ಬರಹ ಇದೆ. ಇದು ಲೇಖಕರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುವುದರಿಂದ ಅದರೊಂದಿಗೆ ನಮ್ಮ ಸಹಪಯಣ …..
ಮುಂದೆ ಓದಿ -
ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಪಠ್ಯಕ್ಕಷ್ಟೇ ಸೀಮಿತವಾಗಿ ಅದು ನಮ್ಮೊಳಗಿನ ಭಾಗವಾಗಿ ಅರಳದಿರುವ ದುಸ್ಥಿತಿಯ ಕುರಿತು, ಇದಾವುದನ್ನೂ ನಮಗೆ ಒಳಗಿನಿಂದ ಕಲಿಸದ ಶಿಕ್ಷಣ ಕ್ಷೇತ್ರ ತಲುಪಿರುವ ಅಧೋಗತಿ ತನ್ಮೂಲಕ ಹದಗೆಡುತ್ತಿರುವ ಸಮಾಜದ ಬಗ್ಗೆ ಚಿಂತಕ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರು 25.2.2017ರ ಪ್ರಜಾವಾಣಿಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ.
ಮುಂದೆ ನೋಡಿ -
ಸಮಕಾಲೀನ ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ಎಸ್. ಮಂಜುನಾಥ್ [ಜೀವಯಾನದ ಮಂಜುನಾಥ್ ] ಇಂದು, 31.1.2017ರಂದು ಅನಾರೋಗ್ಯದ ಕಾರಣದಿಂದ ನಿಧನರಾದರು. ಅವರ ನೆನಪಿನಲ್ಲಿ ಅವರದೊಂದು ಪದ್ಯ ನಮ್ಮ ಮರು ಓದಿಗಾಗಿ….
ಮುಂದೆ ಓದಿ -
ಜನವರಿ 17,2017ರ `ದ ಹಿಂದೂ’ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟವಾದ ನೋಬೆಲ್ ಪ್ರಶಸ್ತಿ ವಿಜೇತ, ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ರವರ ಸಂದರ್ಶನದ ಕನ್ನಡ ಅನುವಾದ ಹಾಸನದ 21.1.2017 ರ ಜನತಾಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅನುವಾದಕರು : ಹೆಚ್.ಎ.ಕಿಶೋರ್ ಕುಮಾರ್, ಅಧ್ಯಕ್ಷರು, ಮಲೆನಾಡು ಜನಪರ ಹೋರಾಟ ಸಮಿತಿ, ಹಾಸನ
ಮುಂದೆ ಓದಿ