ಸಹ ಪಯಣ
-
ನೀರಿಲ್ಲದೆ ಕಂಗೆಟ್ಟ ಮಹಾರಾಷ್ಟ್ರ ರಾಜ್ಯದ 1,300 ಹಳ್ಳಿಗಳು ಈಗ ಮಳೆ ನೀರಿನ ಹರಿವಿಗೆ ತಡೆ ಒಡ್ಡಲು ಮೈಕೊಡವಿ ನಿಂತಿವೆ! ಏಪ್ರಿಲ್ 8ರಿಂದ ಇಷ್ಟೂ ಹಳ್ಳಿಗಳ ಕಾರ್ಯಪಡೆಗಳು ಹಾರೆ, ಬುಟ್ಟಿಗಳನ್ನೆತ್ತಿ ಶ್ರಮದಾನ ಆರಂಭಿಸಲಿವೆ. ಅದೂ ಏಕಕಾಲದಲ್ಲಿ! ಜನ ಉತ್ಸವೋಪಾದಿಯಲ್ಲಿ ಮನೆಮನೆಗಳಿಂದ ಹೊರಬಂದು ಕೆಲಸ ಮಾಡಲಿದ್ದಾರೆ…ಇದನ್ನು ಆಗು ಮಾಡಿಸಿದ ಪಾನಿ ಫೌಂಡೇಶನ್ ಕುರಿತು ಮನಮುಟ್ಟುವಂತೆ ನೀರಿನ ತಜ್ಞ ಶ್ರೀಪಡ್ರೆ ಅವರು 3.3.2017ರ ಪ್ರಜಾವಾಣಿಯಲ್ಲಿ ‘ನೀರ ನೆಮ್ಮದಿಯ ನಾಳೆ’ ವಿಶೇಷಕ್ಕಾಗಿ ಬರೆದಿದ್ದಾರೆ. ಜೊತೆಗೆ ಅಲ್ಲಿಯ ಕೆಲಸಗಳ ಸಮಗ್ರ ಚಿತ್ರಣ ನೀಡುವ ಒಂದು ಪರಿಣಾಮಕಾರಿ ಸಾಕ್ಷ್ಯಚಿತ್ರ ‘The Battle Against Drought’ ಕೂಡ ಇಲ್ಲಿದೆ.
ಮುಂದೆ ನೋಡಿ -
‘ಅರುಹು ಕುರುಹು’ ತ್ರೈಮಾಸಿಕದ ಮಾರ್ಚ್ -2017ರ ಮಹಿಳಾ ವಿಶೇಷಾಂಕ ‘ಮಹಿಳಾ ಸಬಲೀಕರಣವೆಂಬುದೇ ರಾಜಕಾರಣ’ ಸಂಕಲನದಲ್ಲಿ ಅದರ ಸಂಪಾದಕರು, ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಆದ ಡಾ.ಎಚ್.ಡಿ.ಪ್ರಶಾಂತ್ ಅವರ ಈ ಲೇಖನವಿದೆ.
ಮುಂದೆ ನೋಡಿ -
ಮದ್ಯ, ಮಾದಕ ಪದಾರ್ಥ ಹಾಗೂ ಹೊಗೆಸೊಪ್ಪಿನ ಹವ್ಯಾಸವೆಂಬುದು, ಇಂದು ಇಡೀ ಸಮಾಜವನ್ನೇ ಆವರಿಸಿರುವ ಪಿಡುಗಾಗಿದೆ. ವಿಶೇಷವಾಗಿ ಬಡ ಜನತೆಯನ್ನು ಆವರಿಸಿಕೊಂಡು ಕೊಲ್ಲುತ್ತಿರುವ ಪಿಡುಗಾಗಿದೆ. ಪಿಡುಗಿಗೆ ಒಳಗಾಗುವವರು ಹೆಚ್ಚಾಗಿ ಗಂಡಸರಾದರೆ ಅದರ ದುಷ್ಪರಿಣಾಮ ಅನುಭವಿಸುವವರು ಹೆಚ್ಚಾಗಿ ಹೆಂಗಸರು ಹಾಗೂ ಮಕ್ಕಳು. ಈ ಕುರಿತು 1.4.2017ರ ಪ್ರಜಾವಾಣಿಯ ತಮ್ಮ ‘ಸಂಭಾಷಣೆ’ ಅಂಕಣದಲ್ಲಿ ಪ್ರಸನ್ನ ಅವರು ಮನ ಮುಟ್ಟುವಂತೆ ಬರೆದಿದ್ದಾರೆ.
ಮುಂದೆ ನೋಡಿ -
ದಕ್ಷಿಣಾಯಣ ಕರ್ನಾಟಕದ ಪರವಾಗಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರ ಆಹ್ವಾನ ಮತ್ತು ದಕ್ಷಿಣಾಯಣದ ರಾಷ್ಟ್ರೀಯ ಕನ್ವಿನರ್ ಪ್ರೊ.ಗಣೇಶ್ ಎನ್. ದೇವಿಯವರು ಈ ಕುರಿತು ಬರೆದಿರುವ ಕಿರು ಟಿಪ್ಪಣಿ.. ಇದರೊಂದಿಗೆ ನಮ್ಮ ಸಹಪಯಣ …
ಮುಂದೆ ನೋಡಿ -
‘ಅರುಹು ಕುರುಹು’ ತ್ರೈ ಮಾಸಿಕದ ಮಹಿಳಾ ವಿಶೇಷ ಸಂಚಿಕೆ ಜನವರಿ-ಮಾರ್ಚ್-2017 ‘ಮಹಿಳಾ ಸಬಲೀಕರಣವೆಂಬುದೇ ರಾಜಕಾರಣ’ದಲ್ಲಿ ರೂಪ ಹಾಸನ ಅವರೊಂದಿಗೆ ಒಂದು ಸಂವಾದ. ಸಂವಾದಕರು -ಭಾರತಿ ಬಿಜಾಪುರ, ಕೆಂಚಪ್ಪ. ಸಂಚಿಕೆಯ ಅತಿಥಿ ಸಂಪಾದಕರು -ಡಾ. ಎಚ್.ಡಿ.ಪ್ರಶಾಂತ್ ಮತ್ತು ಡಾ. ಎಸ್. ಜಯಶ್ರೀ.
‘ಅರುಹು ಕುರುಹು’ ಸಂಚಿಕೆ ಬೇಕಿದ್ದವರು ಸಂಪಾದಕರ ದೂರವಾಣಿ ಸಂಖ್ಯೆ 9449972117, 9008798406 ಸಂಪರ್ಕಿಸಬಹುದು.
ಮುಂದೆ ಓದಿ -
ರಾಜಸ್ತಾನದ ಆಲ್ವರ್ ಶಹರದಿಂದ 65 ಕಿ.ಮೀ. ದೂರದಲ್ಲಿರುವ ಸಾಧಾರಣ ಗ್ರಾಮ ನಾಂಡೂ. ಪಶುಸಂಗೋಪನೆ ಮತ್ತು ಕೃಷಿಯೇ ಪ್ರಧಾನ ಜೀವನಾಧಾರ. ಇಂತಹ ಗ್ರಾಮದ ಜನ ದಶಕಗಳ ಹಿಂದೆ ಬತ್ತಿ ಹೋದ ನದಿಯೊಂದನ್ನು ಸದ್ದುಗದ್ದಲವಿಲ್ಲದೆ ಪುನರುಜ್ಜೀವಿತಗೊಳಿಸಿದ ಯಶಸ್ಸಿನ ಕತೆಯಿದು. ಇದನ್ನು ಪ್ರಜಾವಾಣಿ ವಿಶ್ವ ಜಲದಿನವಾದ 22.3.2017 ರಂದು ರೂಪಿಸಿದ ‘ನೀರ ನೆಮ್ಮದಿಯ ನಾಳೆ’ ಸಂಚಿಕೆಗಾಗಿ ಹಿರಿಯ ಪತ್ರಕರ್ತ ಡಿ.ಉಮಾಪತಿಯವರು ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದಾರೆ.
ಮುಂದೆ ಓದಿ -
ಕೊಪ್ಪಳದಲ್ಲಿ 8.3.2017 ರಂದು ನಡೆದ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಅಂತರಾಷ್ಟ್ರೀಯ ಮಹಿಳಾ ದಿನದ ಉದ್ಘಾಟನೆಯಲ್ಲಿ, ಮಹಿಳಾ ಹೋರಾಟಗಾರ್ತಿ,ರಂಜನಾ ಪಾಡಿ ಅವರು ಆಡಿದ ಮಾತುಗಳು.
ಮುಂದೆ ಓದಿ -
‘ಹೆಣ್ಣಾಗುವ’ ಅಪೂರ್ವ ರೂಪಾಂತರದ ಪ್ರಕ್ರಿಯೆ ಕುರಿತಂತೆ ಹಿರಿಯ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಅವರ ಅನುಭವದ ನಿರೂಪಣೆಯನ್ನು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರು 19.3.2017ರ ಪ್ರಜಾವಾಣಿಯ ಮುಕ್ತಛಂದ ಪುರವಣಿಯಲ್ಲಿ ಮಾಡಿದ್ದಾರೆ. . ‘ನಮ್ಮ ಮಕ್ಕಳಿಗೆ ನಾವು ಹೆಣ್ಣಾಗುವುದನ್ನು ಕಲಿಸದೇ ಇದ್ದರೆ ಅವರು ಹೆಣ್ಣೂ ಆಗುವುದಿಲ್ಲ. ಗಂಡೂ ಆಗುವುದಿಲ್ಲ’ ಎನ್ನುವ ಉಪಾಧ್ಯರ ಅನಿಸಿಕೆ, ಎಲ್ಲ ಪೋಷಕರನ್ನು ಉದ್ದೇಶಿಸಿ ಹೇಳಿದ ಕಿವಿಮಾತಿನಂತಿದೆ. ನಮ್ಮ ಓದಿಗಾಗಿ…
ಮುಂದೆ ಓದಿ -
ಮಹಿಳಾ ಉದ್ದೇಶಿತ ಆಯವ್ಯಯ-ಮಹಿಳೆಗೇನು ಬೇಕು?ಎಂಬ ರೂಪ ಹಾಸನ ಅವರ ಈ ಬರಹ 9.3.2017ರ ಪ್ರಜಾವಾಣಿಯ ‘ಸಂಗತ’ ವಿಭಾಗದಲ್ಲಿ ಪ್ರಕಟವಾಗಿದೆ
ಮುಂದೆ ಓದಿ -
ತಳಸಮುದಾಯಗಳಿಗೆ ಸೇರಿದ ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆ ‘ಖಬರ್ ಲಹರಿಯಾ’ ಕುರಿತು ಪತ್ರಕರ್ತ ಡಿ.ಉಮಾಪತಿ ಅವರು 8.3.2017ರ ಪ್ರಜಾವಾಣಿಯ ‘ಸಂಗತ’ದಲ್ಲಿ ವಿವರವಾಗಿ ಬರೆದಿದ್ದಾರೆ.
ಮುಂದೆ ಓದಿ