ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ ಬದನವಾಳುವಿನಲ್ಲಿ ಇದೆ ಏಪ್ರಿಲ್ ೧೯ರಂದು ಪ್ರಾರಂಭಿಸಲಿರುವ ಸತ್ಯಾಗ್ರಹಕ್ಕಾಗಿ ಪೂರ್ವ ತಯಾರಿ ಚಿಂತಕರಾದ ಪ್ರಸನ್ನ ಮತ್ತು ತಂಡದವರಿಂದ….ಶ್ರಮದಾನದ ಕೆಲವು ಚಿತ್ರಗಳು ಇಲ್ಲಿವೆ. ಗಾಂಧೀಜಿಯ ಚರಕ ಇಲ್ಲಿ ಮರು ಸ್ಥಾಪನೆಯಾಗಬಹುದೆ? ಚಿತ್ರ ಕೃಪೆ- ನೇತ್ರರಾಜು, ನಮ್ಮ ಬನವಾಸಿಗೆ ಹಂಚಿದವರು ”ಫ್ರೆಂಡ್ಸ್ ಆಫ್ ಹ್ಯಾಂಡ್ ಲೂಮ್ ” ಬನವಾಸಿಗರು


    ಚಿತ್ರಗಳನ್ನು ಇಲ್ಲಿ ನೋಡಿ
  • ನಿಸರ್ಗ ಕೇಂದ್ರಿತ ಅಭಿವೃದ್ಧಿಯ ಚಿಂತನೆಗೆ ಒತ್ತಡ ಹೇರುವ ಸಲುವಾಗಿ ಚಿಂತಕ ಪ್ರಸನ್ನ ಹಾಗೂ ಸಮಾನ ಮನಸ್ಕ ಗೆಳೆಯರು ಸೇರಿ, ಇದೆ 19 ಏಪ್ರಿಲ್ 2015ರಿಂದ ನಂಜನಗೂಡು ತಾಲೂಕು ಬದನವಾಳುವಿನ ಖಾದಿ ಹಾಗೂ ಗ್ರಾಮೋದ್ಯೋಗ ಕೇಂದ್ರದಲ್ಲಿ ಸತ್ಯಾಗ್ರಹವನ್ನು ಪ್ರಾರಂಭಿಸಲಿದ್ದಾರೆ. ಈ ಕುರಿತ ಪ್ರಸನ್ನ ಅವರ ಪ್ರಜಾವಾಣಿಯ ಲೇಖನ ಇಲ್ಲಿದೆ. ಸುಸ್ಥಿರ ಬದುಕಿನ ಆಶಾವಾದದೊಂದಿಗೆ ನಾವೂ ಅವರೊಂದಿಗೆ ಹೆಜ್ಜೆ ಇಟ್ಟಿದ್ದೇವೆ….

    ಬನವಾಸಿಗರು


    ಮುಂದೆ ನೋಡಿ
  • ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸೃಜನಶೀಲ ಬರವಣಿಗೆ ಮತ್ತು ಕಲೆಗೆ ವೇದಿಕೆಯಾಗಿರುವ ”ಶಾಮಂತಿ” ಎಂಬ ಪತ್ರಿಕೆ ಸರ್ಕಾರಿ ಶಾಲೆಯೊಂದು ಹೇಗೆ ಮಕ್ಕಳ ನಾಡಿ ಹಿಡಿದು ಕೆಲಸ ಮಾಡಬಹುದು ಎಂಬುದಕ್ಕೊಂದು ಉದಾಹರಣೆ. ಅದರ ಬೆನ್ನೆಲುಬಾದ ಕಲಾಧರ್ ಅವರಂತವರು ಮಕ್ಕಳ ಶಾಲೆಯ ಮೇಷ್ಟ್ರು ಹೇಗಿರಬೇಕು ಎಂಬುದಕ್ಕೊಂದು ಮಾದರಿ. ಇವರಂಥವರೊಂದಿಗೆ ನಾವಿದ್ದೇವೆ. ಮಕ್ಕಳ ಚಿಲಿಪಿಲಿಗೆ ದನಿಯಾಗಿದ್ದೇವೆ. ಪತ್ರಿಕೆಗೆ ಚಂದಾದಾರರಾಗ ಬಯಸುವವರು 9900695142 ಸಂಪರ್ಕಿಸಿ…

    ಬನವಾಸಿಗರು


    ಹೆಚ್ಚಿನ ವಿವರಗಳಿಗಾಗಿ
  • ನಂಜನಗೂಡು ತಾಲೂಕಿನ ಹೆಗ್ಗಡೆಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ‘ಅಳ್ಳಿಮರ’ ವೆಂಬ ಮಕ್ಕಳ ಪತ್ರಿಕೆ, ಮಕ್ಕಳೆಂಬ ಭವಿಷ್ಯದ ಕನಸುಗಳಿಗೇ ಬಣ್ಣ ಬಣ್ಣದ ಕನಸಿನ ಲೋಕದ ಪರಿಚಯ ಮಾಡಿಸುತ್ತ, ಮಕ್ಕಳಿಗೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಅವರ ಬೆನ್ನಿಗೆ ನಿಂತು ಪತ್ರಿಕೆಯ ಕನಸನ್ನು ಸಾಕಾರಗೊಳಿಸುತ್ತಿರುವವರು ಸಂತೋಷ್ ಗುಡ್ಡಿಯಂಗಡಿ ಎಂಬ ಆ ಶಾಲೆಯ ನಾಟಕದ ಮೇಷ್ಟ್ರು. ಅವರ ಪ್ರಯತ್ನಕ್ಕೆ, ಮಕ್ಕಳ ಮಿಡಿತಗಳಿಗೆ ನಮ್ಮ ಸಲಾಂ. ಜೊತೆಗೆ ನಾವಿದ್ದೇವೆ ಎಂಬ ಸಾಥ್…. ಪತ್ರಿಕೆಗೆ ಚಂದಾದಾರರಾಗ ಬಯಸುವವರು 9449331551 ಸಂಪರ್ಕಿಸಿ…
    ಬನವಾಸಿಗರು


    ಮುಂದೆ ನೋಡಿ
  • ವಿಜಯ ಕರ್ನಾಟಕ ಸಂಪಾದಕನ ಬೈಠಕ್‌ ನಲ್ಲಿ ಮಾತೃಭಾಷೆ ಕುರಿತು-ಸುಗತ ಶ್ರೀನಿವಾಸರಾಜು ಅವರು 15.2.2015ರಂದು ಬರೆದ ಲೇಖನ ”ತಾಯ್ನುಡಿ ದಿನ ಮತ್ತು ದೇವನೂರರ ಮಾತಿನ ಸುತ್ತ”
    ಭಾಷಾ ಮಾಧ್ಯಮದ ಕುರಿತು ಎದ್ದಿರುವ ಪ್ರಶ್ನೆಗಳನ್ನಿಟ್ಟುಕೊಂಡು ಅದರ ಸುತ್ತ ಚರ್ಚೆ ಬೆಳೆಸಿದ ಲೇಖನವಾಗಿ ಮುಖ್ಯವಾದುದಾಗಿದೆ.
    ಬನವಾಸಿಗರು


    ಮುಂದೆ ಓದಿ
  • ಕ್ರಿಯಾಶೀಲ ವ್ಯಕ್ತಿತ್ವದ, ಚಿಂತಕಿ, ಲೇಖಕಿ ವಸು ಮಳಲಿ ಮೊನ್ನೆಯಷ್ಟೇ ನಮ್ಮನ್ನಗಲಿ ಒಂದು ನಿರ್ವಾತವನ್ನುಳಿಸಿ ಹೋಗಿದ್ದಾರೆ. ಅವರಿಗಾಗಿ ಮಿಡಿಯುತ್ತಾ …. ಪ್ರಜಾವಾಣಿಯ ಅವರ ಅಂಕಣ ‘ಕಳ್ಳುಬಳ್ಳಿ’ ಯಲ್ಲಿ ಪ್ರಕಟವಾದ ‘ಕೆಂಪು ದೀಪ ಉರಿಸುವವರು’ ಎಂಬ ಈ ಲೇಖನ ಮರು ಓದಿಗಾಗಿ. -ಬನವಾಸಿಗರು

    ಬನವಾಸಿಗರು


    ಮುಂದೆ ಓದಿ
  • 14.4.2012 ರ ಅಂಬೇಡ್ಕರ್ ಜಯಂತಿ ಪ್ರಯುಕ್ತ ”ಪ್ರಜಾವಾಣಿ” ಪ್ರಕಟಿಸಿದ ದಲಿತ ಪ್ರಜ್ಞೆಯ ವಿಶೇಷ ಲೇಖನಗಳ ಸಂಕಲನ ”ಸಮಾನತೆ ಕನಸನ್ನು ಮತ್ತೆ ಕಾಣುತ್ತ…..” ದಲಿತ ಪ್ರಜ್ಞೆಯ ವಿಭಿನ್ನ ನೋಟಗಳು ಹಲವು ಬರಹಗಾರರಿಂದ…..
    ಸಂಗ್ರಹ-ಡಾ.ಎಸ್.ತುಕಾರಾಮ್ ಮತ್ತು ಡಾ.ಎಸ್.ನರೇಂದ್ರಕುಮಾರ್
    ಮುಖಪುಟ ಮತ್ತು ಒಳಪುಟಗಳ ಚಿತ್ರಗಳು -ಪ.ಸ.ಕುಮಾರ್
    ಪ್ರಕಾಶಕರು- ಬೆಟ್ಟಯ್ಯ ಕೋಟೆ, ದಲಿತ ಸಂಘರ್ಷ ಸಮಿತಿ, ಜಿಲ್ಲಾ ಘಟಕ, ಮೈಸೂರು,
    ಸಂಪರ್ಕಕ್ಕೆ-9448402310

    ಬನವಾಸಿಗರು


    ಮುಂದೆ ನೋಡಿ
  • ಭೂ ಸ್ವಾಧೀನ ಮಸೂದೆ ತಿದ್ದುಪಡಿ ವಿರೋಧಿ ಸಮಿತಿಯ ಈ ಕರಪತ್ರದ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸುವ ವ್ಯಕ್ತಿ /ಸಂಘಟನೆಗಳು ಈ ಕರಪತ್ರವನ್ನು ಯಥಾವತ್ತಾಗಿ ತಮ್ಮ ಅಥವಾ ತಮ್ಮ ಸಂಘಟನೆಯ ಹೆಸರಿನಲ್ಲಿ ಪ್ರಕಟಿಸಿ ಹಂಚಲು ಅನುಮತಿ ನೀಡಲಾಗಿದೆ.


    ಮುಂದೆ ಓದಿ
  • ದೇವನೂರ ಮಹಾದೇವ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಬರೆದ ಬಹಿರಂಗ ಪತ್ರ ಈಗ ಕಿರು ಹೊತ್ತಿಗೆಯಾಗಿ ”ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ” ಸಂಘಟನೆಯಿಂದ ಸಮ್ಮೇಳನದಲ್ಲಿ ಹಂಚಲ್ಪಡುತ್ತಿದೆ. ಈ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸುವ ವ್ಯಕ್ತಿ / ಸಂಘಟನೆಗಳು ಈ ಕಿರುಹೊತ್ತಿಗೆಯನ್ನು ಯಥಾವತ್ತಾಗಿ ತಮ್ಮ ಅಥವಾ ತಮ್ಮ ಸಂಘಟನೆಯ ಹೆಸರಿನಲ್ಲಿ ಪ್ರಕಟಿಸಿ ಹಂಚಲು ದೇವನೂರು ಒಪ್ಪಿಗೆ ನೀಡಿದ್ದಾರೆ.


    ಹೆಚ್ಚಿನ ವಿವರಗಳಿಗಾಗಿ
  • ರೂಪ ಹಾಸನ ಅವರು 26 ಜನವರಿ 2014ರ ಗಣರಾಜ್ಯೋತ್ಸವದಂದು ವಿಜಯಕರ್ನಾಟಕಕ್ಕಾಗಿ ಮಾಡಿದ ಎಸ್.ಆರ್.ಹಿರೇಮಠ ಅವರ ವಿಶೇಷ ಸಂದರ್ಶನ.
    ಈ ವಿಶೇಷ ಮಾತುಕತೆ ಅವರ ವ್ಯಕ್ತಿತ್ವ ಮತ್ತು ಖಚಿತ ನಿಲುವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನದ ಜೊತೆಗೆ ಯುವಜನತೆಗೆ ಒಂದು ಜ್ವಲಂತ ಮಾದರಿಯೂ ಆಗಿದೆ ಎಂಬ ನಂಬುಗೆ ನಮ್ಮದು

    ಬನವಾಸಿಗರು


    ಮುಂದೆ ಓದಿ