ಸಹ ಪಯಣ
-
ಮೈಸೂರಿನಲ್ಲಿ 20015ರ ಸೆಪ್ಟೆಂಬರ್ 11 ಮತ್ತು 12 ರಂದು ನಡೆದ ಜನಸಂಗ್ರಾಮ ಪರಿಷತ್ ನ 2ನೆಯ ರಾಜ್ಯ ಮಟ್ಟದ ಸಮಾವೇಶದ ಆಂದೋಲನ ಪತ್ರಿಕಾ ವರದಿ. ನಾಡಿನ ಭ್ರಷ್ಟಾಚಾರ ವಿರೋಧಿ ಆಂದೋಲನವಾದ ಜನ ಸಂಗ್ರಾಮ ಪರಿಷತ್ ನ ಧನಾತ್ಮಕ ನಡೆಯೊಂದಿಗೆ ನಮ್ಮ ಸಹಪಯಣ. ಬನವಾಸಿಗರು
ಮುಂದೆ ಓದಿ -
‘ಮಾರುಕಟ್ಟೆ ಆರ್ಥಿಕ ವಿಜ್ಞಾನ : ಶಾಲಾ ಶಿಕ್ಷಣ ಮತ್ತು ಭಾಷೆ’- ಎಂಬ ಡಾ.ಎಚ್.ಡಿ.ಪ್ರಶಾಂತ್ ಅವರ ಲೇಖನವು ಮಾರುಕಟ್ಟೆ ಆಧಾರಿತ ಅಭಿವೃದ್ಧಿ ಪರಿಕಲ್ಪನೆಗಳು ಮೂಲಭೂತ ಶಿಕ್ಷಣ, ಮತ್ತು ಮಾತೃಭಾಷೆಯ ಉಳಿವಿನ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಳಸ್ಪರ್ಶಿಯಾಗಿ ವಿವೇಚಿಸುತ್ತದೆ. ಜುಲೈ ‘ಸಂವಾದ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ನಮ್ಮ ಓದಿಗಾಗಿ.
ಬನವಾಸಿಗರು
ಮುಂದೆ ಓದಿ -
ಜಿ ಡಿ ಪಿ ಕುರಿತು ಈಗ ಇರುವ ಸಿದ್ಧ ವಿವರಣೆಗೆ ವಿರುದ್ಧವಾಗಿ ಅದರ ಮೂಲ ರೂಪದಲ್ಲಿ ಅದರ ಸ್ವರೂಪವೇನು ಎಂಬುದನ್ನು ಅತ್ಯಂತ ಸರಳವಾಗಿ 27.8.2015ರ ಕನ್ನಡಪ್ರಭದಲ್ಲಿ ಅಜಿತ್ ಪಿಳ್ಳೈ ಅವರು ವಿವರಿಸಿದ್ದಾರೆ.
ಮುಂದೆ ಓದಿ -
08/26/2015 ರ ಪ್ರಜಾವಾಣಿ ಅಂಕಣ “ಈಶಾನ್ಯ ದಿಕ್ಕಿನಿಂದ”ದಲ್ಲಿ ಸುದೇಶ್ ದೊಡ್ಡಪಾಳ್ಯ ಅವರು ”ಪ್ರಿಯ ಗುರುಗಳೆ, ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು? ” ಎಂಬ ಬರಹದಲ್ಲಿ ನಿಜವಾದ ಶಿಕ್ಷಕರು ಯಾರು ಎಂಬುದನ್ನು ಎತ್ತಿ ಹಿಡಿದಿದ್ದಾರೆ. ಇದನ್ನು ಓದಿ ನಮ್ಮ ಶಿಕ್ಷಕ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬ ಆಶಾವಾದದೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೇವೆ.
-ಬನವಾಸಿಗರು
ಮುಂದೆ ಓದಿ -
ಪ್ರಜಾವಾಣಿ 13.8.2015ರ ನಾಗೇಶ್ ಹೆಗಡೆ ಅವರ ವಿಜ್ಞಾನ ವಿಶೇಷ ಅಂಕಣ ಅವ್ಯಾಹತವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗೆ ನೈಜ ಕಾರಣಗಳನ್ನು ಹುಡುಕಲು ಪ್ರಯತ್ನಿಸಿದ ಮುಖ್ಯವಾದ ಬರಹವಾಗಿದೆ.
ಮುಂದೆ ಓದಿ -
20.4.2015 ರ ಪ್ರಜಾವಾಣಿಯ ಸುದೇಶ ದೊಡ್ಡಪಾಳ್ಯರ ಅಂಕಣ ಈಶಾನ್ಯ ದಿಕ್ಕಿನಿಂದ, ಚಂದಮ್ಮ ಗೋಳಾ ಎಂಬ ದಲಿತ ಬಡ ಹೆಣ್ಣುಮಗಳ ಸಂಘಟಿತ ಪ್ರಯತ್ನದಿಂದ ಹಳ್ಳಿಯ ಕೆರೆಗೆ ನೀರು ತುಂಬಿಸಿದ ಪ್ರೇರಕ ಕಥೆಯನ್ನು ಹೇಳುತ್ತದೆ. ಪ್ರತಿ ಹಳ್ಳಿಯಲ್ಲೂ ಇಂತಹ ಆತ್ಮವಿಶ್ವಾಸದ, ತನ್ನೂರಿನ ಜನರಿಗಾಗಿ ಮಿಡಿವ ಹೃದಯದ ಹೆಣ್ಣು ಮಗಳೊಬ್ಬಳು ಇದ್ದರೆ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದರಲ್ಲಿ ಸಂದೇಹವೇ ಇಲ್ಲವೆನಿಸುತ್ತದೆ.
-ಬನವಾಸಿಗರು
ಮುಂದೆ ನೋಡಿ -
24.6.2015 ರ ಪ್ರಜಾವಾಣಿ ‘ಸಂಗತ’ ದಲ್ಲಿ ತುಮಕೂರು ವಿಶ್ವವಿದ್ಯಾಲಯದ ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವಿಭಾಗ ಮುಖ್ಯಸ್ಥ, ನಿತ್ಯಾನಂದ ಬಿ. ಶೆಟ್ಟಿಯವರು ‘ಅನ್ನಭಾಗ್ಯ’ ದ ವಿಭಿನ್ನ ಚಿತ್ರಣಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.ಆ ಲೇಖನದ ಪೂರ್ಣರೂಪ ಇಲ್ಲಿದೆ. ಹಸಿವಿನ ಕುರಿತು ನಾವು ಮಾತಾಡುವ ಮೊದಲು ಅದರ ಸಂಕಟ ಮತ್ತು ವಾಸ್ತವ ಹೇಗಿರಬಹುದು ಎಂಬುದು ನಮ್ಮ ಕಣ್ಣ ಮುಂದೆ ಬರಲೆಂಬ ಆಶಯದೊಂದಿಗೆ……
-ಬನವಾಸಿಗರು
ಮುಂದೆ ಓದಿ -
ಬನ್ನೂರು ಕೃಷ್ಣಪ್ಪ ಅವರು ನೈಸರ್ಗಿಕ ಕೃಷಿಯಲ್ಲಿ ತಪಸ್ವಿಯಂತೆ ತಮ್ಮನ್ನು ತೊಡಗಿಸಿಕೊಂಡು ಭೂಮಿ ಪ್ರೀತಿಯನ್ನು ಸಿದ್ಧಿಸಿಕೊಂಡವರು. ಆ ಕುರಿತ ಪ್ರಜಾವಾಣಿ ಹಾಗೂ ವಿಜಯ ಕರ್ನಾಟಕದ ಎರಡು ವರದಿಗಳು ರಾಸಾಯನಿಕಗಳನ್ನು ಬಳಸಿ, ಭೂಮಿ ಬರಡು ಮಾಡಿಕೊಂಡು ಪರಿತಪಿಸುತ್ತಿರುವ ರೈತರ ಕಣ್ಣು ತೆರೆಸುವಂತಿದೆ. ನಮ್ಮ ರೈತರಿಗೆ ಸ್ಪೂರ್ತಿಯಾಗಬಹುದೆಂದು ವರದಿಗಳನ್ನು ಇಲ್ಲಿ ನೀಡುತ್ತಿದ್ದೇವೆ. ದೇವನೂರ ಮಹಾದೇವ ಅವರೂ ತಮ್ಮ ಸಹಜ ಕೃಷಿಗೆ ಬನ್ನೂರು ಕೃಷ್ಣಪ್ಪ ಅವರಿಂದ ಮಾರ್ಗದರ್ಶನ ಪಡೆದು ಕೊಳ್ಳುತ್ತಿರುತ್ತಾರೆ. ಈ ಸಹಜ ಕೃಷಿಗೆ ಪೂರಕವಾದ ‘ಈಗಲಾದರೂ ಬೆಳಕಿನ ಬೇಸಾಯದತ್ತ’ ಎಂಬ ಮಹಾದೇವರ ಲೇಖನ ‘ಜೀವತಂತು’ ವಿಭಾಗದಲ್ಲಿದೆ.
ಬನವಾಸಿಗರು
ಮುಂದೆ ಓದಿ -
ಡಾ. ಜಿ.ಎನ್.ಮೋಹನ್ ಕುಮಾರ್ ಅವರು ಆಫ್ರಿಕಾದ ”ಯಕೋಬಾ ಸವಡೋಗೋ” ಕುರಿತು 15.6.2015 ರಂದು ವಿಜಯ ಕರ್ನಾಟಕಕ್ಕೆ ಬರೆದ ಲೇಖನ, ”ಮರುಭೂಮಿಗೆ ವನದೇವಿಯನ್ನು ಕರೆ ತಂದ ಧೀಮಂತ” ಭಾರತದ ಎರಡನೆಯ ಮರುಭೂಮಿಯಾಗುತ್ತಿರುವ ಕರ್ನಾಟಕದ ಕಣ್ಣು ತೆರೆಸುವಂತಿದೆ. ಅಲ್ಲಿ ಸಾಧ್ಯವಾದುದು ಇಲ್ಲಿ ಸಾಧ್ಯವಾಗದೆ? ಮಾಡುವ ಮನಸುಗಳು ಬೇಕಷ್ಟೇ … ಬನವಾಸಿಗರು
ಮುಂದೆ ನೋಡಿ -
ನಟರಾಜ್ ಹುಳಿಯಾರ್ ಅವರ 10.6.2015ರ “ಈ ಸಲದ ಪಂಚಾಯಿತಿಯ ಬಣ್ಣವೇ ಬೇರೆ!” ಪ್ರಜಾವಾಣಿ ‘ಕನ್ನಡಿ’ ಅಂಕಣ ಬರಹ ಕರ್ನಾಟಕದ ಗ್ರಾಮ ಪಂಚಾಯತ್ ಚುನಾವಣೆಗಳ ಫಲಿತಾಂಶ ಹೊರ ಬಿದ್ದು ಅರ್ಧಕ್ಕೂ ಹೆಚ್ಚು ಮಹಿಳೆಯರು ಅಧಿಕಾರ ಹಿಡಿದಿರುವಾಗ, ಅವರು ಮಾಡಬಹುದಾದ ಕೆಲಸಕ್ಕೆ ಒಂದು ಆಶಾದಾಯಕ ನೀಲಿ ನಕಾಶೆ ಹಾಕಿಕೊಟ್ಟಿದೆ. ಈ ರೀತಿಯಲ್ಲಿ ಹಳ್ಳಿಗಳ ಚಿತ್ರಣ ಬದಲಾಗಲೆಂಬ ಆಶಯದೊಂದಿಗೆ…
ಬನವಾಸಿಗರು
ಮುಂದೆ ಓದಿ