ಸಹ ಪಯಣ
-
ಬಡತನ ಮತ್ತು ಅಭಿವೃದ್ಧಿ ಕಣ್ಣಿಗೆ ಕಾಣದ ಒಂದು ಅಂತರ್ ಸಂಬಂಧವನ್ನು ಹೊಂದಿವೆ. ಅದನ್ನು ತಮ್ಮ ಲಾಭಕ್ಕಾಗಿ ರಾಜಕೀಯಗೊಳಿಸುವ ನಮ್ಮನ್ನಾಳುವ ಪ್ರಭುಗಳು ಬಡವರನ್ನು ಹೇಗೆ ತಮ್ಮ ಕಾಲ್ಚೆಂಡುಗಳಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು 19.12.2015ರ ಕನ್ನಡಪ್ರಭದ ತಮ್ಮ ಅಂಕಣದಲ್ಲಿ ವಿನಯಾ ಒಕ್ಕುಂದ ಅವರು ವಿವರವಾಗಿ ವಿಶ್ಲೇಷಿಸಿದ್ದಾರೆ.
ಬನವಾಸಿಗರು
ಮುಂದೆ ಓದಿ -
ತೀವ್ರ ಹವಾಮಾನ ವೈಪರಿತ್ಯದ ಹಿಂದಿರುವ ಬಂಡವಾಳಶಾಹಿ ದಾಹ, ಅದರಲ್ಲಿ ಭಾರತದ ಪಾತ್ರ, ಮುಂದಿನ ಹೆಜ್ಜೆಯ ಪರಿಣಾಮ ಮತ್ತು ಈ ಎಲ್ಲಾ ಅಭಿವೃದ್ಧಿಯೂ ಬಡವರನ್ನು ಅಡಿಪಾಯವಾಗಿರಿಸಿ ಕಟ್ಟಲಾದ ಭವ್ಯ ಬಂಗಲೆ ಎಂಬುದನ್ನು ”ಬಡವರ ಹೆಗಲೇರಿ ಭವ್ಯ ಭಾರತ” ಎಂಬ ತಮ್ಮ ಪ್ರಜಾವಾಣಿ 3.12.2015ರ ವಿಜ್ಞಾನ ವಿಶೇಷ ಅಂಕಣದಲ್ಲಿ ನಾಗೇಶ ಹೆಗಡೆ ಮನತಟ್ಟುವಂತೆ ವಿವರಿಸಿದ್ದಾರೆ.
ಜೊತೆಗೆ ಇದಕ್ಕೆ ಪೂರಕವಾದ ‘ಕಪ್ಪೆ ಅಲ್ಲ, ಮನುಷ್ಯನ ಕತೆ’ ಕೂಡ ಇದೆ.
ಮುಂದೆ ಓದಿ -
ಇದು ಎಲ್ಲವನ್ನೂ ವ್ಯಾಪಾರೀ ದೃಷ್ಟಿಯಿಂದ ನೋಡುವ ಕಾಲ. ನೋವು ಸಂಕಟಗಳೂ ಇಲ್ಲಿ ಬಿಕರಿಗೆ ಬಿದ್ದಿವೆ. ಅದನ್ನು ಅನುಭವಿಸುವವರೂ ಪ್ರಭುತ್ವ, ಬಂಡವಾಳಶಾಹಿ ಮತ್ತು ದಲ್ಲಾಳಿಗಳ ಕೈಯಲ್ಲಿ ಗೊಂಬೆಗಳಾಗಿ ಆಡುವ ಸ್ಥಿತಿಯನ್ನು ರಾಜಲಕ್ಷ್ಮಿ ಕೋಡಿಬೆಟ್ಟು ಅವರು 29.11.2015ರ ಪ್ರಜಾವಾಣಿ ಮುಕ್ತಛಂದ ಪುರವಣಿಯಲ್ಲಿ ಮನೋಜ್ಞವಾಗಿ ಬಿಚ್ಚಿಟ್ಟಿದ್ದಾರೆ.
ಮುಂದೆ ಓದಿ -
ಎಲ್ಲಾ ಕ್ಷೇತ್ರಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಕಾರ್ಪೊರೇಟ್ ವಲಯ ಇದೀಗ ಪಂಚಾಯತ್ ಗಳೆಡೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿ ನುಂಗಲೆತ್ನಿಸುತ್ತಿರುವುದನ್ನು ಒಂದು ಉದಾಹರಣೆಯ ಮೂಲಕ ಕೆ.ಪಿ.ಸುರೇಶ ಅವರು ಮನಸು ತಟ್ಟುವಂತೆ 17.11.2015ರ ವಿಜಯ ಕರ್ನಾಟಕದ ತಮ್ಮ ಅಂಕಣದಲ್ಲಿ ಹಿಡಿದಿಟ್ಟಿದ್ದಾರೆ.
ಮುಂದೆ ಓದಿ -
ಪ್ರಸ್ತುತ ಗ್ರೀಸ್ ದೇಶ ಎದುರಿಸುತ್ತಿರುವ ಆರ್ಥಿ ಕ ಕುಸಿತ, ತನ್ಮೂಲಕ ಜನಮಾನಸದಲ್ಲಿ ಉಂಟಾಗಿರುವ ಅಲ್ಲೋಲಕಲ್ಲೋಲಗಳ ಕುರಿತು ತಮ್ಮ ಈ ಲೇಖನದಲ್ಲಿ ಜಿ.ಎನ್. ನಾಗರಾಜ್ ಅವರು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಮುಂದೆ ಓದಿ -
10/29/2015 ರ ಪ್ರಜಾವಾಣಿಯ ತಮ್ಮ ಈ ಲೇಖನದಲ್ಲಿ ಪ್ರಸನ್ನ ಅವರು ಭಾರತದ ಸಂದರ್ಭದಲ್ಲಿ ಹಳ್ಳಿಗಳ ದುಃಸ್ಥಿತಿಗೆ ಕಾರಣಗಳನ್ನು ಮನೋಜ್ಞವಾಗಿ ವಿಶ್ಲೇಷಣೆ ಮಾಡಿದ್ದಾರೆ.
ಮುಂದೆ ಓದಿ -
2015 ರ ಅಕ್ಟೋಬರ್ 28 ರಂದು ವಿಜಯಕರ್ನಾಟಕದಲ್ಲಿ ಪ್ರಕಟವಾದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಕುರಿತ ವಿ.ಪಿ. ನಿರಂಜನಾಧ್ಯರ ಲೇಖನ ಈ ನೀತಿ ಒಳಗೊಳ್ಳಬೇಕಾದ ಮುಖ್ಯ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.
ಮುಂದೆ ಓದಿ -
ಮರೀಚಿಕೆಯ ಕೂಪದಲ್ಲಿ ‘ಕಬ್ಬಿಣದ ತ್ರಿಕೋನ’-ನಾಗೇಶ್ ಹೆಗಡೆಯವರು 21.10.2015ರ ಪ್ರಜಾವಾಣಿ ಅಂಕಣ ಬರಹದಲ್ಲಿ ಎತ್ತಿನಹೊಳೆ ತಿರುವು ಯೋಜನೆಯಿಂದ ಉಂಟಾಗಬಹುದಾದ ಸಂಕಷ್ಟಗಳನ್ನು ಬಿಚ್ಚಿಡುತ್ತಲೇ ನಮ್ಮ ಮುಂದೆ ಅಲ್ಪ ನೀರಿನಿಂದಲೂ ಬಹುಮುಖಿ ಉಪಯೋಗಗಳನ್ನು ಮಾಡಿಕೊಳ್ಳುತ್ತಾ ಮುನ್ನೆಡೆದಿರುವ ಇಸ್ರೇಲ್ ಮಾದರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ನಮ್ಮನ್ನಾಳುವ ಪ್ರಭುಗಳ ಕಣ್ಣು ಈಗಲಾದರೂ ತೆರೆದಿತೇ ಎಂಬ ಆಸೆಯೊಂದಿಗೆ…..
ಬನವಾಸಿಗರು
ಮುಂದೆ ಓದಿ -
ಸುದೇಶ್ ದೊಡ್ಡಪಾಳ್ಯ ಅವರ 7.10.2015ರ ಪ್ರಜಾವಾಣಿ ಅಂಕಣ ಈಶಾನ್ಯ ದಿಕ್ಕಿನಿಂದದಲ್ಲಿ ಬರೆದ “ನನ್ನ ಪ್ರಾರ್ಥನೆ ನಿಮ್ಮದೂ ಆಗಲಿ” ಜೊತೆಗೆ ನಾವೂ ಇದ್ದೇವೆ.
ಬನವಾಸಿಗರು
ಮುಂದೆ ಓದಿ -
ಸ್ವರಾಜ್ ಅಭಿಯಾನ ಕರ್ನಾಟಕದ ಬರ ಪೀಡಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಸಂದರ್ಭದಲ್ಲಿ ಅದರ ಮುಖ್ಯ ನಾಯಕರಾದ ಯೋಗೇಂದ್ರ ಯಾದವ್ ಅವರು ರಾಯಚೂರು ಜಿಲ್ಲೆಯ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದ ”ದಿ ಹಿಂದೂ” ಪತ್ರಿಕೆಯ ವರದಿ.
ಮುಂದೆ ಓದಿ