ಸಹ ಪಯಣ
-
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಣಿವರಿಯದ ಚಳವಳಿಗಾರ ಎಚ್.ಎಸ್. ದೊರೆಸ್ವಾಮಿಯವರು 26.5.2021ರಂದು ತೀರಿಕೊಂಡರು. ಅವರ ನೆನಪಿನಲ್ಲಿ ಬಸವರಾಜು ಮೇಗಲಕೇರಿಯವರು 27.5.2021ರ ವಾರ್ತಾಭಾರತಿ ಪತ್ರಿಕೆಯಲ್ಲಿ ಬರೆದ ಲೇಖನ ನಮ್ಮ ಮರು ಓದಿಗಾಗಿ…
ಮುಂದೆ ಓದಿ -
[ 23.1.2021ರಂದು, THEPOLITIC.IN ವೆಬ್ ಪೋರ್ಟಲ್ ನಲ್ಲಿ ರೂಪ ಹಾಸನ ಅವರ ಸುದೀರ್ಘ, ವಿವರಣಾತ್ಮಕ ಸಂದರ್ಶನವನ್ನು ಮಾಡಿದ್ದಾರೆ ನಂದಿನಿ ಅನಿಲ್. ಬಿಡುವಿನ ಓದಿಗಾಗಿ ಇಲ್ಲಿ ದಾಖಲಾಗಿದೆ….]
ಮುಂದೆ ನೋಡಿ -
(ಜನವರಿ 14 ನೈಸರ್ಗಿಕ ಕೃಷಿ ತಜ್ಞ ನಾರಾಯಣ ರೆಡ್ಡಿಯವರ ಪುಣ್ಯತಿಥಿ. ತನ್ನಿಮಿತ್ತ ಬೆಳಕಿನ ಬೇಸಾಯವನ್ನು ಪ್ರಚುರಪಡಿಸುತ್ತಿರುವ ಕೃಷಿಕ ಅವಿನಾಶ್ ಟಿ ಜಿ ಎಸ್ ಅವರು 2021ರ ಜನವರಿ 11 ಮತ್ತು 12ರ ವಾರ್ತಾಭಾರತಿಗೆ ಎರಡು ಕಂತುಗಳಲ್ಲಿ ಬರೆದ ಬರಹದ ಒಟ್ಟು ರೂಪ ನಮಗಾಗಿ ಇಲ್ಲಿದೆ.)
ಮುಂದೆ ಓದಿ -
[ದಿನಾಂಕ 1.12.2019ರ ಪ್ರಜಾವಾಣಿ ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ರೂಪ ಹಾಸನ ಅವರ ಬರಹ ಮರು ಓದಿಗಾಗಿ…]
ಮುಂದೆ ನೋಡಿ -
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಹತ್ತು ಸಂಪುಟಗಳಲ್ಲಿ ಪ್ರಕಟವಾಗಿರುವ “ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳು”[ನಡವಳಿಗಳು] ಕೃತಿಶ್ರೇಣಿ ಕುರಿತು ಲೇಖಕರಾದ ನಟರಾಜ ಹುಳಿಯಾರ್ ಅವರು 10.2.2019 ರ ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ಬರೆದಿರುವ ಲೇಖನ ನಮ್ಮ ಓದಿಗಾಗಿ ಇಲ್ಲಿದೆ…
ಮುಂದೆ ನೋಡಿ -
ಆಗಸ್ಟ್ 30ರಂದು ದಿ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮಾಧವ ಗಾಡ್ಗಿಳ್ ಅವರ ಲೇಖನದ ಕನ್ನಡ ಅನುವಾದವನ್ನು ಮೈಸೂರಿನ ವೇಣುಗೋಪಾಲ್ ಟಿ. ಎಸ್ ಅವರು ಮಾಡಿದ್ದು, ನಮ್ಮ ಬನವಾಸಿಯ ಓದುಗರಿಗಾಗಿ ಅದು ಇಲ್ಲಿದೆ….
ಮುಂದೆ ನೋಡಿ -
ಶತ್ರುವಿಲ್ಲದ ಈ ಸಮರಕ್ಕೆ ಶಸ್ತ್ರಗಳಿಲ್ಲದ ಕಾಲಾಳುಗಳು ಬೇಕಿದ್ದಾರೆ. ಎಲ್ಲಿಂದ ಬಂದಾರು ಅವರೆಲ್ಲ?ಪ್ರಶ್ನಿಸುತ್ತಿದ್ದಾರೆ ಖ್ಯಾತ ಪರಿಸರ ಬರಹಗಾರರಾದ ನಾಗೇಶ್ ಹೆಗಡೆಯವರು. 23.8.2018ರ ಪ್ರಜಾವಾಣಿಯ ‘ಮುಂದಿದೆ: ಮೆಗಾಲೂಟಿಯ ಮಾರಿಹಬ್ಬ’ ತಮ್ಮ ವಿಜ್ಞಾನ ವಿಶೇಷ ಅಂಕಣದಲ್ಲಿ …
ಮುಂದೆ ನೋಡಿ -
ಕರ್ನಾಟಕ ರಾಜ್ಯ ಲೈಂಗಿಕ ವೃತ್ತಿನಿರತರ ಅಧ್ಯಯನ ಸಮಿತಿಯು ರಾಜ್ಯಾದ್ಯಂತ ಕೂಲಂಕಷ ಅಧ್ಯಯನ ನಡೆಸಿ 2017ರ ಫೆಬ್ರವರಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಅನುಷ್ಠಾನ ಮಾತ್ರ ಒಂದಿಷ್ಟೂ ಆಗಿಲ್ಲ . ಈ ಕುರಿತು ಅಸಮಾಧಾನಗೊಂಡಿದ್ದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ರೂಪ ಹಾಸನ ಅವರನ್ನು 26.7.2018ರ thestate.news ಅಂತರ್ಜಾಲ ಪತ್ರಿಕೆಯ ಮನದಮಾತು ವಿಭಾಗಕ್ಕಾಗಿ ಪತ್ರಕರ್ತ ಎ.ಆರ್.ವೆಂಕಟೇಶ್ ಅವರು ಸಂದರ್ಶನ ಮಾಡಿದ್ದು, ಅದರ ಮರು ಓದಿಗಾಗಿ ನಮ್ಮಬನವಾಸಿಯಲ್ಲಿದೆ…
ಮುಂದೆ ನೋಡಿ -
ಹಾಸನದ ಹಸಿರುಭೂಮಿ ಪ್ರತಿಷ್ಠಾನ ಹುಟ್ಟಿಕೊಂಡ ಬಗೆ ಮತ್ತು ಕಳೆದ ಒಂದು ವರ್ಷದಿಂದ ಮಾಡುತ್ತಿರುವ ಜಲಸಂವರ್ಧನೆ ಮತ್ತು ಹಸುರೀಕರಣದ ಕೆಲಸಗಳ ವಿವರವನ್ನೊಳಗೊಂಡ ರೂಪ ಹಾಸನ ಅವರ ಲೇಖನ ಮೇ 2018ರ ‘ಹೊಸಮನುಷ್ಯ’ ಮಾಸಿಕದಲ್ಲಿ ಪ್ರಕಟಗೊಂಡಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.
ಮುಂದೆ ನೋಡಿ -
ನಮ್ಮ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೂ ಅವರನ್ನು ಗುರುತಿಸುವ ಮತ್ತು ಅವರನ್ನು ಸಮಾನವಾಗಿ ಪರಿಗಣಿಸುವ ಮನೋಭಾವ ಇನ್ನೂ ಸಮಾಜಕ್ಕೆ ಬಂದಿಲ್ಲ. ಇಂದಿಗೂ ಎಲ್ಲ ಕ್ಷೇತ್ರದ ಬಹು ಮುಖ್ಯ ಹಿಡಿತಗಳು ಗಂಡಿನ ಕೈಯಲ್ಲೇ ಇವೆ ಎಂಬುದು ಗಮನಾರ್ಹವಾದುದು. ಈ ಕುರಿತು ಡೇವಿಡ್ ಲಿಯೋನ್ಹಾರ್ಟ್ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನದ ಕನ್ನಡಾನುವಾದವನ್ನು 9 ಜೂನ್ 2018ರ ಪ್ರಜಾವಾಣಿಯ ವಿಶ್ಲೇಷಣೆ ಅಂಕಣದಲ್ಲಿ ಪ್ರಕಟಿಸಲಾಗಿದೆ. ಈ ವಿಷಯದಲ್ಲಿ ನಮ್ಮ ಸಹಮತದೊಡನೆ ಸಹಪಯಣ …
ಮುಂದೆ ನೋಡಿ