ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಶಿಕ್ಷಣವೆನ್ನುವುದೀಗ ಬಂಡವಾಳ ಹೂಡಿ ಬಂಡವಾಳ ತೆಗೆಯುವ ಉದ್ಯಮ.ಮಕ್ಕಳನ್ನೂ ಭವಿಷ್ಯದ ಬಂಡವಾಳವನ್ನಾಗಿ ನೋಡಲಾಗುತ್ತಿದೆ.ಇಂಥ ಹೊತ್ತಿನಲ್ಲಿ ವ್ಯಕ್ತಿ ತನ್ನನ್ನು ‘ಸ್ವಯಂ ವಿನ್ಯಾಸ’ಗೊಳಿಸಿಕೊಳ್ಳುವ ಕಲಿಕೆಯ ಅಸಾಂಪ್ರದಾಯಿಕ ಮಾದರಿ ಚಿಗುರೊಡೆಯುತ್ತಿದ್ದು, ಕರ್ನಾಟಕದಲ್ಲೂ ಅಂಥದೊಂದು ಕನಸು ಗರಿಗೆದರಿದೆ. ಈ ಕುರಿತು ಕನ್ನಡಪ್ರಭದ 20.1.2016ರ ತಮ್ಮ ಅಂಕಣ ‘ಪರ್ಯಾಯ’ ದಲ್ಲಿ ಪತ್ರಕರ್ತ ಪಿ.ಓಂಕಾರ್ ಅವರು ನಿರೂಪಿಸಿದ್ದಾರೆ


    »
  • ನಗರ ಹಾಗೂ ಉಳ್ಳವರ ಮಕ್ಕಳ ಪರವಾಗಿರುವ ನಮ್ಮ ಶೈಕ್ಷಣಿಕ ವ್ಯವಸ್ಥೆ ಶಾಲೆಗೆ ಬಂದು ನಾಲ್ಕಕ್ಷರ ಕಲಿಯುವುದೇ ಕಷ್ಟವಾಗಿರುವ ಬಡ, ತಳ ಸಮುದಾಯದ, ಹೆಣ್ಣುಮಕ್ಕಳ ಶಿಕ್ಷಣದ ಕುರಿತು ವಿಶೇಷವಾಗಿಯೇ ಮತ್ತು ಪ್ರತ್ಯೇಕವಾಗಿಯೇ ವ್ಯವಸ್ಥೆಯನ್ನು ರೂಪಿಸುವ ಕುರಿತು ಹೆಚ್ಚಿನ ಕಾಳಜಿಯನ್ನು ಹೊಂದಿಲ್ಲ. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ಮಕ್ಕಳನ್ನು ಫೇಲ್ ಮಾಡುವ ವ್ಯವಸ್ಥೆಯನ್ನು ಪ್ರಾಥಮಿಕ ಹಂತದಲ್ಲಿ ಮತ್ತೆ ತರಲು ಯೋಚಿಸುತ್ತಿದೆ. ಅದು ಮಾಡಬಹುದಾದ ಅನಾಹುತಗಳ ಕುರಿತು 20.1.2016 ರ ವಿಜಯಕರ್ನಾಟಕದ ತಮ್ಮ ಲೇಖನದಲ್ಲಿ ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ ಅವರು ವಿಸ್ತೃತವಾಗಿ ಚರ್ಚಿಸಿದ್ದಾರೆ.


    ಮುಂದೆ ಓದಿ
  • ಈ ದೇಶದಲ್ಲಿ ಜಾತಿ ಇದ್ದರೂ ಕಷ್ಟ. ಇರದಿದ್ದರೂ ಕಷ್ಟ! ಜಾತಿಯಿಂದಲೇ ಎಲ್ಲವೂ ನಿರ್ಧಾರವಾಗುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹುಟ್ಟಿನ ಜಾತಿ ಗೊತ್ತಿಲ್ಲದೇ, ಗುರುತು ಇಲ್ಲದೇ ಸಂಕಷ್ಟಕ್ಕೆ ಒಳಗಾಗುವವರ ಸಂಕಟವನ್ನು 14.1.2016ರ ಕನ್ನಡಪ್ರಭದಲ್ಲಿ ಪತ್ರಕರ್ತ ಪಿ. ಓಂಕಾರ್ ಅವರು ವರದಿ ಮಾಡಿದ್ದಾರೆ.


    ಮುಂದೆ ಓದಿ
  • ಪರಿಸರ ಚಿಂತಕ, ಬರಹಗಾರರಾದ ನಾಗೇಶ್ ಹೆಗಡೆ ಅವರನ್ನು ಪತ್ರಕರ್ತ ಜಗದೀಶ್ ಕೊಪ್ಪ ಅವರುತಮ್ಮ ‘ಭೂಮಿಗೀತ’ ಅಂತರ್ಜಾಲ ತಾಣದಲ್ಲಿ ವಿಸ್ತೃತವಾಗಿ ಸಂದರ್ಶಿಸಿದ್ದಾರೆ. ಅದು 16.1.2016ರ ‘ಅವಧಿ’ ಅಂತರ್ಜಾಲ ತಾಣದಲ್ಲಿಯೂ ಪ್ರಕಟವಾಗಿದೆ.


    ಮುಂದೆ ನೋಡಿ
  • ಗ್ರಾಮೀಣ ಅಭಿವೃದ್ಧಿಯ ಕನಸುಗಳು ನನಸಾಗುವುದು ಪಂಚಾಯತ್ ಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ. ಅದರ ಮೂಲ ಆಶಯವೇ ತಳ ಕಚ್ಚಿರುವ ಇಂತಹ ಸಂದರ್ಭದಲ್ಲೂ ಪರಿಣಾಮಕಾರಿ ಅನುಷ್ಠಾನದ ಹಲವು ಮಾದರಿಗಳು ನಮ್ಮ ಮುಂದೆ ಇವೆ. ಅದನ್ನು ಉಡದಂತೆ ಪಟ್ಟು ಹಿಡಿದು ಸಾಧಿಸಿರುವ ವ್ಯಕ್ತಿಗಳ ಪರಿಚಯದೊಂದಿಗೆ ಮಾದರಿಯೊಂದನ್ನು 6.1.2016ರ ಕನ್ನಡಪ್ರಭದ ತಮ್ಮ ‘ಪರ್ಯಾಯ’ ಅಂಕಣದಲ್ಲಿ ಪಿ.ಓಂಕಾರ್ ಅವರು ಕಟ್ಟಿಕೊಟ್ಟಿದ್ದಾರೆ.
    ಬನವಾಸಿಗರು


    ಮುಂದೆ ಓದಿ
  • ಕಳೆದ ತಿಂಗಳವರೆಗೂ ಸರಿಯಾಗಿಯೇ ಸಿಗುತ್ತಿದ್ದ ಪಡಿತರ ಕೆಲವರಿಗೆ ಏಕಾಏಕಿ ಬಂದ್ ಆಗಿರುವುದೇಕೆೆ? ಎಂಬುದನ್ನು ತಮ್ಮ ಅನುಭವಜನ್ಯ ವಿವರಗಳ ಮೂಲಕ 6.1.2016ರ ಪ್ರಜಾವಾಣಿ ಸಂಗತದಲ್ಲಿ ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ ಬರೆದಿದ್ದಾರೆ.


    ಮುಂದೆ ಓದಿ
  • ಕಾನೂನಿನೊಡನೆ ಸಂಘರ್ಷಕ್ಕಿಳಿದ ಮಕ್ಕಳ ವಿರುದ್ಧ ಸೇಡಿಗಿಂತ ಮನಪರಿವರ್ತನೆಯೇ ಮೇಲು ಎಂಬುದನ್ನು ಮಕ್ಕಳ ಹಕ್ಕು ಸಂರಕ್ಷಣಾ ಹೋರಾಟಗಾರ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಪ್ರಜಾವಾಣಿ 2.1.2016ರ ಅಭಿಮತ ಅಂಕಣದಲ್ಲಿ ಮನಮುಟ್ಟುವಂತೆ ವಿಶ್ಲೇಷಣೆ ಮಾಡಿದ್ದಾರೆ.


    ಮುಂದೆ ನೋಡಿ
  • ತಮ್ಮದಲ್ಲದ ತಪ್ಪಿಗಾಗಿ ದೇಶ ಬಿಟ್ಟವರು ಹೆಸರೇ ಗೊತ್ತಿಲ್ಲದ ಊರನ್ನು ತಮ್ಮದೆಂದು ಹೇಳಿಕೊಳ್ಳಬೇಕಾಯಿತು. ಅಪರಿಚಿತ ಪರಿಸರದಲ್ಲಿ ಹೊಸದಾಗಿ ಬೇರು ಬಿಟ್ಟು, ಸಾವಿರಾರು ಮೈಲು ದೂರದ ಹಳ್ಳಿಗಳಲ್ಲಿರುವ ಹಳೆಯ ಬೇರುಗಳನ್ನು ಹುಡುಕುವ ಬಾಂಗ್ಲಾದೇಶದ ನಿರಾಶ್ರಿತರ ನೋವು–ನಲಿವಿನ ಕಥನವನ್ನು ಸುದೇಶ ದೊಡ್ಡಪಾಳ್ಯ ಅವರು ಪ್ರಜಾವಾಣಿ 5.1.2016ರ ಕರ್ನಾಟಕ ದರ್ಶನದಲ್ಲಿ ಅಕ್ಷರರೂಪಕ್ಕೆ ಇಳಿಸಿದ್ದಾರೆ.


    ಮುಂದೆ ಓದಿ
  • ರೈತನ ನಿಜವಾದ ಸಮಸ್ಯೆ ಇರುವುದು ಯಾವ ಬೆಳೆಯನ್ನು ಯಾವಾಗ ಬೆಳೆಯಬೇಕು ಮತ್ತು ಅದನ್ನು ಹೇಗೆ ಮಾರಾಟ ಮಾಡಬೇಕು ಎನ್ನುವುದರಲ್ಲಿ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ನಿರ್ಮಾಣದ ಪರ್ಯಾಯಗಳನ್ನು ಹುಡುಕುತ್ತಿರುವ ರೈತರಿಗೆ ಆನಂದತೀರ್ಥ ಪ್ಯಾಟಿಯವರು 4.1.2016ರ ಪ್ರಜಾವಾಣಿ ‘ಸಂಗತ’ ದಲ್ಲಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.


    ಮುಂದೆ ಓದಿ
  • ಪರಸ್ಪರ ಒಂದಾಗಿ ಕೈ ಹಿಡಿದು ಕೂಡಿ ಬಾಳುವ, ಸಹಕಾರಿ ತತ್ವಗಳ ಮೂಲಕ ಸಬಲಗೊಳ್ಳುವ ಕನಸು ಹಳೆಯದಾದರೂ ಅದರ ಮಾದರಿಗಳು ಸದಾ ಹೊಚ್ಚ ಹೊಸವು. ‘ನಾನು’ ಎಂಬುದು ‘ನಾವು’ ಆದಾಗ ಮಾತ್ರ ಸಮಷ್ಟಿ ಹಿತದ ಬೆಳಕು ಕಂಡೀತು. ಅಂತಹ ಕೆಲವು ಮಾದರಿಗಳನ್ನು ಸುದೇಶ್ ದೊಡ್ಡಪಾಳ್ಯ ಅವರು ತಮ್ಮ 30.12.2015ರ ಪ್ರಜಾವಾಣಿ ಅಂಕಣ ‘ಈಶಾನ್ಯ ದಿಕ್ಕಿನಿಂದ’ದಲ್ಲಿ ಬಿಚ್ಚಿಟ್ಟಿದ್ದಾರೆ.


    ಮುಂದೆ ಓದಿ