ಸಹ ಪಯಣ
-
ಮತದಾರರು ಪಕ್ಷ, ಹಣ, ಜಾತಿ, ಇತ್ಯಾದಿ ಆಮಿಷಗಳನ್ನು ಬದಿಗಿರಿಸಬೇಕು. ಕೆಲಸ ಮಾಡುವವರನ್ನು ಮಾತ್ರ ಆಯ್ಕೆ ಮಾಡಬೇಕು. ಏಕೆಂದರೆ ಪ್ರಜಾಪ್ರಭುತ್ವದ ಬುನಾದಿ ಅಧಿಕಾರ ವಿಕೇಂದ್ರೀಕರಣ. ಜನರೇ ಭಾಗವಹಿಸಬಹುದಾದ, ಆಡಳಿತದಲ್ಲಿ ಪಾಲ್ಗೊಳ್ಳಬಹುದಾದ ವ್ಯವಸ್ಥೆ. ಇದು ಅಡ್ಡದಾರಿ ಹಿಡಿಯಲು ಬಿಟ್ಟರೆ ಪ್ರಜಾಪ್ರಭುತ್ವ ವೃತ್ತಿಪರ ರಾಜಕಾರಣಿಗಳು, ಹಣವಂತರು, ಅಧಿಕಾರದಾಹಿಗಳು ಮತ್ತು ಸಂಪತ್ತಿನ ಮೋಹಿಗಳ ವಶವಾಗುತ್ತದೆ. ಪ್ರಜಾಪ್ರಭುತ್ವದ ಆಶಯಕ್ಕೆ ಸೋಲಾಗುತ್ತದೆ. ಈ ಆಶಯವನ್ನು ದೃಢವಾದ ದನಿಯಲ್ಲಿ ಪ್ರತ್ಯಕ್ಷ ಅನುಭವಗಳ ಮೂಲಕ 10.2.2016ರ ಪ್ರಜಾವಾಣಿಯ ತಮ್ಮ ಅಂಕಣ ”ಈಶಾನ್ಯ ದಿಕ್ಕಿನಿಂದ”ದಲ್ಲಿ ಸುದೇಶ್ ದೊಡ್ಡಪಾಳ್ಯ ಅವರು ಬಿಚ್ಚಿಟ್ಟಿದ್ದಾರೆ
ಮುಂದೆ ನೋಡಿ -
ಮನುಷ್ಯ ದುರಾಸೆಗೆ ಕಾಡು ಒತ್ತುವರಿ ಮಾಡುತ್ತಾ, ಕಾಡಿನ ಗರ್ಭದೊಳಗೆ ಅವೈಜ್ಞಾನಿಕವಾಗಿ ಅಭಿವೃದ್ಧಿ ಹೆಸರಿನ ಚಟುವಟಿಕೆಗಳನ್ನು ನಡೆಸುತ್ತಾ ಕಾಡನ್ನು ಅಲ್ಲೋಲಕಲ್ಲೋಲಗೊಳಿಸುತ್ತಿರುವಾಗ ಅರಣ್ಯದ ವನ್ಯಜೀವಿಗಳು ಎಲ್ಲಿಗೆ ಹೋಗಬೇಕು? ಬೋಡಾಗುತ್ತಿರುವ ಅರಣ್ಯದಿಂದ ಆಹಾರಕ್ಕಾಗಿ, ರಕ್ಷಣೆಗಾಗಿ, ಭೀತಿಯಿಂದ ಹೊರ ಬಂದು ವಾಹನಗಳಿಗೆ, ಮನುಷ್ಯರ ಕೈಗೆ ಸಿಕ್ಕಿ ಸಂಕಷ್ಟಕ್ಕೆ, ಧಾರುಣ ಸಾವಿಗೆ ಈಡಾಗುತ್ತಿರುವ ವನ್ಯಜೀವಿಗಳ ಸಂಕಟವನ್ನು ಮನಮುಟ್ಟುವಂತೆ ತಮ್ಮ ಭೂಮಿಗೀತ ಅಂತರ್ಜಾಲ ತಾಣದಲ್ಲಿ ಕಟ್ಟಿಕೊಟ್ಟಿದ್ದಾರೆ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಅವರು.
ಮುಂದೆ ಓದಿ -
ಗಂಡು ಹೆಣ್ಣಿನ ಸ್ವಭಾವ, ವ್ಯಕ್ತಿತ್ವ, ವರ್ತನೆಗಳಿಗೆ ನಾವು ಹೊರ ಪ್ರಪಂಚದಲ್ಲಿ ಕಾರಣಗಳನ್ನು ಹುಡುಕುತ್ತಿರುತ್ತೇವೆ. ಆದರೆ ಪ್ರಾಕೃತಿಕ, ಆನುವಂಶಿಕ ಮತ್ತು ಜೈವಿಕ ಮೂಲವಾದ ಉತ್ಪತ್ತಿ ಮೂಲದ ನೈಜ ಕಾರಣಗಳು ಇವನ್ನು ನಿರ್ಧರಿಸುತ್ತಿರುತ್ತವೆ. ಆದರೆ ಇವನ್ನೂ ಮೀರಿ ಮನುಷ್ಯ ನಾಗರಿಕತೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ಜೊತೆಗೆ ತನ್ನನ್ನು ಅನಾದಿಯಿಂದ ಪಳಗಿಸಿಕೊಳ್ಳುತ್ತಲೂ ಬಂದಿದ್ದಾನೆ. ಹೀಗಾಗಿಯೇ ಅವನು ಪ್ರಾಣಿಜನ್ಯ ಸ್ವಭಾವದಿಂದ ಮನುಷ್ಯತ್ವದೆಡೆಗೆ ಸಾಗಿ ಬಂದ ಮಾನವ ವಿಜ್ಞಾನದ ಕಥೆ ಕುತೂಹಲಭರಿತವೂ ರೊಚಕವೂ ಆಗಿದೆ. ಈ ಕರುಳು ಪಳಗಿಸಿಕೊಳ್ಳದ, ಸಾಮಾಜಿಕತೆಗೆ ಒಳಗಾಗದ, ಸಂಸ್ಕಾರಗೊಳ್ಳದ ಪ್ರಾಣಿ ಹಂತದಲ್ಲೇ ಉಳಿದ ಮನುಷ್ಯ ರೂಪಿಗಳನ್ನು ನಾಗರಿಕ ಜಗತ್ತು ಶಿಕ್ಷೆಯ ರೂಪದ ಪಳಗಿಸುವಿಕೆಗೆ ಒಳಪಡಿಸುತ್ತದೆ.
ಈ ವಿವರಗಳನ್ನು ಕಾದಂಬರಿಕಾರರಾದ ಕೆ.ಎನ್.ಗಣೇಶಯ್ಯ ಅವರು 7.2.2016ರ ಕನ್ನಡಪ್ರಭದಲ್ಲಿ ತಮ್ಮ ”ವಿಚಾರಣಾ” ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ
ಮುಂದೆ ಓದಿ -
ರೋಹಿತ ವೇಮುಲನ ಸಾವಿನ ನಂತರ ಹುಟ್ಟಿರುವ ಸಂವಾದ ಚರ್ಚೆಗಳಿಗೆ ವಿಭಿನ್ನ ಆಯಾಮವನ್ನು ನೀಡಿ ಜಾತಿ ಮೂಲದ ವಿಚಾರವಾಗಿ ಆಗುತ್ತಿರುವ ಅಧ್ಯಯನದ ಮೇಲೆ ಬೆಳಕು ಚೆಲ್ಲುವ ಬರಹವನ್ನು 7.2.2016ರ ಕನ್ನಡಪ್ರಭದಲ್ಲಿ ಅದರ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಅವರು ತಮ್ಮ ‘ಎಲ್ಲಾ ಬಲ್ಲವರಿಲ್ಲ’ [ಜಗತ್ತು ಮತ್ತು ಬೌದ್ಧಿಕತೆಯ ಸುತ್ತ ಹದಿನೈದು ದಿನಕ್ಕೊಮ್ಮೆ ವಿಶಾಲ ನೋಟ]ಅಂಕಣದಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಮುಂದೆ ಓದಿ -
ಹೆಣ್ಣುಮಕ್ಕಳನ್ನು ಭ್ರೂಣದ ಹಂತದಲ್ಲೇ ಕೊಲ್ಲುತ್ತಿರುವ ಪೈಶಾಚಿಕ ಕೃತ್ಯದಿಂದ ತಪ್ಪಿಸಿ ಬದುಕುಳಿಸಲು ಯುದ್ಧೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಅದನ್ನು ಉಳಿಸಲು ಇರುವ ಯೋಜನೆಗಳನ್ನೇ ನಿಷ್ಕ್ರಿಯಗೊಳಿಸಿ ಸಂವೇದನಾ ರಹಿತವಾಗುತ್ತಿರುವ ಪ್ರಭುತ್ವವನ್ನು ಯಾವ ಚಾಟಿ ಏಟು ಬಿಗಿದು ಎಚ್ಚರಿಸುವುದು? ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣು ಮಗುವನ್ನು ಉಳಿಸಲೆಂದೇ ಜಾರಿಯಾದ ಯೋಜನೆ. ಅದನ್ನು ನಿರ್ದಾಕ್ಷಿಣ್ಯವಾಗಿ, ಸಲ್ಲದ ಸಬೂಬುಗಳನ್ನು ನೀಡಿ ನಿಲ್ಲಿಸಿರುವ ಸರ್ಕಾರದ ಕ್ರಮದಿಂದಾಗಿ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು 18.1.2016ರ ಪ್ರಜಾವಾಣಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಶಾರದ ಗೋಪಾಲ ಅವರು ಮನಮುಟ್ಟುವಂತೆ ವಿಶ್ಲೇಷಿಸಿದ್ದಾರೆ.
ಮುಂದೆ ಓದಿ -
ಧಾರವಾಡದಲ್ಲಿ ನೆಲೆಸಿ ಕೃಷಿ, ಪರಿಸರ, ಶಿಕ್ಷಣ ಕುರಿತು ಅನೇಕ ಪ್ರಯೋಗಗಳಲ್ಲಿ ನಿರತರಾಗಿರುವ ಡಾ.ಸಂಜೀವ ಕುಲಕರ್ಣಿಯವರನ್ನು ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಅವರು ತಮ್ಮ ಭೂಮಿಗೀತ ಅಂತರ್ಜಾಲ ಪತ್ರಿಕೆಯಲ್ಲಿ ಸಂದರ್ಶಿಸಿದ್ದಾರೆ. ಅದರೊಂದಿಗೆ ನಮ್ಮ ಸಹಪಯಣ….
ಮುಂದೆ ಓದಿ -
ಆಶಕ್ತರಿಗಾಗಿ ಇರುವ ಅಂತ್ಯೋದಯ ಕಾರ್ಡುಗಳನ್ನೂ ವಾಪಸ್ಸು ಪಡೆದಿರುವ ಸರ್ಕಾರದ ನಡೆಯ ಹಿಂದಿರುವ ಕ್ರೂರ ವಾಸ್ತವವನ್ನು,ಅದನ್ನು ವಾಪಸ್ಸು ಪಡೆಯಲು ನಡೆದಿರುವ ಸಂಘರ್ಷವನ್ನು 28.1.2016ರ ಕನ್ನಡಪ್ರಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಶಾರದ ಗೋಪಾಲ ಅವರು ಮನಮುಟ್ಟುವಂತೆ ವಿವರಿಸಿದ್ದಾರೆ.
ಮುಂದೆ ನೋಡಿ -
ಒಡೆದು ಛಿದ್ರವಾಗುತ್ತಿರುವ ಪ್ರಗತಿಪರ ಚಳುವಳಿಗಳು ಯುವಜನರಲ್ಲಿ ಮತ್ತು ಅಂಚಿಗೆ ಒತ್ತರಿಸಲ್ಪಡುತ್ತಿರುವವರಲ್ಲಿ ಸೃಷ್ಟಿಸುತ್ತಿರುವ ಆತಂಕಗಳಿಗೆ ಉತ್ತರ ಹೇಳುವವರು ಯಾರು? ಆ ಪ್ರಶ್ನೆಯೊಂದಿಗೆ ಆರ್ತವಾದ ಸಂಕಟದೊಂದಿಗೆ ನಮ್ಮೊಳಗನ್ನು ಅಲ್ಲಾಡಿಸುತ್ತಿದ್ದಾರೆ 3.2.2016 ರ ಕನ್ನಡಪ್ರಭದಲ್ಲಿ ಪತ್ರಕರ್ತ ಪಿ. ಓಂಕಾರ್ ಅವರು……
ಮುಂದೆ ನೋಡಿ -
ಭೂಮಿಗೀತ ಡಾಟ್ ಕಾಂ. ಹೆಸರೇ ಹೇಳುವಂತೆ ಇದು ಈ ಭೂಮಿಯ ಮೇಲಿನ ಮತ್ತು ಅದರ ಒಡಲಾಳದ ಸಂಕಟಗಳನ್ನು ಹೇಳುವ ಅಂತರ್ಜಾಲ ತಾಣ. ಪರಿಸರ, ಕೃಷಿ, ಭೂಮಿ,…… ಅದರ ಸಂಕಷ್ಟ ಪರ್ಯಾಯ ಮತ್ತು ಬಿಡುಗಡೆಯ ದಾರಿಗಳನ್ನು ಹುಡುಕಲು ಹೊರಟಿರುವ ಈ ಅಂತರ್ಜಾಲ ತಾಣವನ್ನು ನಮ್ಮ ನಡುವಿನ ಹಿರಿಯ ಮತ್ತು ಪರಿಸರ ಶ್ರದ್ಧೆಯ ಪತ್ರಕರ್ತರಾದ ಡಾ. ಜಗದೀಶ್ ಕೊಪ್ಪ ಅವರು ಮಿತ್ರ ಬಳಗದ ಸಹಯೋಗದಲ್ಲಿ ಪ್ರಾರಂಭಿಸಿದ್ದಾರೆ. ನಮ್ಮ ಪಯಣವೂ ಆ ದಿಕ್ಕಿನೆಡೆಗೆ ಇರುವುದರಿಂದ ನಾವೂ ಇದರಲ್ಲಿ ಜೊತೆಯಾಗಿದ್ದೇವೆ. ಹದಿನೈದು ದಿನಕ್ಕೊಮ್ಮೆ ಹೊಸ ಸಂಚಿಕೆಯಾಗಿ ಮೈ ತಳೆಯುವ ಭೂಮಿಗೀತದ ಯಾನದಲ್ಲಿ ನೀವೂ ಜೊತೆಯಾಗಿ….
ಬನವಾಸಿಗರು
ಮುಂದೆ ಓದಿ -
ಭಾರತದ ಸರಣಿ ರೈತ ಆತ್ಮಹತ್ಯೆಗಳಿಗೆ ಕಾರಣಗಳನ್ನು ಹುಡುಕುತ್ತಾ ವಿಸ್ತೃತ ಕ್ಷೇತ್ರಕಾರ್ಯ ಮಾಡಿ, ಅದರಿಂದ ಬಂದ ವಿಚಾರಗಳನ್ನು ದಕ್ಷಿಣ ಆಫ್ರಿಕಾದ ಸಮಾಜವಿಜ್ಞಾನ ಪುಸ್ತಿಕೆ- 2009 ರಲ್ಲಿ ಪ್ರಕಟಿಸಿದ್ದಾರೆ ಪ್ರತಿಭಾವಂತರಾದ ಸಮಾಜಶಾಸ್ತ್ರಜ್ಞೆ ಡಾ.ಎ.ಆರ್. ವಾಸವಿಯವರು. ಅದನ್ನು ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಹೆಚ್.ಡಿ.ಪ್ರಶಾಂತ್ ಅವರು ಕನ್ನಡಕ್ಕೆ ಅನುವಾದಿಸಿ ”ಸಾಮಾಜಿಕ ಆಕಾರರೇಖೆ” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಮುಂದೆ ಓದಿ