ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ದೇಶ ಬಿಸಿಲ ಬೇಗೆಯಲ್ಲಿ ತತ್ತರಿಸುತ್ತಿರುವಾಗ, ಸಾಸಿವೆಗೆ ಬಿಸಿ ಕೊಟ್ಟು ಒಗ್ಗರಣೆಗೆ ಇಟ್ಟವರಾರು?ಎಂದು ಕೇಳುತ್ತಿದ್ದಾರೆ 7.4.2016ರ ತಮ್ಮ ಪ್ರಜಾವಾಣಿ ವಿಜ್ಞಾನ ವಿಶೇಷ ಅಂಕಣದಲ್ಲಿ ನಾಗೇಶ್ ಹೆಗಡೆ ಅವರು.


    ಮುಂದೆ ಓದಿ
  • ಪರಿಸರದಲ್ಲಿ ಒಂದು ಜೀವಿಗೆ ಇನ್ನೊಂದು ಜೀವಿಯ ಬದುಕು ಪೂರಕವಾಗಿಯೇ ಇರುತ್ತದೆ. ಅದನ್ನು ಅರಿಯದ ನಾವು ಆಧುನಿಕತೆ ಮತ್ತು ರಾಸಾಯನಿಕ ಆಧಾರಿತ ಅಭಿವೃದ್ಧಿ ಪರಿಕಲ್ಪನೆಗೆ ಜೋತು ಬಿದ್ದು ಪ್ರಕೃತಿ ಸಹಜತೆಯಲ್ಲಿ ಇರಬಹುದಾದ ಲಾಭಗಳನ್ನು ದೂರಮಾಡುತ್ತಿದ್ದೇವೆ. ಆ ಕುರಿತು ಮೂಲಮಟ್ಟದ ಅರಿವು ಮೂಡಿಸುವ ಲೇಖನವೊಂದನ್ನು 5.4.2016ರ ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಶಿವಾನಂದ ಕಳವೆಯವರು ಬರೆದಿದ್ದಾರೆ.


    ಮುಂದೆ ನೋಡಿ
  • ಜಿ.ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಚಿರಪರಿಚಿತವಾದ ಹೆಸರು. ಆರು ಬಾರಿ ಶಾಸಕರಾಗಿ, ಮೂರು ಬಾರಿ ಮಂಡ್ಯ ಜಿಲ್ಲೆಯನ್ನು ಸಂಸದರಾಗಿ ಪ್ರತಿನಿಧಿಸಿದ ಗೌಡರು ಗುಂಡೂರಾವ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ನೇರ ಮತ್ತು ನಿಷ್ಟರ ನುಡಿಗಳಿಗೆ ಹಾಗೂ ತಮ್ಮ ಪಾರದರ್ಶಕ ವ್ಯಕ್ತಿತ್ವದಿಂದ ಎಲ್ಲರಿಂದಲೂ ಗೌರವ ಮತ್ತು ಪ್ರೀತಿಗೆ ಪಾತ್ರರಾದವರು. ಅವರ ಮನದಾಳದ ಮಾತುಗಳನ್ನು ತಮ್ಮ ಭೂಮಿಗೀತ 2.4.2016 ಅಂತರ್ಜಾಲ ಪತ್ರಿಕೆಯಲ್ಲಿ ಡಾ. ಜಗದೀಶ್ ಕೊಪ್ಪ ಅವರು ಸಂದರ್ಶನದ ಮೂಲಕ ಸೊಗಸಾಗಿ ಹಿಡಿದಿಟ್ಟಿದ್ದಾರೆ.


    ಮುಂದೆ ಓದಿ
  • ಮಾನವನ ಪುನರಾಭಿವೃದ್ಧಿ ಚಕ್ರಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಮನುಷ್ಯ ನಿರ್ಮಿತ ನಿಯಮಗಳನ್ನೂ ಮೀರಿ ನಿಸರ್ಗ ನಿಯಮಗಳು ಅಗೋಚರವಾಗಿ ತಮ್ಮ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿರುತ್ತವೆ. ಅದು ಎಷ್ಟೋ ಬಾರಿ ಹೆಣ್ಣಿಗೆ ಶಾಪವೇ ಆಗಿ ಗೋಚರಿಸುತ್ತಿರುತ್ತದೆ. ಆದರೆ ಅದರ ಹಿಂದಿನ ತರ್ಕ ನಮ್ಮ ವಿವೇಚನೆಯನ್ನು ಮೀರಿದ್ದಾಗಿರುತ್ತದೆ. ಅದನ್ನೂ ಸಹ್ಯ ನೆಲೆಯಲ್ಲಿ ವಿವರಿಸುವ ಪ್ರಯತ್ನವನ್ನು ಕೆ.ಎನ್.ಗಣೇಶಯ್ಯ ಅವರು ತಮ್ಮ 3.4.2016ರ ತಮ್ಮ ಕನ್ನಡಪ್ರಭ ಅಂಕಣ ”ವಿಚಾರಣಾ”ದಲ್ಲಿ ಮಾಡಿದ್ದಾರೆ.


    ಮುಂದೆ ನೋಡಿ
  • ಒರಿಸ್ಸಾದ ಕೋಸ್ಲಿ ಭಾಷೆಯ ಬರಹಗಾರ ಲೋಕ್ ಕಿ ರತ್ನ ನೆಂದೇ ಪರಿಚಿತನಾಗಿರುವ ಹಲ್ದರ್ ನಾಗ್ ನ ಬಗ್ಗೆ ವಿಶೇಷ ಪರಿಚಯಾತ್ಮಕ ಲೇಖನವನ್ನು ಮನೋಜ್ ಶರ್ಮ ಅವರು 2.4.2016 ರ ಅವಧಿ ಅಂತರ್ಜಾಲ ತಾಣದಲ್ಲಿ ಮಾಡಿಕೊಟ್ಟಿದ್ದಾರೆ.


    ಮುಂದೆ ನೋಡಿ
  • ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಗುಣಾತ್ಮಕವಾಗಿ ಪರಿಗಣಿಸದೆ ಅಸಡ್ಡೆ ತೋರುತ್ತಿರುವ ಸರ್ಕಾರಗಳ ನಿಲುವು ಎಲ್ಲ ರೀತಿಯಲ್ಲೂ ಅಕ್ಷಮ್ಯ. ಆ ಕುರಿತು 16.3.2016 ರ ವಿಜಯ ಕರ್ನಾಟಕದ ತಮ್ಮ ಅಂಕಣ ‘ಪ್ರಸ್ತುತ’ದಲ್ಲಿ ಶಿಕ್ಷಣ ತಜ್ಞ ವಿ. ಪಿ. ನಿರಂಜನಾರಾಧ್ಯ ಅವರು ಅಂಕಿಅಂಶಗಳ ಮೂಲಕ ವಿವರಿಸಿದ್ದಾರೆ.


    ಮುಂದೆ ಓದಿ
  • ಹೆಣ್ಣುಮಕ್ಕಳು ತಮ್ಮ ಅಂತರಂಗದ ತವಕ, ತಲ್ಲಣ, ನೋವು, ಸಂಕಟ, ಸಂತೋಷಗಳನ್ನು ಹೊರಹಾಕಲು ಅನೇಕ ಅಭಿವ್ಯಕ್ತಿ ಮಾಧ್ಯಮಗಳನ್ನೂ ಕಂಡುಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಒಂದು ಉದಾಹರಣೆ ಸುಮಾರು ಐದುನೂರು ವರ್ಷಗಳಷ್ಟು ಹಿಂದೆಯೆ ಚೀನಾದ ಝಿಯಾವೊ ಮತ್ತು ಯಾಂಗಮಿಂಗ ನದಿಗಳಿರುವ ಝಿಯಾಂಗಯೊಂಗದ ಉತ್ತರ ಭಾಗದಲ್ಲಿನ ಹುನಾನದ ಗ್ರಾಮೀಣ ಪ್ರದೇಶಗಳಲ್ಲಿದ್ದ ಮಹಿಳೆಯರ ಕಲ್ಪನೆಯ ಕೂಸಾಗಿ ರೂಪಿತಗೊಂಡು ಬರೆಯಲಾದ ಭಾಷೆ ‘ನುಶು’. ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿ ಅವರು 28.3.2016ರ ಪ್ರಜಾವಾಣಿಯಲ್ಲಿ ವಿಶ್ಲೇಷಿಸಿದ್ದಾರೆ.


    ಮುಂದೆ ಓದಿ
  • ಧಾರ್ಮಿಕ ಸಂಪ್ರದಾಯ-ನಂಬಿಕೆಗಳ ಕಾರಣಗಳಿಂದ ಇಂದೂ ಕೂಡ ಭಾರತದ ಗ್ರಾಮೀಣ ಭಾಗಗಳಲ್ಲಿ ನಡೆಯುವ ಹಿಂಸಾತ್ಮಕ ದೇಹದಂಡನೆಗಳ ಆಚರಣೆಗಳನ್ನು ಆಳಕ್ಕೆ ಹೋಗಿ ವಿಶ್ಲೇಷಿಸಿ ಇದನ್ನು ತಳ ಸಮುದಾಯಗಳ ಮೇಲೆ ಹೇರಿರುವುದರ ಹಿಂದಿರಬಹುದಾದ ಹುನ್ನಾರಗಳನ್ನು ವಿಮರ್ಶಕ ಸಿ. ಎನ್. ರಾಮಚಂದ್ರನ್ ಅವರು ತಮ್ಮ ಕನ್ನಡಪ್ರಭದ 24.3.2016 ರ ”ಇತ್ಯಾದಿ” ಅಂಕಣದಲ್ಲಿ ಕಟ್ಟಿಕೊಟ್ಟಿದ್ದಾರೆ.


    ಮುಂದೆ ಓದಿ
  • *ನಾಡಿನ ವಿವಿಧ ಕ್ಷೇತ್ರದ ಗಣ್ಯರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕನ್ನಡಪ್ರಭ ಪತ್ರ ಬರೆಸಿ 24 & 25 ಮಾರ್ಚ್ 2016ರಂದು ಪ್ರಕಟಿಸಿದೆ. ಅದರ ವಿಸ್ತೃತ ಬರಹ ರೂಪ ಇಲ್ಲಿದೆ.-ಸಂಕಲನ -ಪಿ. ಓಂಕಾರ್


    ಮುಂದೆ ಓದಿ
  • ಮನುಷ್ಯನ ಮೂಲಭೂತ ಪ್ರಾಣಿಜನ್ಯ ಸ್ವಭಾವವನ್ನು ಪಳಗಿಸುತ್ತಾ ನಮ್ಮ ನಾಗರಿಕತೆ ಈ ಹಂತಕ್ಕೆ ಬಂದು ನಿಂತಿದೆ. ಒಳಿತು ಕೆಡುಕಿನ ಕಲ್ಪನೆ ಇಲ್ಲದ ಹಂತದಿಂದ ಒಳಿತಿನ ಸ್ಪಷ್ಟ ಚಿಂತನೆ, ನಡವಳಿಕೆಯ ಮಾದರಿಗಳನ್ನು ರೂಪಿಸಿಕೊಳ್ಳುತ್ತಾ ಬಂದಿರುವ ಮಾನವ ಸ್ವಭಾವದ ಇತಿಹಾಸದ ಅರಿವು ರೋಚಕ ಮತ್ತು ಕುತೂಹಲಭರಿತ. ಅದರ ಒಂದು ಅಧ್ಯಾಯವನ್ನು 20.3.2016ರ ಕನ್ನಡಪ್ರಭದ ತಮ್ಮ ಅಂಕಣದಲ್ಲಿ ಕಾದಂಬರಿಕಾರ ಕೆ. ಎನ್. ಗಣೇಶಯ್ಯ ಅವರು ಸೊಗಸಾಗಿ ಪ್ರಸ್ತುತಪಡಿಸಿದ್ದಾರೆ.


    ಮುಂದೆ ಓದಿ