ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಮನಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ಹರಿಯುವ ನದಿಯ ನೀರನ್ನೇ ಬತ್ತಿದ ಕೆರೆಗೆ ತುಂಬಿ ಅದೀಗ ಆ ಸುತ್ತಲ ಪ್ರದೇಶ ಹಸಿರಿನಿಂದ, ನೀರಿಯ ಬರವಿಲ್ಲದೇ ಕಂಗೊಳಿಸಲು ಸಾಧ್ಯವಾಗಿರುವ ಒಂದು ಯಶೋಗಾಥೆಯನ್ನು 27.4.2016 ರ ತಮ್ಮ ಕನ್ನಡಪ್ರಭ ಅಂಕಣ ‘ಪರ್ಯಾಯ’ ದಲ್ಲಿ ವಿವರಿಸಿದ್ದಾರೆ ಓಂಕಾರ್ ಪಿ ಅವರು


    ಮುಂದೆ ನೋಡಿ
  • ಎಲ್ಲೆಲ್ಲೂ ನೀರಿಗೆ ಹಾಹಾಕಾರ ಎದ್ದಿರುವ ಇಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆಯ ಕುರಿತು ಈಗಲಾದರೂ ಪರ್ಯಾಯ ಚಿಂತನೆಗಳನ್ನು ಮಾಡುವುದು ಅನಿವಾರ್ಯವಾಗಿದೆ. ಪ್ರಜಾವಾಣಿಯ 24.4.2016ರ ಈ ಭಾನುವಾರ ಪುರವಣಿಗಾಗಿ ಹಮೀದ್ ಕೆ. ಅವರು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಹಿರಿಯ ವಿಜ್ಞಾನಿಗಳಾದ ಎ. ಅರ್ . ಶಿವಕುಮಾರ್ ಅವರನ್ನು ಮಳೆ ನೀರಿನ ಸಂಗ್ರಹ ಸಾಧ್ಯತೆಗಳ ಕುರಿತು ಸಂದರ್ಶಿಸಿದ್ದಾರೆ.


    ಮುಂದೆ ಓದಿ
  • ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಲಂಕೇಶ್ ಅವರ ನೆನಪಿನ ಕಾರ್ಯಕ್ರಮದಲ್ಲಿ ಲಂಕೇಶ್ ಅವರ ವ್ಯಕ್ತಿತ್ವದ ಜೊತೆಗೆ ಪತ್ರಿಕೋದ್ಯಮದಲ್ಲಿನ ಅವರ ದಿಟ್ಟ ನಡೆಗಳ ಕುರಿತು ಆಡಿದ ಮಾತುಗಳ ಬರಹ ರೂಪವನ್ನು 17.4.2016ರ ಕನ್ನಡಪ್ರಭದ ತಮ್ಮ ಅಂಕಣ ”ಎಲ್ಲ ಬಲ್ಲವರಿಲ್ಲ”ದಲ್ಲಿ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಅವರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.


    ಮುಂದೆ ಓದಿ
  • ‘ಆಮ್‌ ಆದ್ಮಿ’ ಪಕ್ಷದ ಬೌದ್ಧಿಕ ಕೇಂದ್ರದ ರೂಪದಲ್ಲಿ ಗುರ್ತಿಸಿಕೊಂಡಿದ್ದ ಯೋಗೇಂದ್ರ ಯಾದವ್ ಈಗ ‘ಸ್ವರಾಜ್‌ ಅಭಿಯಾನ’ದಲ್ಲಿ ನಿರತರು. 17.4.2016ರ ಪ್ರಜಾವಾಣಿಯ ‘ಮುಕ್ತಛಂದ’ ಪುರವಣಿಗಾಗಿ ಆನಂದತೀರ್ಥ ಪ್ಯಾಟಿ ಅವರೊಂದಿಗೆ ಮಾತನಾಡಿರುವ ಅವರು, ಸಂಘಟನೆಯ ಮೂಲಕ ದೇಶದ ರೈತರನ್ನು ಒಂದು ಶಕ್ತಿಕೇಂದ್ರವಾಗಿ ರೂಪಿಸುವ ಬಯಕೆ ಹೊಂದಿದ್ದಾರೆ. ಅವರೊಂದಿಗೆ ನಮ್ಮ ಸಹಪಯಣ.


    ಮುಂದೆ ನೋಡಿ
  • ಏಪ್ರಿಲ್ 22 ನ್ನು ವಿಶ್ವಾದ್ಯಂತ ಭೂಮಿ ದಿನವೆಂದು ಆಚರಿಸಲಾಗುತ್ತದೆ. ದಿನದಿಂದ ದಿನಕ್ಕೆ ಭೂಮಿ ಮೇಲಿನ ಪರಿಸರ ಅಧೋಗತಿಗೆ ಇಳಿಯುತ್ತಿದೆ. ಕಾಡು ನಾಶ, ನೀರಿನ ಮೂಲಗಳ ನಾಶ, ಮನುಷ್ಯನ ಮಿತಿಮೀರಿದ ಆಸೆಗೆ ಪ್ರಕೃತಿ ಬಲಿಯಾಗಿ ದೇಶದಲ್ಲಿ ಬರ ತಲೆದೋರಿದೆ. ವಿಶ್ವದಲ್ಲಿ ಅದರ ವ್ಯತಿರಿಕ್ತ ಪರಿಣಾಮಗಳು ಗೋಚರಿಸುತ್ತಿವೆ. ಇನ್ನಾದರೂ ನಾವು ಅದರ ಉಳಿವಿಗೆ ಬದ್ಧರಾಗಬೇಕೆಂದು ಮತ್ತೊಮ್ಮೆ ಎಚ್ಚರಿಸುತ್ತಿರುವ ನಾಗೇಶ್ ಹೆಗಡೆಯವರ 21.4.2016ರ ಪ್ರಜಾವಾಣಿಯ ವಿಜ್ಞಾನ ವಿಶೇಷ ಅಂಕಣ ನಮ್ಮ ಓದಿಗಾಗಿ.


    ಮುಂದೆ ನೋಡಿ
  • ಪಂಜಾಬ್ ನ ಸಂತ ಬಲಬೀರ್ ಸಿಂಗ್ 160 ಕಿಲೊಮೀಟರ್ ಉದ್ದದ ಕಾಳಿಬೆನ್ ನದಿಯ ಶುದ್ಧೀಕರಣ ಯೋಜನೆಯ ಮೂಲಕ ಜಗತ್ತಿನಾದ್ಯಂತ ಗಮನ ಸೆಳದಿದ್ದಾರೆ. ಗಂಗೆಯನ್ನು ಶುದ್ಧೀಕರಿಸಲು ಹೊರಟು ಹೈರಾಣಾಗಿದ್ದ ನಮ್ಮ ಕೇಂದ್ರ ಸರ್ಕಾರ ಇದೀಗ ಸಂತ ಬಲ್ಬೀರ್ ಸಿಂಗ್ ರವರ ಮಾರ್ಗದರ್ಶನದಲ್ಲಿ ಮುಂದುವರಿಯಲು ನಿರ್ಧರಿಸಿದೆ. ಆ ಸಂತನ ಬದುಕಿನ ಮಾದರಿ ಕಥೆಯನ್ನು 15.4.2016 ರ ತಮ್ಮ ಭೂಮಿಗೀತ ಅಂತರ್ಜಾಲ ತಾಣದಲ್ಲಿ ಡಾ. ಜಗದೀಶ್ ಕೊಪ್ಪ ಅವರು ವಿವರವಾಗಿ ಮಾಡಿಕೊಟ್ಟಿದ್ದಾರೆ.


    ಮುಂದೆ ಓದಿ
  • ಮನಸ್ಸು ಮಾಡಿದರೆ ನಗರಗಳಲ್ಲೂ ಕಾಡು ನಿರ್ಮಿಸಬಹುದು ಎಂದು ಸಾಧಿಸಿ ತೋರಿಸಿದೆ ಬೆಂಗಳೂರಿನ ಮಲ್ಲೇಶ್ವರಂನ ಭಾರತೀಯ ವಿಜ್ಞಾನ ಸಂಸ್ಥೆ. ಅದರ ಸಂಪೂರ್ಣ ಮಾಹಿತಿ ಪೂರ್ಣ ವರದಿಯನ್ನು 12.4.2016ರ ಪ್ರಜಾವಾಣಿ ಕರ್ನಾಟಕ ದರ್ಶನದಲ್ಲಿ ಅನಿತಾ ಈ ಅವರು ಮಾಡಿಕೊಟ್ಟಿದ್ದಾರೆ. ವರದಿಯನ್ನು ಓದಿ ಈ ಬಿರುಬಿಸಿಲಿನಲ್ಲಿ ತಂಗಾಳಿಯ ಅನುಭವವಾಯ್ತು.


    ಮುಂದೆ ಓದಿ
  • ಮಾರುಕಟ್ಟೆ ಅಭಿವೃದ್ಧಿಯಿಂದ ಸಮೃದ್ಧಿ ಮತ್ತು ಕೊರತೆಯ ಎರಡು ಲೋಕಗಳು ಏಕಕಾಲದಲ್ಲಿ ಸೃಷ್ಟಿಯಾಗಿರುವುದರ ಹಿಂದಿರುವ ಮಾರುಕಟ್ಟೆ ರಾಜಕಾರಣವನ್ನು, ಅದು ಸದ್ದಿಲ್ಲದ್ದೇ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕವನ್ನು ವಿಸ್ತರಿಸುತ್ತಿರುವುದನ್ನು, ಆದರೆ ಮೇಲ್ನೋಟಕ್ಕೆ ಮಾರುಕಟ್ಟೆ ಸಮಾನತೆ ಸಾಧಿಸುತ್ತಿದೆ ಎಂದು ತೋರುಗಾಣಿಸುತ್ತಿರುವುದನ್ನು ಚಿಂತಕರು ಮತ್ತು ಅಭಿವೃದ್ದಿ ಅಧ್ಯಯನ ಅಧ್ಯಾಪಕರೂ ಆದ ಡಾ. ಎಂ. ಚಂದ್ರಪೂಜಾರಿ ಅವರು 8.4.2016ರ ತಮ್ಮ ಕನ್ನಡಪ್ರಭ ಅಂಕಣ “ಸ್ಥಿತಿ-ಗತಿ”ಯಲ್ಲಿ ಆಳವಾಗಿ ವಿಶ್ಲೇಷಿಸಿದ್ದಾರೆ.


    ಮುಂದೆ ಓದಿ
  • ಡಾ.ಬಿ.ಆರ್.ಅಂಬೇಡ್ಕರ್ ರವರ 125 ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಮತ್ತು ದೇಶವ್ಯಾಪಿ ಆಯೋಜನೆಗೊಂಡ ಅಂಬೇಡ್ಕರ್ ಅಭಿಯಾನ ಮತ್ತು ಭೀಮಯಾತ್ರೆ ಎತ್ತುವ ಪ್ರಶ್ನೆಗಳನ್ನಿಟ್ಟುಕೊಂಡು ಏಪ್ರಿಲ್-2016 ಸಂವಾದ ಮಾಸಿಕದ ತಮ್ಮ ಅಂಕಣ ಜನಕಥನ -4 ರ ಸಂಚಿಕೆಗೆ.. ಯುವ ಜಾನಪದ ಚಿಂತಕ ಡಾ . ಅರುಣ್ ಜೋಳದಕೂಡ್ಲಗಿ ಬರೆದ ಅಧ್ಯಯನ ಯೋಗ್ಯ ಲೇಖನ ಇದಾಗಿದೆ.


    ಮುಂದೆ ಓದಿ
  • ಆರ್ಥಿಕ ಪ್ರಗತಿಯ ಜೊತೆಗೆ ಸಾಮಾಜಿಕ ಸೌಖ್ಯವನ್ನು, ಸಂತೋಷವನ್ನು ಸಾಧಿಸುವುದು ಸರ್ಕಾರಗಳ ಗುರಿಯಾದಾಗ ಮಾತ್ರ ಅದನ್ನು ನಿಜವಾದ ಅಭಿವೃದ್ಧಿ ಎಂದು ಕರೆಯಲು ಸಾಧ್ಯ ಎಂಬ ಸಮಾಜದ ಆಂತರಿಕ ಸ್ವಾಸ್ಥ್ಯಕ್ಕೆ ಒಟ್ಟು ನೀಡುವ ಪರ್ಯಾಯ ಚಿಂತನೆಯನ್ನು ಪ್ರಜಾವಾಣಿಯ ತಮ್ಮ 22.3.2016ರ ಕಡೆಗೋಲು ಅಂಕಣದಲ್ಲಿ ತಳಮಟ್ಟದಿಂದ ವಿಶ್ಲೇಷಿಸಿದ್ದಾರೆ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು.


    ಮುಂದೆ ನೋಡಿ