ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಅರ್ಜಿಗಳಲ್ಲಿ ಜಾತಿ ಕಾಲಂ ಭರ್ತಿ ಮಾಡುವುದನ್ನು ಕಡ್ಡಾಯ ಮಾಡುವುದು ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಗೆ ವಿರುದ್ಧವಾದುದು. ಈ ಕುರಿತ ಪ್ರಜಾವಾಣಿ 19.10.2016ರ ಸಂಪಾದಕೀಯದೊಂದಿಗೆ ನಮ್ಮ ಸಹಪಯಣ


    ಮುಂದೆ ಓದಿ
  • ಮನಸಿದ್ದರೆ ಮಾರ್ಗವಿದ್ದೇಯಿದೆ ಎಂಬುದಕ್ಕೆ ಉದಾಹರಣೆಯಾಗಿ ನಮಗೆ ಜಾರ್ಖಂಡ್ ನ ಹಳ್ಳಿಯ ಜನ ಕಾಣುತ್ತಾರೆ. ಇಂದು ಕರ್ನಾಟಕದ ಜನ ತೀವ್ರ ಬರಗಾಲ ಎದುರಿಸುತ್ತಿರುವ ಈ ಸಂದರ್ಭದಲ್ಲಿ “ಭೂಮಿಗೀತ” ಅಂತರ್ಜಾಲ ಪತ್ರಿಕೆಯ 2.6.2016ರ ಈ ಲೇಖನ ಮತ್ತೊಮ್ಮೆ ನಮ್ಮಲ್ಲಿ ಆಶಾವಾದ ಮೂಡಿಸಬಹುದೆಂಬ ಕಾರಣಕ್ಕೆ ಅದರೊಂದಿಗೆ ಸಹಪಯಣಿಸುತ್ತಿದ್ದೇವೆ.


    ಮುಂದೆ ನೋಡಿ
  • ಹಲವು ರಾಜ್ಯಗಳ ಜೀವನದಿ ಕಾವೇರಿಯ ಕೊಳ್ಳದ ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯಾರೂ ಪ್ರಯತ್ನಿಸದೆ, ಕೇವಲ ನದಿ ನೀರು ಬಳಕೆಗೆ ಯೋಜನೆಗಳನ್ನು ಮಾತ್ರ ರೂಪಿಸುತ್ತಿರುವುದರ ಕಡೆಗೆ 10.10.2016ರ ಕನ್ನಡಪ್ರಭದ ತಮ್ಮ ಅಂಕಣ ‘ಜಂಗಲ್ ಡೈರಿ’ ಯಲ್ಲಿ ವಿನೋದ್ ಕುಮಾರ್ ಬಿ ನಾಯ್ಕ ಅವರು ಗಮನ ಸೆಳೆದಿದ್ದಾರೆ. ಅಮೇರಿಕಾದ ಡೆಲಾವೇರ್ ನದಿಯನ್ನು ಅಲ್ಲಿನ ಜನರು ಸಂರಕ್ಷಿಸುತ್ತಿರುವ ವಿಧಾನವನ್ನು ಮನಮುಟ್ಟುವಂತೆ ವಿವರಿಸಿರುವ ಅವರು ನಮ್ಮ ಎಲ್ಲ ಜಲಮೂಲಗಳು ಹಾನಿಯಾಗುತ್ತಿರುವ ಕುರಿತು, ಮುಂದಿನ ದಿನಗಳ ದುರಂತಗಳ ಕುರಿತು ಈ ಮೂಲಕ ಎಚ್ಚರಿಸಿದ್ದಾರೆ.


    ಮುಂದೆ ಓದಿ
  • ಮಹಾನ್ ದೇಶದ ಕನಸು ಹೊತ್ತ ಭಾರತ ಈಗ ಎತ್ತ ಹೊರಟಿದೆ? ಎಂಬ ಪ್ರಶ್ನೆ ನಮ್ಮ ಆತ್ಮಾವಲೋಕನದಂತಿದೆ. ಜಿಡಿಪಿಯ ಅಭಿವೃದ್ಧಿಯ ನಮ್ಮ ಮಾನದಂಡ ನಮ್ಮನ್ನು ಉನ್ನತಿಯೆಡೆಗೆ ಕರೆದುಕೊಂಡು ಹೋಗದೆ ಅವನತಿಯೆಡೆಗೆ ಕೊಂಡೊಯ್ಯುತ್ತಿರುವುದನ್ನು ಬೇರೆ ದೇಶಗಳೊಂದಿಗಿನ ತಾಳೆಯೊಡನೆ ಮನಮುಟ್ಟುವಂತೆ ವಿಶ್ಲೇಷಿಸಿದ್ದಾರೆ ಆಕಾರ್ ಪಟೇಲ್ ಅವರು 10.10.2016 ರ ಪ್ರಜಾವಾಣಿಯ ತಮ್ಮ ಅಂಕಣದಲ್ಲಿ.


    ಮುಂದೆ ನೋಡಿ
  • ಕರ್ನಾಟಕದಲ್ಲಿ ರೂಪುಗೊಳ್ಳುತ್ತಿರುವ ಚಳವಳಿಗಳು ನಿಜಕ್ಕೂ ಆಶಾದಾಯಕವಾಗಿವೆ. ಆದರೆ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹೆಜ್ಜೆಗಳೇ ಅತ್ಯಂತ ಮಹತ್ವದ್ದು. ಅದು ಒಂದು ದಿನದ ಪ್ರತಿಭಟನೆಗೆ ಸಿಇಮಿತವಾಗಬಾರದು. ಅವು ರಾಜಕೀಯ ಪರ್ಯಾಯವನ್ನೂ ಕಂಡುಕೊಳ್ಳಬೇಕು, ಆರ್ಥಿಕವಾಗಿ ಹಿಂದುಳಿದಿರುವ ತಳ, ನಿರ್ಲಕ್ಷಿತ ಸಮುದಾಯಗಳಿಗೆ ಸ್ವಾವಲಂಬನೆಯ ದಾರಿಗಳನ್ನು ರೂಪಿಸುವ ರಚನಾತ್ಮಕ ದಿಕ್ಕುಗಳನ್ನೂ ತೋರಿಸಬೇಕು. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ವಿವೇಚಿಸಿರುವ ವಿ.ನಟರಾಜು ಅವರ 10.10.2016ರ ಕನ್ನಡಪ್ರಭ ಅಂಕಣ ‘ಪಠ್ಯಪ್ರಮಾಣ’ ನಮ್ಮ ಸಹಪಯಣಕ್ಕೆ…..


    ಮುಂದೆ ಓದಿ
  • ದೇವನೂರ ಮಹಾದೇವ ಅವರ ”ಕುಸುಮಬಾಲೆ” ಕಾದಂಬರಿಯನ್ನು ಲೇಖಕಿ ಸೂಸನ್ ಡೇನಿಯಲ್ ಅವರು 2015 ರಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು 2015ರ ಸಾಲಿನ ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನವನ್ನು ಪಡೆದಿದೆ. ಅವರಿಗೆ ನಮ್ಮ ಬನವಾಸಿಯಿಂದ ಅಭಿನಂದನೆಗಳು.


    ಮುಂದೆ ಓದಿ
  • ನಾಯಿಕೊಡೆಗಳ ಹಾಗೆ ಎಲ್ಲೆಲ್ಲೂ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ತಲೆ ಎತ್ತುತ್ತಿವೆ. ಬ್ರಿಟಿಷರ ಶಿಕ್ಷಣ ವಸಾಹತುಶಾಹಿ ಪಿತೂರಿಯಾಗಿತ್ತು ಎಂದು ಗುರುತಿಸುವ ನಾವು ಇಂದಿನ ಶಿಕ್ಷಣಪದ್ಧತಿ ಜಾಗತಿಕರಣದ ದೊಡ್ಡ ಪಿತೂರಿ ಎಂಬುದನ್ನು ಗುರುತಿಸಲು ವಿಫಲರಾಗಿದ್ದೇವೆ. ಮಕ್ಕಳನ್ನು ಈ ಮಾರುಕಟ್ಟೆಯ ಬಳಕೆದಾರರನ್ನಾಗಿ ರೂಪಿಸುವುದೇ ಈ ಶಿಕ್ಷಣದ ಉದ್ದೇಶವಾಗಿದೆ ಅದರೆಡೆಗೆ ನಮ್ಮ ಮನಸ್ಸನ್ನು ಸೆಳೆಯುವ ಶಿಕ್ಷಣ ತಜ್ಞ ಜಿ. ಎಸ್. ಜಯದೇವ ಅವರ ಲೇಖನ ಪ್ರಜಾವಾಣಿ 26.9.2016ರ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾಗಿದೆ


    ಮುಂದೆ ಓದಿ
  • ರಾಯಚೂರಿನ ಮಹಿಳೆಯರು ಆರಂಭಿಸಿರುವ ಸಾರಾಯಿ ನಿಷೇದದ ಹೋರಾಟ ಅಭಿವೃದ್ಧಿಯ ಕುರಿತ ಹೆಣ್ಣಿನ ದೃಷ್ಟಿಕೋನಕ್ಕೆ ಒಂದು ಮಾದರಿ. ಇಡೀ ಪುರುಷ ಕೇಂದ್ರಿತ,ಪುರುಷ ನಿರ್ಮಿತ ವ್ಯವಸ್ಥೆಯಲ್ಲಿ ಅವನ ಸಹಪಯಣಿಗಳೂ, ಪ್ರಪಂಚದ ಜನಸಂಖ್ಯೆಯ ಅರ್ಧದಷ್ಟಿರುವವಳು ಆದ ಹೆಣ್ಣನ್ನು, ನಿಜಕ್ಕೂ ನಿನಗೇನು ಬೇಕು? ಎಂಬ ಮುಖ್ಯ ಪ್ರಶ್ನೆಯನ್ನು ಎಂದಿಗೂ ಯಾರೂ ಕೇಳಿಲ್ಲ. ಹೆಣ್ಣಿನ ಅಂತಃಕರಣ, ವಿವೇಕಗಳು ಒಟ್ಟು ಅಭಿವೃದ್ಧಿಯ ಕೇಂದ್ರದಲ್ಲಿ ಸ್ಥಾಪನೆಗೊಂಡಾಗ ಮಾತ್ರ ನಾವೊಂದು ಆರೋಗ್ಯಕರ ಸಮಾಜವನ್ನು ಕಟ್ಟಬಲ್ಲೆವೇನೋ? ಈ ಹಿನ್ನೆಲೆಯಲ್ಲಿ ಚಿಂತಿಸುವ ಕೆ.ಪಿ.ಸುರೇಶ ಅವರ ವಿಜಯಕರ್ನಾಟಕದ 4.10.2016 ಅಂಕಣ ‘ಅಗೇಡಿ’ ಮನಸ್ಸನ್ನು ತಟ್ಟುತ್ತದೆ.


    ಮುಂದೆ ಓದಿ
  • ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸೌಲಭ್ಯ ನೀಡಿ ಅವರ ಜೀವನೋಪಾಯ ಸುಧಾರಿಸಲು ಹಾಕಿರುವ ಯೋಜನೆಯಾದ ಜೀವನೋಪಾಯ ಸಂವರ್ಧನಾ ಮಿಶನ್‍ನ ಉದ್ದೇಶವೇನೋ ಚೆನ್ನಾಗಿದೆ. ಆದರೆ ಅದರ ದೂರ ಪರಿಣಾಮ ಏನಿರಬಹುದು? ಈ ಕುರಿತು ಮನಮುಟ್ಟುವಂತೆ ವಿಶ್ಲೇಷಿಸಿದ್ದಾರೆ ಲೇಖಕ ಕೆ.ಪಿ.ಸುರೇಶ ಅವರು 13.9.2016ರ ವಿಜಯಕರ್ನಾಟಕದ ತಮ್ಮ ಅಂಕಣ “ಅಗೇಡಿ”ಯಲ್ಲಿ.


    ಮುಂದೆ ಓದಿ
  • ಮಕ್ಕಳ ಅಪೌಷ್ಟಿಕತೆ ನಿವಾರಣೆ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನೂ ಉಲ್ಲಂಘಿಸಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆಹಾರ ತಯಾರಿಕಾ ಮತ್ತು ಪೌಷ್ಟಿಕ ಮಾತ್ರೆಗಳನ್ನು ನೀಡುವ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು, ಇನ್ನೂ ವೈಜ್ಞಾನಿಕವಾಗಿ ನಿರ್ಣಯಿಸಿಲ್ಲದ ವಸ್ತುಗಳನ್ನು ಮಕ್ಕಳ ಮೇಲೆ ಪ್ರಯೋಗಿಸುತ್ತಿರುವ ಕರಾಳ ಮುಖವನ್ನು ಪ್ರಜಾವಾಣಿ 26.7.2016ರ ವಿಶ್ಲೇಷಣೆ ಅಂಕಣದಲ್ಲಿ ಶಾರದಾ ಗೋಪಾಲ ಅವರು ವಿಸ್ತೃತವಾಗಿ ವಿವರಿಸಿದ್ದಾರೆ.


    ಮುಂದೆ ಓದಿ