ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


  • ಅಭಿವೃದ್ಧಿ’ಯತ್ತ ದೃಷ್ಟಿ ನೆಟ್ಟಿರುವ ಸರ್ಕಾರಗಳು, ಬರದಿಂದ ಬಳಲುತ್ತಿರುವವರ ಸಂಕಟ ಅರಿಯುತ್ತಿಲ್ಲವೇಕೆ? ಈ ಪ್ರಶ್ನೆಗೆ ಉತ್ತರವನ್ನು ಹೇಳಬೇಕಾದವರು ನಮ್ಮನ್ನಾಳುವ ಪ್ರಭುಗಳು. ಆದರೆ ಇಂದಿನ ಗ್ರಾಮೀಣ ಭಾಗದ ಬಡ ಜನರ ಪರಿಸ್ಥಿತಿಯ ಭೀಕರತೆಯನ್ನು ಎಳೆಎಳೆಯಾಗಿ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ ಶಾರದಾ ಗೋಪಾಲ್ ಅವರು ಪ್ರಜಾವಾಣಿಯ 24.11.2016 ವಿಶ್ಲೇಷಣೆ ವಿಭಾಗದಲ್ಲಿ.


    ಮುಂದೆ ಓದಿ
  • ನೋಟು ರದ್ದತಿಯ ನಂತರದ ಪರಿಣಾಮಗಳ ಕುರಿತ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ದೂರಗಾಮಿ ಪರಿಣಾಮಗಳ ಕುರಿತು 24.11.2016ರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಕೆ.ಪಿ. ಸುರೇಶ ಅವರು ಸೂಕ್ಷ್ಮ ಒಳನೋಟಗಳನ್ನು ನೀಡಿದ್ದಾರೆ.


    ಮುಂದೆ ಓದಿ
  • ಐನೂರು ಸಾವಿರ ರೂಪಾಯಿಗಳ ರದ್ದತಿಯ ಹಿಂದಿರುವ ಬ್ಯಾಂಕ್ ಪ್ರಮಾದವನ್ನು ಮರೆಮಾಚುವ ಪ್ರಯತ್ನವನ್ನು ವಿಸ್ತೃತವಾಗಿ ವಿವರಿಸಿದ್ದಾರೆ 18.11.2016ರ ಕನ್ನಡಪ್ರಭದ ತಮ್ಮ ‘ಅನನ್ಯ’ ಅಂಕಣದಲ್ಲಿ ಹಿರಿಯ ಪತ್ರಕರ್ತರಾದ ಅಜಿತ್ ಪಿಳ್ಳೈಯವರು.


    ಮುಂದೆ ನೋಡಿ
  • ಕಾಗದದ ಹುಲಿ, ಬಿಳಿಯಾನೆಗಳ ಮೂಲಕ ಪರಿಸರ ರಕ್ಷಣೆಯ ಗಿಣಿಪಾಠ ಸಾಕು: ನೇರ ಕ್ರಮ ಬೇಕು ಎಂದು ಪ್ರಜಾವಾಣಿಯ ಕರ್ನಾಟಕದ ನಾಳೆಗಳು ವಿಶೇಷಾಂಕದ 11.11.2016ರ ಸಂಚಿಕೆಯಲ್ಲಿ ನಾಗೇಶ್ ಹೆಗಡೆಯವರು ಮನಸಿಗೆ ನಾಟುವಂತೆ ಬರೆದಿದ್ದಾರೆ.


    ಮುಂದೆ ನೋಡಿ
  • ಇದು ಜನಾಂದೋಲನಗಳ ಮಹಾಮೈತ್ರಿಯ ವಿನಮ್ರ ಕರಡು ಪ್ರಸ್ತಾಪ ಮಾತ್ರ.ಇದನ್ನು ಮುಕ್ತ ಚರ್ಚೆಗೆ ಒಳಪಡಿಸಿ ಎಲ್ಲರ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮಗೊಳಿಸಬೇಕಿದೆ. ನಿಮ್ಮ ಅಭಿಪ್ರಾಯಗಳನ್ನು ಮೇಲ್ಕಂಡ ವಿಳಾಸ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ.


    ಮುಂದೆ ಓದಿ
  • ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ, ಆರೋಗ್ಯಕ್ಕೆ ಹತ್ತಿರವಾಗಿ, ಪರಿಸರಕ್ಕೆ ಪೂರಕವಾಗುವಂಥ ಸುಸ್ಥಿರ ಉತ್ಪನ್ನ ತಯಾರಿ ಉದ್ದೇಶದೊಂದಿಗೆ ಸಸ್ಯಗಳ ನಾರಿನಂಶ ಹಾಗೂ ಕೃಷಿ ತ್ಯಾಜ್ಯದಿಂದ ಆಹಾರ ಶೇಖರಣಾ ಸಾಮಗ್ರಿಗಳನ್ನು ತಯಾರಿಸುತ್ತಿದ್ದಾರೆ ಬೆಂಗಳೂರಿನ ಸಮನ್ವಿ ಭೋಗರಾಜ್. ಪ್ಲಾಸ್ಟಿಕ್‌ಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಆಲೋಚನೆಗಳನ್ನೂ ಪ್ರಯೋಗಕ್ಕಿಳಿಸುತ್ತಿದ್ದಾರೆ. ಆ ಕುರಿತ ವಿಶೇಷ ವರದಿಯನ್ನು ಸುಮಲತ.ಎನ್ ಅವರು 8.11.2016ರ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಮಾಡಿದ್ದಾರೆ.


    ಮುಂದೆ ನೋಡಿ
  • ಕೃಷಿಯ ಸಮಗ್ರ ಬದಲಾವಣೆಯ ನೀಲಿ ನಕಾಶೆಯೊಂದನ್ನು 3.11.2016ರ ಪ್ರಜಾವಾಣಿ ವಿಶೇಷ ‘ಕರ್ನಾಟಕದ ನಾಳೆಗಳು’ ಪುರವಣಿಯಲ್ಲಿ ಪ್ರಕಟಿಸಿದೆ. ನಾವು ಇಡುತ್ತಿರುವ ತಪ್ಪು ಹೆಜ್ಜೆಗಳು ಮತ್ತು ಇಡಬೇಕಿರುವ ಸರಿ ಹೆಜ್ಜೆಗಳನ್ನು ಪತ್ರಕರ್ತರಾದ ಗಾಣಧಾಳು ಶ್ರೀಕಂಠ ಮತ್ತು ಆನಂದ ತೀರ್ಥ ಪ್ಯಾಟಿಯವರು ಕಟ್ಟಿಕೊಟ್ಟಿದ್ದಾರೆ.


    ಮುಂದೆ ಓದಿ
  • ಉನ್ನತ ಹುದ್ದೆಯಲ್ಲಿರುವ ಯಾರೂ ಸರ್ಕಾರಿ ಆಸ್ಪತ್ರೆ ಸುಧಾರಣೆಗೆ ಮನಸ್ಸು ಮಾಡುತ್ತಿಲ್ಲವೇಕೆ? ಹೆರಿಗೆ ಸಮಯದಲ್ಲಿ ತಾಯಂದಿರೇಕೆ ಸಾಯುತ್ತಾರೆ?ಎಂಬ ಪ್ರಶ್ನೆಯೊಂದಿಗೆ 25.10.2016ರ ಪ್ರಜಾವಾಣಿಯ ವಿಶ್ಲೇಷಣೆ ವಿಭಾಗದಲ್ಲಿ ಶಾರದಾಗೋಪಾಲ ಅವರು ಆಸ್ಪತ್ರೆಗಳಲ್ಲಿ ತಾಯಿಯರ ಮರಣ ಸಂಭವಿಸುತ್ತಿರುವ ಹಿಂದಿನ ಕಾರಣಗಳನ್ನು ಮನಮುಟ್ಟುವಂತೆ ವಿಶ್ಲೇಷಿಸಿದ್ದಾರೆ.


    ಮುಂದೆ ಓದಿ
  • ಬುದ್ಧಿಜೀವಿಗಳನ್ನು ದೂರುವುದರಿಂದ ಹೊಸ ಚಿಂತನೆ ಮೂಡುವುದಿಲ್ಲ. ಅದಕ್ಕೆ ದಿಟ್ಟತನ, ನಿರಂಕುಶಮತಿ ಮತ್ತು ಪ್ರಖರ ಚಿಂತನೆಯ ಅಗತ್ಯವಿದೆ ಎಂಬುದನ್ನು ಇತ್ತೀಚಿನ ಕೆಲವು ಸಂಘರ್ಷಗಳನ್ನು ಉದಾಹರಣೆಯಾಗಿ ಇಟ್ಟುಕೊಂಡು 28.10.2016ರ ಪ್ರಜಾವಾಣಿಯ ತಮ್ಮ ”ನಿಜ ದನಿ” ಅಂಕಣದಲ್ಲಿ ಪೃಥ್ವಿದತ್ತ ಚಂದ್ರಶೋಭಿಯವರು ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ.


    ಮುಂದೆ ಓದಿ
  • ಬೆಂಗಳೂರು ನಗರದ ಹೃದಯ ಭಾಗದಲ್ಲಿ ಕುರೂಪಿಯೂ ಅಯೋಗ್ಯವೂ ಆದ ಉಕ್ಕಿನ ಬೃಹತ್ ಮೇಲ್ಸೇತುವೆ ನಿರ್ಮಾಣದ ಯೋಜನೆ ಜಾರಿಗೊಳಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಹಿಂದಿರಬಹುದಾದ ರಾಜಕೀಯ ಹುನ್ನಾರಗಳು, ಮತ್ತು ಅದು ತಂದೊಡ್ಡಬಹುದಾದ ಪಾರಿಸಾರಿಕ ಹಾನಿ ಮತ್ತು ನಾಗರಿಕ ಬದುಕಿನ ಮೇಲಾಗುವ ಪರಿಣಾಮಗಳ ಕುರಿತು 28.10.2016ರ ಪ್ರಜಾವಾಣಿಯ ತಮ್ಮ ಗುಹಾಂಕಣ ಅಂಕಣದಲ್ಲಿ ರಾಮಚಂದ್ರ ಗುಹಾ ಅವರು ಆಳವಾಗಿ ಮತ್ತು ನಿಷ್ಠುರವಾಗಿ ವಿಶ್ಲೇಷಿಸಿದ್ದಾರೆ.


    ಮುಂದೆ ಓದಿ