ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
ಗಾಂಧಿವಾದದ ಹಿನ್ನೆಲೆಯಲ್ಲಿ ಸ್ತ್ರೀವಾದ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ಮಹಿಳಾ ಪಾತ್ರದ ವಸ್ತು ನಿರ್ವಹಣೆಯ ಕುರಿತು ವಿಮರ್ಶಾತ್ಮಕವಾಗಿ ಡಾ.ಪ್ರೀತಿ ಶುಭಚಂದ್ರ ಈ ಲೇಖನದಲ್ಲಿ ನಿರೂಪಿಸಿದ್ದಾರೆ. ಹಂಪಿ ವಿಶ್ವವಿದ್ಯಾಲಯ ಹೊರತರುತ್ತಿದ್ದ ‘ಮಹಿಳಾ ಅಧ್ಯಯನ’-ಉತ್ತರಾಯಣ ಸಂಚಿಕೆ ಜನವರಿ 1999, ಸಂಪುಟ 1, ಸಂಚಿಕೆ 1ರಲ್ಲಿ ಈ ಲೇಖನ ದಾಖಲಾಗಿದೆ. ಈ ಸಂಚಿಕೆಯ ಸಂಪಾದಕರು ಡಾ.ಎಚ್.ಎಸ್.ಶ್ರೀಮತಿಯವರು. ನಮ್ಮ ಮರು ಓದಿಗಾಗಿ ಈ ಲೇಖನ.
ಮುಂದೆ ಓದಿ -
-
-
ಡಾ. ಮಹೇಶ್ವರಿ.ಯು ಅವರು ಕುಸುಮಬಾಲೆ ಕುರಿತು ಬರೆದ ಬರಹ ಅವರ ‘ಮಧುರವೇ ಕಾರಣ’ ಎಂಬ ಲೇಖನಗಳ ಸಂಕಲನದಲ್ಲಿ ದಾಖಲಾಗಿದೆ. ಬರಹ ನಮ್ಮ ಮರು ಓದಿಗಾಗಿ…
ಮುಂದೆ ಓದಿ -
[In this essay presented by Kikkeri Narayan at an international conference, ‘Kusumbale’ is analyzed keeping Bhaktin’s theory at the centre. ಕಿಕ್ಕೇರಿ ನಾರಾಯಣ ಅವರು ಅಂತಾರಾಷ್ಟ್ರೀಯ ಸಮಾವೇಶ ಒಂದರಲ್ಲಿ ಮಂಡಿಸಿದ ಈ ಪ್ರಬಂಧದಲ್ಲಿ ಭಕ್ತಿನ್ ಥಿಯರಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡು ‘ಕುಸುಮಬಾಲೆ’ ಯನ್ನು ವಿಶ್ಲೇಷಿಸಲಾಗಿದೆ. ಆ ಲೇಖನ ನಮ್ಮ ಓದಿಗಾಗಿ …. ]
ಮುಂದೆ ನೋಡಿ -
ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ಕುರಿತು ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಬರೆದ ಬರಹ ಅವರ ‘ಅಮೂರ್ತತೆ ಮತ್ತು ಪರಿಸರ’ ಕೃತಿಯಲ್ಲಿದೆ. ಅದು ನಮ್ಮ ಬನವಾಸಿಯಲ್ಲಿ ಮರು ಓದಿಗಾಗಿ…..
ಮುಂದೆ ಓದಿ -
ರಚನಾವಾದವನ್ನು ಕೇಂದ್ರದಲ್ಲಿ ಇಟ್ಟುಕೊಂಡು ದೇವನೂರರ ‘ಕುಸುಮಬಾಲೆ’ಯನ್ನು ವಿಶ್ಲೇಷಿಸಿರುವ ವಿಮರ್ಶಕ ಕೆ.ವಿ.ತಿರುಮಲೇಶ್ ಅವರ ಈ ಬರಹ ಅವರ ‘ಉಲ್ಲೇಖ’ ಎಂಬ ಕೃತಿಯಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ.
ಮುಂದೆ ನೋಡಿ -
ವಿಮರ್ಶಕರಾದ ವಿ.ಎನ್.ಲಕ್ಷ್ಮೀನಾರಾಯಣ ಅವರು ದೇವನೂರ ಮಹಾದೇವ ಅವರ ‘ದ್ಯಾವನೂರು’ ಕಥಾ ಸಂಕಲನದ ಕುರಿತು ಬರೆದ ವಿಮರ್ಶೆ ಅವರ ‘ನಿರಂತರ’ ಸಂಕಲನದಲ್ಲಿ ದಾಖಲಾಗಿದೆ ಆ ಬರಹ ನಮ್ಮ ಮರು ಓದಿಗಾಗಿ.
ಮುಂದೆ ನೋಡಿ -
ಡಿ. ಎಸ್. ನಾಗಭೂಷಣ ಅವರು 1991ರಲ್ಲಿ ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಜನ್ಮಶತಾಬ್ಧಿ ಸಮಾರೋಪ ಸಮಾರಂಭದ ಅಂಗವಾಗಿ ನೆಡದ ಸಾಹಿತ್ಯ ಸಮ್ಮೇಳನದಲ್ಲಿ ಓದಲಾದ ಪ್ರಬಂಧದ ಪರಿಷ್ಕೃತ ರೂಪವನ್ನು 1991ರ ‘ಸಂವಾದ’ ಸಾಹಿತ್ಯ ಪತ್ರಿಕೆಯ 19ನೇ ಸಂಚಿಕೆಯಲ್ಲಿ ದಾಖಲಿಸಿದ್ದು ಅದರ ಮರು ಓದು ನಮಗಾಗಿ…
ಮುಂದೆ ಓದಿ -
‘ಎದೆಗೆ ಬಿದ್ದ ಅಕ್ಷರ’ ಕುರಿತು ಖ್ಯಾತ ವಿಮರ್ಶಕ, ಕಥೆಗಾರ ಮೊಗಳ್ಳಿ ಗಣೇಶ್ ಅವರು 10.2.2013ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗಾಗಿ ಬರೆದ ಬರಹವನ್ನು ನಮ್ಮ ಬನವಾಸಿಗಾಗಿ ನೀಡಿದ್ದಾರೆ. ಅವರಿಗೆ ನಮ್ಮ ಕೃತಜ್ಞತೆಗಳು.
ಮುಂದೆ ನೋಡಿ