ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
ಎ.ಎಂ.ಶಿವಸ್ವಾಮಿ ಅವರು ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಯನ್ನು ಹಾಡಿನ ಮೂಲಕ ಜುಲೈ 21, 2013 ರಂದು ನಿರೂಪಿಸಿರುವುದರ ಚಿತ್ರಿಕೆ.
ಮುಂದೆ ನೋಡಿ -
ಯಾಜಿ ಪ್ರಕಾಶನ ಪ್ರಕಟಿಸಿರುವ ಕವಿ, ವಿಮರ್ಶಕಿ ಡಾ.ಎಚ್.ಎಲ್. ಪುಷ್ಪಾ ಅವರ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಕೃತಿಯಲ್ಲಿ ‘ದೇವನೂರು ಮಹಾದೇವ ಅವರ ಕಥನ ಸಾಹಿತ್ಯದಲ್ಲಿ ಹೆಣ್ಣು’ ಎಂಬ ಈ ಲೇಖನ ಪ್ರಕಟವಾಗಿದೆ.
ಮುಂದೆ ನೋಡಿ -
ಕನ್ನಡ ಸಾಹಿತ್ಯ ಓದು: ದೇಶೀಯತೆಯ ಸವಾಲುಗಳು ಎಂಬ ವಿಮರ್ಶಕ ಡಾ. ಮೇಟಿ ಮಲ್ಲಿಕಾರ್ಜುನ ಅವರ ಈ ಲೇಖನವು ‘ಸಂಚಯ’ ಕನ್ನಡ ಸಾಹಿತ್ಯ, ಸಂಸ್ಕೃತಿ ಪತ್ರಿಕೆ (ಸಂಪಾದಕ: ಡಿ.ವಿ.ಪ್ರಹ್ಲಾದ್) ಸಂಚಿಕೆ 97ರಲ್ಲಿ ಪ್ರಕಟವಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ …
ಮುಂದೆ ನೋಡಿ -
ದೇವನೂರರ ಕುಸುಮಬಾಲೆ ಕುರಿತು ಯುವ ವಿಮರ್ಶಕ ಸುರೇಶ್ ನಾಗಲಮಡಿಕೆ ಅವರು ಜುಲೈ 23, 2013ರ ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಬರೆದ ಬರಹ.
ಮುಂದೆ ಓದಿ -
‘ಯಾರ ಜಪ್ತಿಗೂ ಸಿಗದ ಸಾಕವ್ವ’ ಎಂಬ ವಿಮರ್ಶಕಿ ಎಂ.ಎಸ್. ಆಶಾದೇವಿಯವರ ಈ ಲೇಖನ 8.6.2014ರ ಪ್ರಜಾವಾಣಿಯ ಮುಕ್ತಛಂದ ಪುರವಣಿಯ ಅವರ ಅಂಕಣ ‘ನಾರಿಕೇಳಾ’ದಲ್ಲಿ ಪ್ರಕಟವಾಗಿದೆ ಮತ್ತು ಅವರ ‘ನಾರಿಕೇಳಾ’ ಕೃತಿಯಲ್ಲಿ ದಾಖಲಾಗಿದ್ದು ನಮ್ಮ ಮರು ಓದಿಗಾಗಿ …..
ಮುಂದೆ ಓದಿ -
ಪ್ರತಿಸಂಸ್ಕೃತಿಯನ್ನು ರೂಪಿಸುತ್ತಿರುವ ಕತೆಗಳು ಎಂಬ ರಹಮತ್ ತರೀಕೆರೆಯವರ ಈ ಬರಹ ಅವರ ಪ್ರತಿಸಂಸ್ಕೃತಿ ಎಂಬ ಕೃತಿಯಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ ….
ಮುಂದೆ ಓದಿ -
ಸಂವಾದ (ಸಾಹಿತ್ಯಿಕ, ಸಾಂಸ್ಕೃತಿಕ ಸಂಕಲನ) ಸಂಚಿಕೆ : 22, ಜುಲೈ-ಆಗಸ್ಟ್ 1991, [ಸಂಪಾದಕರು : ಡಿ.ಎಸ್.ನಾಗಭೂಷಣ, ರಾಘವೇಂದ್ರ ಪಾಟೀಲ, ಸ.ಉಷಾ.] ರ ಸಂಚಿಕೆಯಲ್ಲಿ ಲಕ್ಷ್ಮೀಶ ತೋಲ್ಪಾಡಿ ಅವರು ‘ಪುರಾಣ ಮತ್ತು ಆಧುನಿಕ ಕನ್ನಡ ಸಾಹಿತ್ಯ’, ಎಂಬ ವಿಷಯವನ್ನು ಕುರಿತು ಬರೆದ ಟಿಪ್ಪಣಿ.
ಮುಂದೆ ನೋಡಿ -
[ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಖ್ಯಾತ ಪತ್ರಕರ್ತರೂ ಹಾಗೂ ಸಂಸ್ಕೃತಿ ಚಿಂತಕರೂ ಆದ ಎನ್.ಎಸ್. ಶಂಕರ್ ಅವರು ಜೂನ್ 2, 2014ರಂದು ‘ಅವಧಿ’ ಅಂತರ್ಜಾಲ ಪತ್ರಿಕೆಗೆ ಹಾಗೂ ಜನವರಿ 2015ರ ಕನ್ನಡ ಪುಸ್ತಕ ಪ್ರಾಧಿಕಾರದ ನಿಯತಕಾಲಿಕ, ಪುಸ್ತಕಲೋಕಕ್ಕೆ ಬರೆದ ಬರಹ ನಮ್ಮ ಮರು ಓದಿಗಾಗಿ…]
ಮುಂದೆ ನೋಡಿ -
ದೇವನೂರರ ; ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕಥೆ ಕುರಿತು ಅರವಿಂದ ಮಾಲಗತ್ತಿ ಅವರು ಬರೆದ ಈ ಲೇಖನ ಅವರ ‘ಸಾಹಿತ್ಯ ಸಾಕ್ಷಿ’ ಲೇಖನಗಳ ಸಂಗ್ರಹದಲ್ಲಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.
ಮುಂದೆ ನೋಡಿ -
ದೇವನೂರ ಮಹಾದೇವರ ‘ಒಡಲಾಳ’ ಕುರಿತು ಯು.ಆರ್.ಅನಂತಮೂರ್ತಿಯವರು ಬರೆದ ಲೇಖನಗಳು – (ರುಜುವಾತು – 12, ಅಕ್ಟೋಬರ್-ಡಿಸೆಂಬರ್, 83.)
ಹಾಗೂ
– (ತ.ಸು.ಶಾಮರಾಯರ ಅಭಿನಂದನ ಗ್ರಂಥ ‘ಸ್ವಸ್ತಿ’ಯಲ್ಲಿ ಪ್ರಕಟವಾದ ಲೇಖನ (ತಳುಕಿನ ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆ), ಮೈಸೂರು. 1983.) ಗಳಲ್ಲಿ ಪ್ರಕಟವಾಗಿದೆ
ಮುಂದೆ ಓದಿ