ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ರೈತಸಂಘದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ ನಡೆಸುತ್ತಿರುವ “ಜನಮನ ದರ್ಶನ’ ಪಾದಯಾತ್ರೆಯಲ್ಲಿ 8.3.2023ರಂದು ಭಾಗವಹಿಸಿದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಕಿರು ವಿಡಿಯೋ ರೂಪ]
ಮುಂದೆ ನೋಡಿ -
[ಬೆಂಗಳೂರಿನ, ಸಮಾಜವಾದಿ ವೇದಿಕೆಯ ವತಿಯಿಂದ 14.2.2023ರಂದು ಮೈಸೂರಿನಲ್ಲಿ ನಡೆದ “ಮುಕ್ತ ಮತದಾನ-ಸಮರ್ಥ ಸರ್ಕಾರ” ಜನತಂತ್ರದ ‘ನೈಜ ಹಕ್ಕುದಾರ’ರ ಧ್ವನಿ ಹಿಡಿದಿರುವ ‘ಡಯಾಗ್ನೋಸ್ಟಿಕ್” ವರದಿ ಬಿಡುಗಡೆ ಕಾರ್ಯಕ್ರಮದ ಫೋಟೋಗಳು ಮತ್ತು ಪತ್ರಿಕಾ ವರದಿಗಳು]
ಮುಂದೆ ನೋಡಿ -
[ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮುಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರಿನಿಂದ, ಬೆಂಗಳೂರಿಗೆ ಹಮ್ಮಿಕೊಂಡಿರುವ ‘ಭಾವೈಕ್ಯತಾ ಜಾಥಾ’ ಮೈಸೂರಿಗೆ ಆಗಮಿಸಿದ ವೇಳೆ, ಜಿಲ್ಲಾಧಿಕಾರಿ ಕಚೇರಿ ಬಳಿ 9.1.2023ರಂದು ಸೋಮವಾರ ಬಹಿರಂಗ ಸಭೆಯಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ ಸಂದರ್ಭದ ಫೋಟೋಗಳು.]
ಮುಂದೆ ನೋಡಿ -
[2019ರಲ್ಲಿ ಕಲ್ಕುಳಿ ವಿಠಲ ಹೆಗಡೆಯವರ ಮನೆಯಲ್ಲಿ ತೆಗೆದ ಫೋಟೋ! ಚಿತ್ರ ಕೃಪೆ ಮತ್ತು ವಿವರಣೆ- ಪ್ರೊ.ಪುರುಷೋತ್ತಮ ಬಿಳಿಮಲೆ ಚಿತ್ರದಲ್ಲಿ- ಬಲದಿಂದ ಎಡಕ್ಕೆ, ದೇವನೂರ ಮಹಾದೇವ, ಪ್ರೊ.ಪುರುಷೋತ್ತಮ ಬಿಳಿಮನೆ, ದೇವದಾಸ್ ನಾಯಕ್, ಪದ್ಮನಾಭಗೌಡ… ಮುಂತಾದವರು]
ಮುಂದೆ ನೋಡಿ -
[ದೇವನೂರ ಮಹಾದೇವ ಅವರು ಭಾಗವಹಿಸಿದ್ದ ಈ ಕೆಲವು ಕಾರ್ಯಕ್ರಮದ ಅಪರೂಪದ ಭಾವಚಿತ್ರಗಳು, ಕಳೆದೊಂದು ವರ್ಷದಲ್ಲಿ ನಮ್ಮ ಬನವಾಸಿಯ ಫೋಟೋ ಗ್ಯಾಲರಿ ಸೇರಿದೆ. ಎಂಟನೆಯ ವರ್ಷದ ವಾರ್ಷಿಕೋತ್ಸವಕ್ಕಾಗಿ “ಹಳತು-ಹೊನ್ನು” ಭಾವಚಿತ್ರಗಳು ಇಲ್ಲಿವೆ. ಇವನ್ನು ಹುಡುಕಿ ನಮಗೆ ಕಳಿಸಿದ ಸಹೃದಯರಿಗೆಲ್ಲಾ ಅನಂತ ಧನ್ಯವಾದಗಳು] ]
ಮುಂದೆ ನೋಡಿ -
[ನಮ್ಮ ಬನವಾಸಿಗೆ 8 ವರ್ಷ ತುಂಬಿದ 29.12.2022ರಂದು ಈ ವರ್ಷವಿಡೀ ದೇವನೂರರು ಭಾಗವಹಿಸಿದ ಮುಖ್ಯ ಕಾರ್ಯಕ್ರಮಗಳು, ಒಡನಾಡಿದ ವ್ಯಕ್ತಿಗಳೊಂದಿಗಿನ ವಿಶೇಷ ಫೋಟೋ ಗ್ಯಾಲರಿ]
ಮುಂದೆ ನೋಡಿ -
ಜರ್ಮನ್ ಕನ್ನಡ ಕೂಟದ ಕನ್ನಡಿಗರು, 2022ರ ಕರ್ನಾಟಕ ರಾಜ್ಯೋತ್ಸವಕ್ಕಾಗಿ ದೇವನೂರ ಮಹಾದೇವ ಅವರಿಂದ ಆಶಯ ನುಡಿಗಳನ್ನು ಬಯಸಿದಾಗ… ಆಡಿದ ಮಾತುಗಳು..]
ಮುಂದೆ ನೋಡಿ -
[ಕೋಲಾರದಲ್ಲಿ 1983 ರ ಫೆಬ್ರವರಿ 12 ಮತ್ತು 13ರಂದು ನಡೆದ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಸಂಘದ ಪ್ರಥಮ ಸಮ್ಮೇಳನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ ಬಿ.ಆರ್.ಅಂಬೇಡ್ಕರ್ ಅವರ ಪತ್ನಿಸವಿತಾ ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ, ಅಂದಿನ ಕೇಂದ್ರ ಸಚಿವರಾಗಿದ್ದ ರಾಮದಾಸ್ ಅಠವಳೆ ಮತ್ತು ದೇವನೂರ ಮಹಾದೇವ ಅವರಿರುವ ಈ ಹಳೆಯ ಫೋಟೂ ವಿವರವನ್ನು ನಮಗೆ ನೀಡಿದ ಮಿತ್ರರಿಗೆ ಧನ್ಯವಾದಗಳು]
ಮುಂದೆ ನೋಡಿ -
[ಸೌಹಾರ್ದ ಭಾರತ ನಿರ್ಮಾಣಕ್ಕಾಗಿ, ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 1-10-2022 ರಂದು ನಂಜನಗೂಡು ತಾಲೂಕು ಕಳಲೆ ಗ್ರಾಮದಿಂದ ತಾಂಡವಪುರ ಗ್ರಾಮದವರೆಗೆ ಪಾದಯಾತ್ರೆಯಲ್ಲಿ… ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ]
ಮುಂದೆ ನೋಡಿ -
[‘ಭಾರತ್ ಜೋಡೋ ಯಾತ್ರೆ’ಯು ಕರ್ನಾಟಕವನ್ನು 30.9.2022ರಂದು ಪ್ರವೇಶಿಸಿದ್ದು, ಅದರಲ್ಲಿ ಅನೇಕ ಚಿಂತಕರು, ಸಾಹಿತಿಗಳು, ಪ್ರಗತಿಪರರು ಭಾಗಿಯಾದರು. ದೇವನೂರ ಮಹಾದೇವ ಅವರು ಭಾಗಿಯಾದ ಕುರಿತ ಸುದ್ದಿಗಳು ಮತ್ತು ಚಿತ್ರಗಳು]
ಮುಂದೆ ನೋಡಿ