ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ದೇವನೂರು ಮಹಾದೇವ ಅವರು 2013 ರಲ್ಲಿ ಬೆಂಗಳೂರು ಬಸವ ಸಮಿತಿಗೆ ಉಪನ್ಯಾಸಕ್ಕೆ ಹೋದಾಗ.. ತೆಗೆದ ಚಿತ್ರಗಳನ್ನು ನಮ್ಮ ಬನವಾಸಿಗಾಗಿ ಕಳಿಸಿದ ಶಿವಕುಮಾರ ಪಾವಟೆ ಅವರಿಗೆ ಧನ್ಯವಾದಗಳು. ಚಿತ್ರದಲ್ಲಿ ದೇವನೂರು ಮಹಾದೇವ, ಶ್ರೀ ರಂಜಾನ್ ದರ್ಗಾ ಅವರು (ಬೆನ್ನು ತಿರುಗಿಸಿದವರು )ಮತ್ತು ಶಿವಕುಮಾರ ಪಾವಟೆ]
» -
[ಬೆಂಗಳೂರಿನ ಬಳಿಯ ಹೊಸಕೋಟೆಯಿಂದ 2023ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮನ್ನು ನೋಡಿ ಮಾತಾಡಲು ಉಪನ್ಯಾಸಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ದೇವನೂರ ಮಹಾದೇವ ಅವರು. ಜೊತೆಗೆ ಮಿತ್ರರಾದ ಶ್ರೀರಾಂ, ಅಭಿರುಚಿ ಗಣೇಶ್, ಮಗಳು ಡಾ.ಮಿತಾ ಹಾಗೂ ಅಳಿಯ ಅವಿನಾಶ್ ಅವರೊಂದಿಗೆ ಸೇರಿ ಕುವೆಂಪು ರಚಿತ ಬೊಮ್ಮನ ಹಳ್ಳಿಯ ಕಿಂದರಜೋಗಿ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಮತ್ತು ತಮ್ಮ ಎದೆಗೆ ಬಿದ್ದ ಅಕ್ಷರ ಕೃತಿಯ “ಹುಟ್ಟುತ್ತಾ ವಿಶ್ವ ಮಾನವ” ಲೇಖನವನ್ನು ಕಡ್ಡಾಯವಾಗಿ ಓದಲು ಸೂಚಿಸಿದರು. ಫೋಟೋ ಹಾಗೂ ವಿಡಿಯೋ ಕೃಪೆ-ಅಭಿರುಚಿ ಗಣೇಶ್]
» -
[ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಒಂಭತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ 2023ರ ಈ ವರ್ಷ ದೊರಕಿದ ಫೋಟೋಗಳ ಗುಚ್ಛ]
» -
[ಎಸ್‌ಕೆಎಂ, ಜೆಸಿಟಿಯು ಜಂಟಿಯಾಗಿ ಕರೆ ನೀಡಿದ್ದ
ಜನವಿರೋಧಿ ಮತ್ತು ಕಾರ್ಪೋರೇಟ್ ನೀತಿಗಳ ವಿರುದ್ದ ದುಡಿಯುವ ಜನರ “ಮಹಾಧರಣಿ” 2023ರ ನವೆಂಬರ್ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಿತು.
ಅದರ ಅಂಗವಾಗಿ ನಡೆದ ಬಹಿರಂಗ ಸಭೆಯ ಅತಿಥಿಗಳಾಗಿ ಮಾತಾಡಿದ ದೇವನೂರ ಮಹಾದೇವ ಅವರ ಮಾತುಗಳು…ಇಲ್ಲಿವೆ.]
» -
[10.10.2023ರಂದು ಡಾ.ಸುಶ್ರುತ ಅವರ ಕಚೇರಿಗೆ ದೇವನೂರು ಮಹಾದೇವ ಅವರು ಸೌಹಾರ್ದ ಭೇಟಿ ನೀಡಿದಾಗ…ಅವರು ದೇವನೂರ ಅವರ ಯೋಗಕ್ಷೇಮ ವಿಚಾರಿಸಿ, ಹಲವು ವಿಷಯಗಳ ಕುರಿತು ಅವರೊಂದಿಗೆ ಚರ್ಚಿಸಿದ ಸಂದರ್ಭ… ]
» -
[14.10.2023ರಂದು ಮೈಸೂರು ವಿಶ್ವವಿದ್ಯಾಲಯದ, ವಿಜ್ಞಾನ ಭವನದಲ್ಲಿ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿ.ಜಿ.ವಿ.ಎಸ್) ಸರ್ವಸದಸ್ಯರ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಸಭಿಕರಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರೊಂದಿಗೆ ಬಿಜಿವಿಎಸ್ ಪ್ರತಿನಿಧಿಗಳು. ](ಫೋಟೋ ಕೃಪೆ- ಅಹಮದ್ ಹಗರೆ)
» -
-
-
-
[ವಿಶ್ವ ಪ್ರಜಾಪ್ರಭುತ್ವ ದಿನವಾದ 15 ಸೆಪ್ಟೆಂಬರ್ 2023ರಂದು ಸಂವಿಧಾನದ ಪೀಠಿಕೆಯನ್ನು ಓದುವ ಅಭಿಯಾನವನ್ನು ಬೆಂಬಲಿಸಿ ಮಾತನಾಡಿದ ದೇವನೂರು ಮಹಾದೇವ ಅವರ ನುಡಿಗಳು]
»