ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ವಿವಿಧ ಭಾಗಗಳಿಂದ 10.3.2024ರಂದು ಮೈಸೂರಿಗೆ ಆಗಮಿಸಿದ್ದ ಆದಿವಾಸಿ ಮುಖಂಡರೊಂದಿಗೆ ಸಭೆಯಲ್ಲಿ ಭಾಗಿಯಾದ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು.
ಫೋಟೋ ಕೃಪೆ- ಶ್ರೀ ಶ್ರೀನಿ]
» -
[ಪ.ಮಲ್ಲೇಶ್-90, ರ ನೆನಪಿನಲ್ಲಿ “ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು” ವಿಚಾರಸಂಕಿರಣವು 2024, ಮಾರ್ಚ್ 1 & 2ರಂದು, ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಹಾಗೂ ಪ್ರೊ.ಸುಮಿತ್ರಾಬಾಯಿ ಅವರೊಂದಿಗೆ ಪ್ರೊ.ರವಿವರ್ಮ ಕುಮಾರ್ ಮತ್ತು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಮಾತುಕತೆ… ಫೋಟೋ ಕೃಪೆ- ಅಮೋಘ್ ಎಚ್.ಎಸ್.]
» -
[ದೇವನೂರ ಮಹಾದೇವ ಅವರ “ಅರ್ ಎಸ್ ಎಸ್ ಆಳ ಮತ್ತು ಅಗಲ” ಕೃತಿ ಹೊರಬಂದ ಸಂದರ್ಭದಲ್ಲಿ ಈ ಕುರಿತು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಮಾಧ್ಯಮದವರಿಗೆ ಉತ್ತರಿಸಿರುವುದು …. ]
» -
[ಮಂಡ್ಯ ಜಿಲ್ಲೆಯ ಪ್ರಗತಿಪರ ಒಕ್ಕೂಟ, 15.2.2024ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ, ‘ಮಂಡ್ಯ ಜಿಲ್ಲೆಯ ಉಳುಮೆ ಸಂಸ್ಕೃತಿಯ ಉಳುವಿಗಾಗಿ, ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ’ ನಡೆಸಿದ ಪ್ರತಿಭಟನಾ ಧರಣಿ ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು. ಕೃಪೆ-ಜನಶಕ್ತಿ ಮೀಡಿಯಾ]
» -
[ಮೈಸೂರಿನಲ್ಲಿ 10.2.2024ರಂದು ರಾಜ್ಯ ಮೂಲ ಆದಿವಾಸಿ ವೇದಿಕೆ, ಕರ್ನಾಟಕದ ವತಿಯಿಂದ ನಡೆದ “ರಾಜ್ಯದ 12 ಮೂಲ ಆದಿವಾಸಿಗಳ ಸಂವಿಧಾನ ಬದ್ಧ ಹಕ್ಕಿನ ಬಗ್ಗೆ ಸಮಾಲೋಚನ ಸಭೆ”ಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂಟ್ಯೂಬ್ ಕೊಂಡಿ ಮತ್ತು ಫೋಟೋಗಳು ]
» -
[3 ಫೆಬ್ರವರಿ 2024ರಂದು ಜಾಗೃತ ಕರ್ನಾಟಕ ವೇದಿಕೆಯು ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರು ಮಾಡಿದ “ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ” ಎರಡು ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷಗಳು ತುಂಬಿದ ನೆನಪಿನಲ್ಲಿ, ಮೈಸೂರಿನಲ್ಲಿ ನಡೆಸಿದ, “ಕುವೆಂಪು ಕ್ರಾಂತಿ ಕಹಳೆ- 50” -ಕವಿವಾಣಿಯಿಂದ ಕರ್ನಾಟಕ ಮಾದರಿಯೆಡೆಗೆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ್ದಾಗಿನ ಕೆಲ ಚಿತ್ರಗಳು… ಫೋಟೋ ಕೃಪೆ- ಶ್ರೀ ಶ್ರೀನಿ]
» -
[ಸೌಹಾರ್ದ ಕರ್ನಾಟಕ ಸಂಘಟನೆಯು ಹುತಾತ್ಮ ದಿನದ ಪ್ರಯುಕ್ತ ಮೈಸೂರಿನಲ್ಲಿ ಜನವರಿ 30ರಂದು ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಕೆಲ ಚಿತ್ರಗಳು… ಕೃಪೆ- ಶ್ರೀ ಶ್ರೀನಿ]
» -
-
[ಬಯಲು ಬಳಗ, ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ)ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಮೈಸೂರಿನಲ್ಲಿ 13 & 14 ಜನವರಿ 2024ರಂದು ನಡೆಸಿದ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಭಾಗಿಯಾಗಿ ಮಾತನಾಡಿದ ದೇವನೂರ ಮಹಾದೇವ ಅವರು… ಫೋಟೋ ಕೃಪೆ- ಶ್ರೀ ಶ್ರೀನಿ] ಮಾತುಗಳನ್ನು ರಂಗನಾಥ ಕಂಟನಕುಂಟೆ ಅವರ ಫೇಸ್ ಬುಕ್ ಲಿಂಕ್ ಮೂಲಕ ಆಲಿಸಬಹುದು
» -
[ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ8.1.2024 ರಂದು ನಡೆದ “ಗಾಂಧಿ- ಅಂಬೇಡ್ಕರ್ ಪ್ರಸ್ತುತತೆ”- ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ, ಚರಿತ್ರಕಾರ ಪ್ರೊ.ರಾಮಚಂದ್ರಗುಹಾ ಅವರು ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ, ಅವರ ಜೊತೆಗೆ ದೇವನೂರ ಮಹಾದೇವ ಹಾಗೂ ವಿವೇಕ ಶಾನಭಾಗ ಉಪಸ್ಥಿತರಿದ್ದರು… ಜೊತೆಗೆ ಅವರು ದೇಮ ಮನೆಗೆ ಭೇಟಿಯನ್ನು ನೀಡಿದ್ದರು. ವಿಡಿಯೋ ಕೃಪೆ-ಮೈಸೂರು ವಿಶ್ವವಿದ್ಯಾನಿಲಯ, ಫೋಟೋ ಕೃಪೆ- ಶ್ರೀ ಶ್ರೀನಿ, ]
»