ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ಮೈಸೂರಿನ ಬೋಧಿಸತ್ವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ, ಮತ್ತಿತರೊಂದಿಗೆ ದೇವನೂರ ಮಹಾದೇವ ಅವರು
ಚಿತ್ರಗಳನ್ನು ನೋಡಿ -
ಮೈಸೂರಿನ ದಲಿತ ಸಂಘರ್ಷ ಸಮಿತಿ ಹಮ್ಮಿ ಕೊಂಡಿದ್ದ ”ಸಂವಿಧಾನ ಮಾಸಾಚರಣೆ ಉದ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರೊಂದಿಗೆ ಅರವಿಂದ ಮಾಲಗತ್ತಿ, ರಾಜಶೇಖರ ಕೋಟಿ, ಮತ್ತಿತರರಿರುವ ಭಾವಚಿತ್ರ.
ಚಿತ್ರಗಳನ್ನು ನೋಡಿ -
ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ದಲಿತ ಸಂಘರ್ಷ ಸಮಿತಿಯೊಂದಿಗೆ ಹಮ್ಮಿಕೊಂಡಿದ್ದ ‘ಕನ್ನಡ ಶಾಲೆ ಉಳಿಸಿ ಹೋರಾಟ’ದ ಪ್ರತಿಭಟನಾಕಾರರಲ್ಲಿ ಒಬ್ಬರಾಗಿ ದೇವನೂರ ಮಹಾದೇವ ಅವರಿರುವ ಚಿತ್ರಗಳು …..
ಮಂದೆನೋಡಿ -
ಶ್ರೀ ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾದ ನಂತರ ದೇವನೂರ ಮಹಾದೇವ ಅವರ ಮನೆಗೆ ಭೇಟಿ ನೀಡಿ ಮಾತನಾಡಿದ ಸಂದರ್ಭದ ಛಾಯಾಚಿತ್ರಗಳು, ಆಂದೋಲನ ಪತ್ರಿಕೆ ಕೊಡುಗೆ….
ಮಂದೆನೋಡಿ -
ಸಾಹಿತಿಗಳಾದ ಅರವಿಂದ ಮಾಲಗತ್ತಿ ಮತ್ತು ಜಿ. ಕೆ. ಗೋವಿಂದರಾಜು ಅವರೊಂದಿಗೆ ಆತ್ಮೀಯ ಸಂಭಾಷಣೆಯಲ್ಲಿ ದೇವನೂರ ಮಹಾದೇವ…
ಮಂದೆನೋಡಿ -
ಅನಂತಮೂರ್ತಿ ಅವರು ತೀರಿಕೊಂಡಾಗ ಮೈಸೂರಿನಲ್ಲಿ ಅವರ ನೆನಪಿನಲ್ಲಿ, ಅವರ ಸಾಹಿತ್ಯದ ಮರು ಓದಿನ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಭಾವಚಿತ್ರಗಳು. ಆಂದೋಲನ ಪತ್ರಿಕೆಯ ಸಂಪಾದಕೀಯ ಬಳಗದ ಕೊಡುಗೆ.
ಮಂದೆನೋಡಿ -
ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಫೆಬ್ರವರಿ 23, 2014ರಂದು ಸಮದರ್ಶಿ ವೇದಿಕೆ, ಹೊಸತು ಪತ್ರಿಕೆ ಹಾಗೂ ವಿವಿ ಕಾಲೇಜಿನ ಕನ್ನಡ ಸಂಘಗಳ ಆಶ್ರಯದಲ್ಲಿ ನಡೆದ ”ಆಹಾರ ಪರಂಪರೆ, ಆರೋಗ್ಯ -ಸಂವಾದ” ಕಾರ್ಯಕ್ರಮದಲ್ಲಿ ಮಹಾದೇವ ಅವರ ಮಾತುಗಳ ಚಿತ್ರಮುದ್ರಿಕೆ.
ಮುಂದೆ ನೋಡಿ -
ಕೋಲಾರದ ಸಾಂಸ್ಕೃತಿಕ ಕೇಂದ್ರ ಆದಿಮದಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರೊಂದಿಗೆ ದೇವನೂರ ಮಹಾದೇವ ಅವರು ಇರುವ ಭಾವಚಿತ್ರಗಳನ್ನು ತೆಗೆದಿದ್ದ ಚಂದ್ರಶೇಖರ ಅತ್ತಿಬೆಲೆ ಅವರು ‘ನಮ್ಮ ಬನವಾಸಿ’ಯ ಜೋಳಿಗೆಗೆ ಅದನ್ನು ಹಾಕಿದ್ದಾರೆ.
ಮುಂದೆ ನೋಡಿ -
ಬೆಂಗಳೂರಿನಲ್ಲಿ ನಡೆದ ಟೈಮ್ಸ್ ಸಾಹಿತ್ಯೋತ್ಸವದಲ್ಲಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆಗೊಂಡಿತು. ಅನುವಾದಕಿ ಸೂಸನ್ ಡೇನಿಯಲ್ ಉಪಸ್ಥಿತರಿದ್ದರು. ಇದರೊಂದಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಮಹಾದೇವ ಅವರೊಂದಿಗೆ ” ಬದುಕು,ಸಾಹಿತ್ಯ ಹಾಗೂ ರಾಜಕೀಯ” ವಿಷಯ ಕುರಿತು ಸಂವಾದ ನಡೆಸಿಕೊಟ್ಟರು. ಆ ಸಂದರ್ಭದ ಭಾವಚಿತ್ರಗಳು ಇಲ್ಲಿವೆ. ಭಾವಚಿತ್ರಗಳನ್ನು ಒದಗಿಸಿ ಕೊಟ್ಟ ವಿಜಯ ಕರ್ನಾಟಕ ಸಂಪಾದಕೀಯ ಬಳಗಕ್ಕೆ ಧನ್ಯವಾದಗಳು.
ಬನವಾಸಿಗರು
ಮುಂದೆ ನೋಡಿ -
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 26.2.2013ರಂದು ನಡೆದ ದೇವನೂರ ಮಹಾದೇವ ಅವರ ಕುರಿತ ”ಕ್ರಿಯೆ ತತ್ವ ಮತ್ತು ಅಭಿವ್ಯಕ್ತಿ ” ವಿಚಾರ ಸಂಕಿರಣದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಧ್ವನಿ ಮುದ್ರಿಕೆ.
ಭಾಷಣವನ್ನು ಕೇಳಿ...