ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
16.11.2015ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೌಡ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿ ಒತ್ತಾಯಿಸಿ ನಡೆದ ಬಹಿರಂಗ ಸಭೆಯಲ್ಲಿ ಮಹಾದೇವ ಅವರು ಆಡಿದ ಮಾತುಗಳ ಧ್ವನಿ ಮುದ್ರಿಕೆ.
ಮುಂದೆ ನೋಡಿ -
18.10.2015 ರಂದು ಬೆಂಗಳೂರಿನಲ್ಲಿ ನಡೆದ ಎ.ಟಿ.ರಾಮಸ್ವಾಮಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಫೋಟೋಗಳು ಹಾಗೂ ವಿಡಿಯೋ. ಚಿತ್ರದಲ್ಲಿ ದೇವನೂರ ಮಹಾದೇವ ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಎ.ಟಿ.ರಾಮಸ್ವಾಮಿ, ಮತ್ತಿತರರಿದ್ದಾರೆ.
[ಫೋಟೋಗಳನ್ನು ನಮ್ಮ ಬನವಾಸಿಗೆ ನೀಡಿದ ಕೀರ್ತಿಶ್ ವಿ.ಜಿ ಅವರಿಗೆ ವಂದನೆಗಳು]
ಮುಂದೆ ನೋಡಿ -
29.10.2015ರಂದು ಚಾಮರಾಜನಗರ ತಾಲೂಕಿನ ಅಮೃತಭೂಮಿಯಲ್ಲಿ ನಡೆದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದ ಉದ್ಘಾಟನೆ ಮಾಡಿದ ಮಹಾದೇವ ಅವರ ಮಾತುಗಳ ಚಿತ್ರ ಮುದ್ರಿಕೆ.
ಮುಂದೆ ನೋಡಿ -
ವಾರ್ತಾ ಇಲಾಖೆ ನಿರ್ಮಿಸಿರುವ ದೇವನೂರ ಮಹಾದೇವ ಅವರ ಸಾಕ್ಷ್ಯಚಿತ್ರದ ಎರಡು ಭಾಗಗಳು ಇಲ್ಲಿವೆ. ಇದನ್ನು ನಮ್ಮ ಬನವಾಸಿಯಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳು.
ಮುಂದೆ ನೋಡಿ -
-
ಸರ್ವೋದಯ ಪಕ್ಷದ ಅಧ್ಯಕ್ಷರಾದ ದೇವನೂರ ಮಹಾದೇವ ಅವರು ಮಹಾದಾಯಿ ಹೋರಾಟಕ್ಕೆ ಸಾಥ್ ನೀಡಿ ನರಗುಂದದಲ್ಲಿ ರೈತರನ್ನು ಉದ್ದೇಶಿಸಿ 3/10/2015ರಂದು ಮಾತನಾಡಿದ ಧ್ವನಿ ಮುದ್ರಿಕೆ.
ಮುಂದೆ ನೋಡಿ -
ಮಹಾದೇವ ಅವರು ಮಿತ್ರರೊಂದಿಗಿರುವ ಅಪರೂಪದ ಹಳೆಯ ಚಿತ್ರ. ಎನ್.ಎಸ್.ಶಂಕರ್, ಸಿದ್ಧಲಿಂಗಯ್ಯ, ಮೊಗಳ್ಳಿ ಗಣೇಶ್, ಕೆ.ಬಿ. ಸಿದ್ಧಯ್ಯ, ಎಚ್. ಗೋವಿಂದಯ್ಯ ಇನ್ನಿತರರಿದ್ದಾರೆ. [ಚಿತ್ರ ಕೊಡುಗೆ-ಅಭಿರುಚಿ ಗಣೇಶ್]
ಮುಂದೆ ನೋಡಿ -
ಪಿ .ಲಂಕೇಶ್ ಅವರಿಗೆ 60 ವರ್ಷ ತುಂಬಿದ ಸಂದರ್ಭದ ಕಾರ್ಯಕ್ರಮದ ಅಪರೂಪದ ಚಿತ್ರಗಳು. ಮಹಾದೇವ ಅವರೊಂದಿಗೆ ಜಿ.ಎಸ್. ಶಿವರುದ್ರಪ್ಪ, ಚದುರಂಗ, ಡಿ.ಆರ್.ನಾಗರಾಜ್, ಎಚ್.ಎಲ್.ಕೇಶವಮೂರ್ತಿ ಅವರು ಇದ್ದಾರೆ.
ಮುಂದೆ ನೋಡಿ -
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಜಂಟಿಯೋಜನೆಯಾಗಿ ನಿರ್ಮಿಸಿರುವ ಶ್ರೀ ದೇವನೂರ ಮಹಾದೇವ ಅವರ ಕುರಿತ ಸಾಕ್ಷ್ಯ ಚಿತ್ರ. ಸಾಕ್ಷ್ಯ ಚಿತ್ರವನ್ನು ನಮ್ಮ ಬನವಾಸಿಯಲ್ಲಿ ದಾಖಲಿಸಲು ಒಪ್ಪಿಗೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹೃದಯ ಮನಸುಗಳಿಗೆ ಧನ್ಯವಾದಗಳು.
-ಬನವಾಸಿಗರು
ಮುಂದೆ ನೋಡಿ -
ದೇವನೂರ ಮಹಾದೇವ ಅವರು ಇತಿಹಾಸ ಪ್ರಸಿದ್ಧ ಬಾದಾಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋಗಳು. ಜೊತೆಯಲ್ಲಿ ಮಿತ್ರರಾದ ರಾಮು, ಪ್ರಾಚ್ಯವಸ್ತು ಅಧ್ಯಯನಕಾರರಾದ ರವಿ ಕೋರಿ ಶೆಟ್ಟರ್, ಕಲಾವಿದರಾದ ಸಚ್ಚಿದಾನಂದ ಇದ್ದಾರೆ.
ಮುಂದೆ ನೋಡಿ