ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ದೇವನೂರ ಮಹಾದೇವ ಅವರ ಮೂರು ಕಥೆಗಳಾದ ‘ಡಾಂಬರು ಬಂದುದು’, ‘ಮಾರಿಕೊಂಡವರು’, ಮತ್ತು ‘ಗ್ರಸ್ತರು’ ಗಳನ್ನು ಸಂಯೋಜಿಸಿ ಶಿವರುದ್ರಯ್ಯ ಅವರು ನಿರ್ದೇಶಿಸಿರುವ ‘ಮಾರಿಕೊಂಡವರು’ ಚಿತ್ರಕ್ಕೆ 2015ರ ಸಾಲಿನ ಎರಡನೇ ಅತ್ಯುತ್ತಮ ಚಿತ್ರದ ರಾಜ್ಯಪ್ರಶಸ್ತಿ ದೊರಕಿರುವ ಹಿನ್ನೆಲೆಯಲ್ಲಿ ಚಿತ್ರತಂಡ 23.5.2016ರಂದು ಏರ್ಪಡಿಸಿದ್ದ ಚಿತ್ರದ ವಿಶೇಷ ಪ್ರದರ್ಶನ ಸಂದರ್ಭದ ಕೆಲವು ಚಿತ್ರಗಳು . ದೇವನೂರ ಮಹಾದೇವ, ನಿರ್ದೇಶಕ ಶಿವರುದ್ರಯ್ಯ, ಗಿರೀಶ್ ಕಾಸರವಳ್ಳಿ, ಬಸಂತ್ಕುಮಾರ್ ಪಾಟೀಲ್, ಸಂಚಾರಿ ವಿಜಯ್, ಮತ್ತಿತರರು ಇದ್ದಾರೆ.
ಮುಂದೆ ನೋಡಿ -
ಮಂಡ್ಯದಲ್ಲಿ 9.5.2016 ರಂದು ನಡೆದ ಜಾತಿಮಕ್ತ ಮನಸ್ಸುಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡುತ್ತಿರುವ ದೇವನೂರ ಮಹಾದೇವ. ಮಂಡ್ಯದ ರೈತಸಭಾಂಗಣದಲ್ಲಿ ವಿಶ್ವಮಾನವ ವಿಚಾರವೇದಿಕೆ ವತಿಯಿಂದ ನಡೆದ ಜಾತಿಮುಕ್ತ ಮನಸ್ಸುಗಳ ಸಮ್ಮಿಲನ – ಜಾತ್ಯತೀತ ಒಲವಿನವರ ಹಾಗೂ ಅಂತರ್ಜಾತಿ ಮತ್ತು ಅಂತರ್ಧರ್ಮಿಯ ವಿವಾಹಿತರ ರಾಜ್ಯಮಟ್ಟದ ಸಮಾವೇಶವನ್ನು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಉದ್ಘಾಟಿಸಿದರು. ಇದಕ್ಕೂ ಮುನ್ನ ಆಶಯ ನುಡಿಗಳನ್ನಾಡಿದ ಮೈಸೂರಿನ ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವರವರು…… ಸ್ನೇಹಿತರೆ, ನಾನು ಯಾವತ್ತೂನು ಆಶಯ ಭಾಷಣ ಮಾಡಿದವನಲ್ಲ,…
ಮುಂದೆ ನೋಡಿ -
ಮಂಡ್ಯದ [ಆಶಿತಾ] ಶಾಹಿಸ್ತಾ ಮತ್ತು ಶಕೀಲ್ ಅಹಮದ್ ನಿಖಾಹ್ ಆರತಕ್ಷತೆ 18.4.2016 ರಂದು ಮೈಸೂರಿನಲ್ಲಿ ನಡೆಯಿತು. ಅದರಲ್ಲಿ ದೇವನೂರ ಮಹಾದೇವ ಭಾಗವಹಿಸಿದ್ದ ಫೋಟೋಗಳು
ಮುಂದೆ ನೋಡಿ -
ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆ ‘ಚಿಂತನ ಚಿತ್ತಾರ’ ದೇವನೂರ ಮಹಾದೇವ ಅವರು ನಿಯಮಿತವಾಗಿ ಭೇಟಿ ನೀಡುವ ತಾಣಗಳಲ್ಲಿ ಒಂದು. ಅಲ್ಲಿಗೆ ಭೇಟಿ ನೀಡಿದಾಗಿನ ಒಂದು ಭಾವಚಿತ್ರ.
ಮುಂದೆ ನೋಡಿ -
ಪಂಚಾಯತ್ ಚುನಾವಣೆ -2016ರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಸರ್ವೋದಯ ಪಕ್ಷದ ಅಧ್ಯಕ್ಷರಾದ ದೇವನೂರ ಮಹಾದೇವ, ಅಭಿರುಚಿ ಗಣೇಶ್, ಬಡಗಲಪುರ ನಾಗೇಂದ್ರ ಮತ್ತಿತರರು…..
ಮುಂದೆ ನೋಡಿ -
ಸರ್ವೋದಯ ಕರ್ನಾಟಕ ಮತ್ತು ಸ್ವರಾಜ್ ಅಭಿಯಾನ 16.1.2016 ರಂದು ಮೈಸೂರಿನಲ್ಲಿ ನಡೆಸಿದ್ದ ಪ್ರೊ. ಯೋಗೇಂದ್ರ ಯಾದವ್ ಅವರೊಂದಿಗೆ ಸಾರ್ವಜನಿಕರ ಸಂವಾದ ಕಾರ್ಯಕ್ರಮದ ನಂತರ ದೇವನೂರ ಮಹಾದೇವ ಮತ್ತು ಇನ್ನಿತರರೊಂದಿಗೆ….[ಚಿತ್ರ ಕೃಪೆ-ಪರಶುರಾಮೆಗೌಡ]
ಮುಂದೆ ನೋಡಿ -
-
ನೈಸರ್ಗಿಕ ಕೃಷಿಕರಾದ ಸುಭಾಷ್ ಪಾಳೇಕಾರ್ ಅವರು ದೇವನೂರ ಮಹಾದೇವ ಅವರ ಬನವಾಸಿಗೆ ಬಂದಾಗ ಅವರ ಮಾತುಗಳನ್ನು ಆಲಿಸುತ್ತಿರುವ ಕೃಷಿ ಆಸಕ್ತರು …
ಮುಂದೆ ನೋಡಿ -
2015ರ ಮೊದಲ ದಿನಗಳಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮಹಾದೇವ ಅವರು, ಮಗಳು ಉಜ್ವಲಾ ಅವರೊಂದಿಗೆ…ತಿರುಗಾಟದಲ್ಲಿ…
ಮುಂದೆ ನೋಡಿ -