ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ಆದಿವಾಸಿಗಳ ಅಂತರಂಗದ ಬಂಧು, ಹೋರಾಟಗಾರ ಹಾಗೂ ಅದ್ಭುತ ಕಲಾವಿದರಾದ ಸೋಮಣ್ಣ ಅವರಿಗೆ, ಹೆಗ್ಗಡದೇವನಕೋಟೆಯ ಮೊತ್ತ ಹಾಡಿಯಲ್ಲಿ 12.11.2016ರಂದು “ಜನರಾಜ್ಯೋತ್ಸವ” ಪ್ರಶಸ್ತಿ ನೀಡಿ ಗೌರವಿಸಿ, ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು. ಈ ಸಂದರ್ಭದ ಕೆಲವು ಫೋಟೋಗಳು ಹಾಗೂ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಆಡಿದ ಅಂತರಂಗದ ಮಾತುಗಳು ಮತ್ತು ಸೋಮಣ್ಣ ಅವರ ಕರುಳನುಡಿಯ ಯುಟ್ಯೂಬ್ ಕೊಂಡಿ…
ವಿಡಿಯೋ ಕೃಪೆ- ಹರ್ಷಕುಮಾರ್ ಕುಗ್ವೆ ಅವರ ಮುಖಪುಸ್ತಕ]
ಮುಂದೆ ನೋಡಿ -
ದೆಹಲಿಯಲ್ಲಿ 2.10.2016 ರಂದು ಸ್ವರಾಜ್ ಅಭಿಯಾನ ವೇದಿಕೆಯು ಸ್ವರಾಜ್ ಇಂಡಿಯಾ ಪಕ್ಷವಾಗಿ ಉದ್ಘಾಟನೆಗೊಂಡ ಸಮಾರಂಭದಲ್ಲಿ ದೇವನೂರ ಮಹಾದೇವ, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್, ಯೋಗೇಂದ್ರ ಯಾದವ್, ಕೆ.ಎಸ್. ಪುಟ್ಟಣಯ್ಯ, ಕೆ.ಟಿ.ಗಂಗಾಧರ್ ಇತರರು ಇದ್ದಾರೆ.
ಮುಂದೆ ನೋಡಿ -
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 4.10.2016 ರಂದು ನಡೆದ ಉಡುಪಿ ಚಲೋ ಉಧ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರ ಮಾತುಗಳು…
ಮುಂದೆ ನೋಡಿ -
ನವಕರ್ನಾಟಕ ಪ್ರಕಾಶನದವತಿಯಿಂದ 28.8.2016 ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಮತ್ತು ಹಿಂದೂ ; ಬದುಕಿನ ಸಮೃದ್ಧ ಅಡಕಲು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ದೇವನೂರ ಮಹಾದೇವ ಅವರು ಬರಗೂರು ರಾಮಚಂದ್ರಪ್ಪ, ಸಿದ್ಧನಗೌಡ ಪಾಟೀಲ, ಜಿ. ರಾಮಕೃಷ್ಣ ಮುಂತಾದವರೊಂದಿಗೆ….
ಮುಂದೆ ನೋಡಿ -
ಸ್ವೇಟರ್ ಮತ್ತು ಟೋಪಿ ತೊಟ್ಟು ವಿಭಿನ್ನ ಭಾವಭಂಗಿಯಲ್ಲಿರುವ ದೇವನೂರ ಮಹಾದೇವ ಅವರ ಫೋಟೋಗಳನ್ನು ಅಭಿರುಚಿ ಗಣೇಶ್ ನಮ್ಮಬನವಾಸಿಗೆ ಕೊಡುಗೆಯಾಗಿ ನೀಡಿದ್ದಕ್ಕೆ ವಂದನೆಗಳು
ಮುಂದೆ ನೋಡಿ -
ಬೀದರ್ ನ ಔರಾದ್ ಗೆ ಇತ್ತೀಚೆಗೆ ದೇವನೂರ ಮಹಾದೇವ ಅವರು ಭೇಟಿ ನೀಡಿದ್ದ ಸಂದರ್ಭದ ಫೋಟೋಗಳನ್ನು ತೆಗೆದವರು ಬರಹಗಾರರಾದ ಅಬ್ದುಲ್ ರಶೀದ್.
ಮುಂದೆ ನೋಡಿ -
ಅಪರೂಪದ ಫೋಟೋ -ಅಬ್ದುಲ್ ರಶೀದ್ ಅವರ ಮುಖಪುಸ್ತಕ ಕೃಪೆ. 1986 ರ ಸುಮಾರಿಗೆ ಫೋಟೋಗ್ರಾಫರ್ ನೇತ್ರರಾಜು ಅವರು ತೆಗೆದದ್ದು. ಚಿತ್ರದಲ್ಲಿ ದೇವನೂರ ಮಹಾದೇವ ಮತ್ತವರ ಮಿತ್ರರಾದ ರಾಮು ಮತ್ತು ಅಬ್ದುಲ್ ರಶೀದ್.
ಮುಂದೆ ನೋಡಿ -
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ [ರಿ] ವತಿಯಿಂದ ದಿನಾಂಕ 11.6.2016ರಂದು ನಡೆದ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2015 ರ ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ಫೋಟೋಗಳು.
ಮುಂದೆ ನೋಡಿ -
ಮೇ 21 ಮತ್ತು 22, 2016 ರಂದು ಬೆಂಗಳೂರಿನಲ್ಲಿ ಜನಸಂಗ್ರಾಮ ಪರಿಷತ್ ವತಿಯಿಂದ ನಡೆದ ‘ಬಿಕ್ಕಟ್ಟಿನಲ್ಲಿ ಭಾರತ ಗಣರಾಜ್ಯ ಮತ್ತು ಪ್ರಸ್ತುತ ರಾಜಕೀಯ ಸಂದರ್ಭ’ ಎಂಬ ವಿಚಾರಸಂಕಿರಣದಲ್ಲಿ ಸನ್ಮಾನ್ಯ ಎಸ್.ಪಿ. ಶುಕ್ಲಾ, ನಿವೃತ್ತ ಕಾರ್ಯದರ್ಶಿ [ಹಣಕಾಸು ಮತ್ತು ವ್ಯಾಪಾರ], ಭಾರತ ಸರ್ಕಾರ ಇವರಿಂದ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ, ರಾಘವೇಂದ್ರ ಕುಷ್ಟಗಿ, ಶಾಸಕರಾದ ಕೆ.ಎಸ್. ಪುಟ್ಟಣ್ಣಯ, ಪಿ.ರಾಜೀವ್, ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮುಂತಾದವರಿದ್ದಾರೆ.
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಮೂರು ಕಥೆಗಳಾದ ‘ಡಾಂಬರು ಬಂದುದು’, ‘ಮಾರಿಕೊಂಡವರು’, ಮತ್ತು ‘ಗ್ರಸ್ತರು’ ಗಳನ್ನು ಸಂಯೋಜಿಸಿ ಶಿವರುದ್ರಯ್ಯ ಅವರು ನಿರ್ದೇಶಿಸಿರುವ ‘ಮಾರಿಕೊಂಡವರು’ ಚಿತ್ರಕ್ಕೆ 2015ರ ಸಾಲಿನ ಎರಡನೇ ಅತ್ಯುತ್ತಮ ಚಿತ್ರದ ರಾಜ್ಯಪ್ರಶಸ್ತಿ ದೊರಕಿರುವ ಹಿನ್ನೆಲೆಯಲ್ಲಿ ಚಿತ್ರತಂಡ 23.5.2016ರಂದು ಏರ್ಪಡಿಸಿದ್ದ ಚಿತ್ರದ ವಿಶೇಷ ಪ್ರದರ್ಶನ ಸಂದರ್ಭದ ಕೆಲವು ಚಿತ್ರಗಳು . ದೇವನೂರ ಮಹಾದೇವ, ನಿರ್ದೇಶಕ ಶಿವರುದ್ರಯ್ಯ, ಗಿರೀಶ್ ಕಾಸರವಳ್ಳಿ, ಬಸಂತ್ಕುಮಾರ್ ಪಾಟೀಲ್, ಸಂಚಾರಿ ವಿಜಯ್, ಮತ್ತಿತರರು ಇದ್ದಾರೆ.
ಮುಂದೆ ನೋಡಿ