ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ಜನಸಮುದಾಯದೊಂದಿಗೆ ದೇವನೂರ ಮಹಾದೇವ…. ಫೋಟೋಗಳನ್ನು ಸಂಗ್ರಹಿಸಿಕೊಟ್ಟ ಆಪ್ತ ಬಳಗಕ್ಕೆ ನಮ್ಮ ಬನವಾಸಿ ತಂಡದ ವಂದನೆಗಳು..


    ಮುಂದೆ ನೋಡಿ
  • ಯುವಜನರೊಂದಿಗೆ ದೇವನೂರ ಮಹಾದೇವ…..ಫೋಟೋಗಳನ್ನು ಸಂಗ್ರಹಿಸಿಕೊಟ್ಟ ಆಪ್ತ ಬಳಗಕ್ಕೆ ನಮ್ಮ ಬನವಾಸಿ ತಂಡದ ವಂದನೆಗಳು..


    ಮುಂದೆ ನೋಡಿ
  • ದೇವನೂರ ಮಹಾದೇವ ಅವರೊಂದಿಗೆ……
    ಫೋಟೋಗಳನ್ನು ಸಂಗ್ರಹಿಸಿಕೊಟ್ಟ ಸಂಗಾತಿಗಳಿಗೆ ನಮ್ಮ ಬನವಾಸಿ ತಂಡದ ವಂದನೆಗಳು..


    ಮುಂದೆ ನೋಡಿ
  • 23.12.2018ರಂದು ಪಾಂಡವಪುರದ ಎಣ್ಣೆಹೊಳೆ ಕೊಪ್ಪಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ, ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬ ಹಾಗೂ ರೈತದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್, ಅವಿಕ್ ಸಹಾ, ದೇವನೂರ ಮಹಾದೇವ, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿಯವರು, ದರ್ಶನ್ ಪುಟ್ಟಣ್ಣಯ್ಯ,… ಇನ್ನಿತರರು ಹಾಜರಿರುವ ಚಿತ್ರಗಳು….


    ಮುಂದೆ ನೋಡಿ
  • ಮೈಸೂರು ವಿವಿ ಸ್ವಚ್ಛತಾ ಕಾರ್ಮಿಕರ ಕುರಿತು ವಿಶ್ವವಿದ್ಯಾನಿಲಯಡಾ ನಿಯಮಬಾಹಿರ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದಿಂದ 4.9.2018 ರಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ದೇವನೂರ ಮಹಾದೇವ ….
    “ವಿಶ್ವವಿದ್ಯಾನಿಲಯವನ್ನು ಕಸ ಗುಡಿಸಿ ಸ್ವಚ್ಛಗೊಳಿಸಿದ ಬಡ ಕಾರ್ಮಿಕರನ್ನೇ ವಿವಿಯು ಗುಡಿಸಿ ಹೊರಹಾಕಲು ಹೊರಟಿರುವುದು ನಿರ್ದಯ ಕ್ರಮ-ದೇವನೂರ ಮಹಾದೇವ “


    ಮುಂದೆ ನೋಡಿ
  • ದಕ್ಷಿಣ ಭಾರತದ ದಲಿತ ಹೋರಾಟಗಾರರ ಸಮಾವೇಶವು 6.9.2018 ರಂದು ಬೆಂಗಳೂರಿನಲ್ಲಿ ನಡೆದಿದ್ದು ಅದರಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ದಲಿತ ನಾಯಕರು, ಚಿಂತಕರು ದುಂಡು ಮೇಜಿನ ಸಭೆ ನಡೆಸಿದರು. ನಂತರ ಸಮಾವೇಶವು ಉದ್ಘಾಟನೆಗೊಂಡಿತು. ಚಿತ್ರದಲ್ಲಿ ದೇವನೂರ ಮಹಾದೇವ, ಜಿಗ್ನೇಶ್ ಮೇವಾನೀ, ಇಂದೂಧರ ಹೊನ್ನಾಪುರ, ವಿ.ನಾಗರಾಜ್ ಮುಂತಾದವರಿದ್ದಾರೆ.


    ಮುಂದೆ ನೋಡಿ
  • 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ BCSuddi.com online news Channel ದೇವನೂರ ಮಹಾದೇವ ಅವರನ್ನು ಮಾತನಾಡಿಸಿದಾಗ ಆಡಿದ ಮಾತುಗಳ ಚಿತ್ರಮುದ್ರಿಕೆ ಮತ್ತು ಚುನಾವಣಾ ಸಂದರ್ಭದ ಮಂತ್ರಾಲೋಚನೆಯ ಛಾಯಾಚಿತ್ರ …


    ಮುಂದೆ ನೋಡಿ
  • ಪ್ರೊ.ಸುಮಿತ್ರಾಬಾಯಿಯವರ ‘ಸೂಲಾಡಿ ಬಂದೋ ತಿರುತಿರುಗಿ’ ಬಾಳಕಥನದ ಬಿಡುಗಡೆ ಕಾರ್ಯಕ್ರಮವು 29.7.2018ರಂದು ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಡೆಯಿತು. ಪ್ರೊ.ಚ.ಸರ್ವಮಂಗಳ ಅವರು ಪುಸ್ತಕ ಬಿಡುಗಡೆ ಮಾಡಿದರು. ಶ್ರೀ.ಎನ್.ಬೋರಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಂ.ಎಸ್.ಶೇಖರ್ ಅವರು ಪುಸ್ತಕ ಕುರಿತು ಮಾತನಾಡಿದರು. ಪುಸ್ತಕವು ಮೈಸೂರಿನ ಅಭಿರುಚಿ ಪ್ರಕಾಶನದಿಂದ ಪ್ರಕಟಗೊಂಡಿದ್ದು ಆಸಕ್ತರು ಅಭಿರುಚಿ ಗಣೇಶ್ ಅವರನ್ನು ಸಂಪರ್ಕಿಸಬಹುದು. 9980560013


    ಮುಂದೆ ನೋಡಿ
  • ದೇವನೂರ ಮಹಾದೇವ ಅವರ ಮನೆಗೆ ಮಾನ್ಯ ಶಿಕ್ಷಣ ಸಚಿವರಾದ ಎನ್.ಮಹೇಶ್ ಅವರು 18.6.2018 ರಂದು ಭೇಟಿ ನೀಡಿ ಶಿಕ್ಷಣ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಚರ್ಚಿಸಿದರು.


    ಮುಂದೆ ನೋಡಿ
  • ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ 10.12.2017 ರಂದು ಸಕಲೇಶಪುರದ ರಕ್ಷಿದಿಯ ರಂಗಕರ್ಮಿ, ಲೇಖಕ ರಕ್ಷಿದಿ ಪ್ರಸಾದ್ ಅವರ ಅಕಾಲಿಕ ಸಾವಿಗೀಡಾದ ಮಗಳು ಅಮೃತ ಅವರು ಬರೆದ ಐದು ಸಂಪುಟಗಳ ‘ಅಮೃತಯಾನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮೊದಲ ಪ್ರತಿಯನ್ನು ದೇವನೂರ ಮಹಾದೇವ ಅವರಿಗೆ ನೀಡಲಾಯ್ತು. ಸಮಾರಂಭದಲ್ಲಿ ಕೇಸರಿ ಹರವೂ, ಡಾ.ಕೆ.ಆರ್.ಅಶೋಕ್, ಮೀನಾ ಮೈಸೂರು, ಕೆ.ಪಿ.ಸುರೇಶ, ಅಭಿರುಚಿ ಗಣೇಶ್, ಪ್ರಸಾದ್ ರಕ್ಷಿದಿ, ರಾಧೇ ರಕ್ಷಿದಿ ಇತರರು ಇದ್ದರು. 


    ಮುಂದೆ ನೋಡಿ