ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ನೆದರ್ಲ್ಯಾಂಡ್ ನ ಯುವ ವಿಜ್ಞಾನಿ, ಅಧ್ಯಾಪಕಿ ಹಾಗೂ ಸಂಶೋಧನಾರ್ಥಿ, ಸಾಹಿತ್ಯಾಸಕ್ತೆ ಎವಿಲಿನ್ ಡಿ ಹೂಪ್ ಅವರು ಭಾರತಕ್ಕೆ ಆಗಮಿಸಿದ್ದಾಗ, 6.4.2019ರಂದು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ದೇವನೂರ ಮಹಾದೇವ ಅವರು, ಸಂಭಾಷಣೆಯಲ್ಲಿ ತೊಡಗಿದ ಕೆಲ ಚಿತ್ರಗಳು…. ಇವರು ದೇವನೂರರ ಕುಸುಮಬಾಲೆ ಕಾದಂಬರಿ ಸೂಸಾನ್ ಡೇನಿಯಲ್ ಅವರಿಂದ ಇಂಗ್ಲಿಷ್ ಗೆ ಅನುವಾದವಾದ ನಂತರ, ಯೂರೋಪಿಯನ್ ದೃಷ್ಟಿಕೋನದಿಂದ ಇಂಗ್ಲೀಷ್ ಅನುವಾದದಲ್ಲಿ ಆಗಬೇಕಿದ್ದ ಕೆಲ ಮಾರ್ಪಾಡುಗಳನ್ನು ಸೂಚಿಸಿದ್ದರು. [ಈ ಫೋಟೋಗಳನ್ನು ಕೊಡುಗೆಯಾಗಿ ನೀಡಿದ ಪತ್ರಕರ್ತ ಕೆ.ಎನ್. ನಾಗೇಶ್ ಅವರಿಗೆ ಧನ್ಯವಾದಗಳು]


    ಮುಂದೆ ನೋಡಿ
  • ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಅಂಗವಾಗಿ 2019 ಫೆ.13ರಂದು ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ “ಕೃಷಿ ಬಿಕ್ಕಟ್ಟು, ಯುವಜನರ ತಲ್ಲಣ, ಮುಂದಿನ ಲೋಕಸಭೆ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ” ಕುರಿತು ‘ವೈಚಾರಿಕ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ’ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ವಿಡಿಯೋ, ಫೋಟೋಗಳು, ಪತ್ರಿಕಾ ವರದಿ ಇಲ್ಲಿದೆ.


    ಮುಂದೆ ನೋಡಿ
  • ಫೋಟೋ ಕೃಪೆ-ಪೂರ್ಣಚಂದ್ರ ತೇಜಸ್ವಿ


    ಮುಂದೆ ನೋಡಿ
  • TV House, ಜನವರಿ 29, 2019 ರಂದು ದೇವನೂರ ಮಹಾದೇವ ವ್ಯಕ್ತಿಚಿತ್ರವನ್ನು You tube ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಅವರ ಫೋಟೋ, ವಿಡಿಯೋಗಳ ಕೊಲಾಜ್ ಮಾಡಲಾಗಿದೆ.


    ಮುಂದೆ ನೋಡಿ
  • ಜನಸಮುದಾಯದೊಂದಿಗೆ ದೇವನೂರ ಮಹಾದೇವ…. ಫೋಟೋಗಳನ್ನು ಸಂಗ್ರಹಿಸಿಕೊಟ್ಟ ಆಪ್ತ ಬಳಗಕ್ಕೆ ನಮ್ಮ ಬನವಾಸಿ ತಂಡದ ವಂದನೆಗಳು..


    ಮುಂದೆ ನೋಡಿ
  • ಯುವಜನರೊಂದಿಗೆ ದೇವನೂರ ಮಹಾದೇವ…..ಫೋಟೋಗಳನ್ನು ಸಂಗ್ರಹಿಸಿಕೊಟ್ಟ ಆಪ್ತ ಬಳಗಕ್ಕೆ ನಮ್ಮ ಬನವಾಸಿ ತಂಡದ ವಂದನೆಗಳು..


    ಮುಂದೆ ನೋಡಿ
  • ದೇವನೂರ ಮಹಾದೇವ ಅವರೊಂದಿಗೆ……
    ಫೋಟೋಗಳನ್ನು ಸಂಗ್ರಹಿಸಿಕೊಟ್ಟ ಸಂಗಾತಿಗಳಿಗೆ ನಮ್ಮ ಬನವಾಸಿ ತಂಡದ ವಂದನೆಗಳು..


    ಮುಂದೆ ನೋಡಿ
  • 23.12.2018ರಂದು ಪಾಂಡವಪುರದ ಎಣ್ಣೆಹೊಳೆ ಕೊಪ್ಪಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ, ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬ ಹಾಗೂ ರೈತದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್, ಅವಿಕ್ ಸಹಾ, ದೇವನೂರ ಮಹಾದೇವ, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿಯವರು, ದರ್ಶನ್ ಪುಟ್ಟಣ್ಣಯ್ಯ,… ಇನ್ನಿತರರು ಹಾಜರಿರುವ ಚಿತ್ರಗಳು….


    ಮುಂದೆ ನೋಡಿ
  • ಮೈಸೂರು ವಿವಿ ಸ್ವಚ್ಛತಾ ಕಾರ್ಮಿಕರ ಕುರಿತು ವಿಶ್ವವಿದ್ಯಾನಿಲಯಡಾ ನಿಯಮಬಾಹಿರ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದಿಂದ 4.9.2018 ರಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ದೇವನೂರ ಮಹಾದೇವ ….
    “ವಿಶ್ವವಿದ್ಯಾನಿಲಯವನ್ನು ಕಸ ಗುಡಿಸಿ ಸ್ವಚ್ಛಗೊಳಿಸಿದ ಬಡ ಕಾರ್ಮಿಕರನ್ನೇ ವಿವಿಯು ಗುಡಿಸಿ ಹೊರಹಾಕಲು ಹೊರಟಿರುವುದು ನಿರ್ದಯ ಕ್ರಮ-ದೇವನೂರ ಮಹಾದೇವ “


    ಮುಂದೆ ನೋಡಿ
  • ದಕ್ಷಿಣ ಭಾರತದ ದಲಿತ ಹೋರಾಟಗಾರರ ಸಮಾವೇಶವು 6.9.2018 ರಂದು ಬೆಂಗಳೂರಿನಲ್ಲಿ ನಡೆದಿದ್ದು ಅದರಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ದಲಿತ ನಾಯಕರು, ಚಿಂತಕರು ದುಂಡು ಮೇಜಿನ ಸಭೆ ನಡೆಸಿದರು. ನಂತರ ಸಮಾವೇಶವು ಉದ್ಘಾಟನೆಗೊಂಡಿತು. ಚಿತ್ರದಲ್ಲಿ ದೇವನೂರ ಮಹಾದೇವ, ಜಿಗ್ನೇಶ್ ಮೇವಾನೀ, ಇಂದೂಧರ ಹೊನ್ನಾಪುರ, ವಿ.ನಾಗರಾಜ್ ಮುಂತಾದವರಿದ್ದಾರೆ.


    ಮುಂದೆ ನೋಡಿ