ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ಮೈಸೂರಿನ ಮಿತ್ರರ ಬಳಗ “readout” ಎಂಬ ಕಥಾ ಸರಣಿಯ ಮೂಲಕ ವಿವಿಧ ಕಥೆಗಾರರ ಕಥೆಗಳನ್ನು ಆಸಕ್ತರಿಂದ ಓದಿಸಿ YouTube ಗೆ ಸೇರಿಸುತ್ತಿದ್ದು, ಆ ಸರಣಿಯಲ್ಲಿ ದೇವನೂರ ಮಹಾದೇವ ಅವರ “ಮಾರಿಕೊಂಡವರು” ಕಥೆಯನ್ನು ವಿ.ಎನ್.ಮಲ್ಲಿಕಾರ್ಜುನಸ್ವಾಮಿಯವರು ಪ್ರಸ್ತುತ ಪಡಿಸಿದ್ದಾರೆ. ನಮ್ಮ ಕೇಳುವಿಕೆಗಾಗಿ ಕೊಂಡಿ ಇಲ್ಲಿದೆ…


    ಮುಂದೆ ನೋಡಿ
  • 1988ರ ಅಕ್ಟೋಬರ್ 21ರಂದು ಮೈಸೂರು ಆಕಾಶವಾಣಿಯಲ್ಲಿ ಸಾಹಿತಿ ದೇವನೂರ ಮಹಾದೇವ ಅವರನ್ನು ವಿಮರ್ಶಕರಾದ ಶ್ರೀಯುತ ಡಿ.ಎಸ್.ನಾಗಭೂಷಣ ಅವರು ಸಂದರ್ಶಿಸಿದ್ದಾರೆ. ಅದನ್ನು ಆಕಾಶವಾಣಿಯು ಇತ್ತೀಚೆಗೆ ಯೂಟ್ಯೂಬ್ ಗೆ ಸೇರಿಸಿದೆ. ನಮ್ಮ ಕೇಳುವಿಕೆಗಾಗಿ, ಅದರ ಕೊಂಡಿ ಇಲ್ಲಿದೆ….


    ಮುಂದೆ ನೋಡಿ
  • 1995ರ ಮಾರ್ಚ್ 10, 11, 12 ರಂದು ಮೈಸೂರಿನಲ್ಲಿ ನಡೆದ ‘ಪಿ.ಲಂಕೇಶ್ -60 ಸಮಕಾಲೀನ ಕನ್ನಡ ಸಾಹಿತ್ಯದ ಆಯಾಮಗಳು’ ವಿಚಾರಸಂಕಿರಣದಲ್ಲಿ ಭಾಗಿಗಳಾಗಿದ್ದ ಹಿರಿಯ ಸಾಹಿತಿಗಳಾದ ಚದುರಂಗ, ಹಾ.ಮಾ.ನಾಯಕ, ಎಚ್.ಎಲ್.ಕೇಶವಮೂರ್ತಿ, ಡಿ.ಆರ್.ನಾಗರಾಜ್ ಅವರೊಂದಿಗೆ ದೇವನೂರ ಮಹಾದೇವ ಮತ್ತು ಯುವ ಸಮೂಹವಿರುವ ಅಪರೂಪದ ಈ ಚಿತ್ರವನ್ನು ದೊರಕಿಸಿಕೊಟ್ಟ ಅಭಿರುಚಿ ಗಣೇಶ್ ಅವರಿಗೆ ನಮ್ಮ ಬನವಾಸಿ ಬಳಗದಿಂದ ಹಾರ್ದಿಕ ವಂದನೆಗಳು.


    ಮುಂದೆ ನೋಡಿ
  • ವಡ್ಡರ್ಸೆ ರಘುರಾಮಶೆಟ್ಟಿ ಪ್ರತಿಷ್ಠಾನದಿಂದ 2012ರಲ್ಲಿ ಪತ್ರಿಕಾ ಕ್ಷೇತ್ರದ ಕೌಂಟರ್ ಮೀಡಿಯಾ ಪ್ರಶಸ್ತಿಯನ್ನು ದೇವನೂರ ಮಹಾದೇವ ಅವರು, ವಿ ಗಾಯಿತ್ರಿ ಮತ್ತು ಟಿ.ಕೆ.ದಯಾನಂದ ಅವರಿಗೆ ಪ್ರದಾನ ಮಾಡಿದ್ದರು. ಆ ಸಂದರ್ಭದಲ್ಲಿ ಪತ್ರಕರ್ತ ಜಿ.ಎನ್. ಮೋಹನ್ ಅವರಿಂದ ಕನ್ನಡಾನುವಾದಗೊಂಡ ಪಿ.ಸಾಯಿನಾಥ್ ಅವರ “ಬರ ಅಂದ್ರೆ ಎಲ್ಲರಿಗೂ ಇಷ್ಟ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ತಡವಾಗಿ ಸಿಕ್ಕ ಆ ಸಂದರ್ಭದ ಕೆಲ ಚಿತ್ರಗಳು …. [ಫೋಟೋ ಕೊಡುಗೆ; ಜಿ.ಎನ್.ಮೋಹನ್]


    ಮುಂದೆ ನೋಡಿ
  •   ಆದಿವಾಸಿ, ಅಲೆಮಾರಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಸಂಘಟನೆಗಳ ವೇದಿಕೆಯಿಂದ, ಎನ್ ಪಿ ಆರ್, ಎನ್ ಆರ್ ಸಿ ಮತ್ತು ಸಿಎಎ ಅನ್ನು ವಿರೋಧಿಸಿ ಹಾಗೂ ಸಂವಿಧಾನ ಉಳಿವಿಗಾಗಿ 26.1.2020ರಂದು ಬೆಂಗಳೂರಿನಲ್ಲಿ ನಡೆದ ರ್ಯಾಲಿ ಹಾಗೂ ಸಮಾವೇಶದ ಕೆಲ ಫೋಟೋಗಳು (ಫೋಟೋ ಕೃಪೆ- ವಿ.ನಾಗರಾಜ್)      


    ಮುಂದೆ ನೋಡಿ
  • [8.1.2020ರಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಬೆಂಗಳೂರಿನಲ್ಲಿ ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ[CAA, NRC, NPR] ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ಇಲ್ಲಿದೆ. ಫೋಟೋ ಕೃಪೆ -ಪ್ರಜಾವಾಣಿ ಹಾಗೂ ಸಭೆಯಲ್ಲಿ ಅವರ ಮುನ್ನೋಟದ ಮಾತುಗಳ ಯೂಟ್ಯೂಬ್ ಕೊಂಡಿ ಇಲ್ಲಿದೆ.]


    ಮುಂದೆ ನೋಡಿ
  • ಐದನೆಯ ವರ್ಷದ ನಮ್ಮಬನವಾಸಿಯ ಈ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಪರೂಪದ ಫೋಟೋ ಗುಚ್ಛಗಳು ನಮಗಾಗಿ ಕಾಯುತ್ತಿವೆ. “ಕೆಲ ಅಪರೂಪದ ಕ್ಷಣಗಳು …” ಅದರಲ್ಲಿ ಒಂದು ವಿಶೇಷವಾದ ಪುಟವಾಗಿದ್ದು ವೀಕ್ಷಿಸಲು ಮುಂದೆ ನೋಡಿ…

    -ಬನವಾಸಿಗರು


    ಮುಂದೆ ನೋಡಿ
  • ಐದನೆಯ ವರ್ಷದ ಈ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಪರೂಪದ ಫೋಟೋ ಗುಚ್ಛಗಳು ನಮಗಾಗಿ ಕಾಯುತ್ತಿವೆ. “ಹಳತು ಹೊನ್ನು….” ಅದರಲ್ಲಿ ವಿಶೇಷವಾದ ಪುಟವಾಗಿದ್ದು ವೀಕ್ಷಿಸಲು ಕೆಳಗಿನ ಕೊಂಡಿ ಅನುಸರಿಸಿ…

    ಎಂದಿನಂತೆ ನಿಮ್ಮ ಸಲಹೆ, ಪ್ರೀತಿ, ವಿಶ್ವಾಸಗಳ ನಿರೀಕ್ಷೆಯಲ್ಲಿ….

    -ಬನವಾಸಿಗರು


    ಮುಂದೆ ಓದಿ
  • [ದೇವನೂರ ಮಹಾದೇವ ಅವರು ಜನಸಮುದಾಯದೊಂದಿಗೆ ಬೆರೆತು ಹೋದ ಹಲವು ಸಂದರ್ಭದ ಫೋಟೋಗಳು ಈ 29.12.2019ರಂದು ನಮ್ಮ ಬನವಾಸಿಯ ಐದನೆಯ ವಾರ್ಷಿಕೋತ್ಸವದ ಈ ಸಮಯದ ಕೊಡುಗೆಯಾಗಿ ಇಲ್ಲಿದೆ. ಉದಾರ ಮನಸಿನಿಂದ ಫೋಟೋಗಳನ್ನು ಕೊಟ್ಟ, ಎಲ್ಲೆಲ್ಲಿಂದಲೋ ಸಂಗ್ರಹಿಸಿ ನೀಡಿದ ನಮ್ಮಬನವಾಸಿ ಬಂಧುಗಳಿಗೆ, ಫೋಟೋಗ್ರಾಫರ್ಗಳಿಗೆ ಹೃದಯಪೂರ್ವಕ ನಮನಗಳು.

    -ಬನವಾಸಿಗರು]


    ಮುಂದೆ ನೋಡಿ
  • [ದೇವನೂರ ಮಹಾದೇವ ಅವರು ತಮ್ಮ ಕುಟುಂಬದೊಂದಿಗಿರುವ ಹಲವು ಅಪರೂಪದ ಆಪ್ತ ಕ್ಷಣಗಳ ಗುಚ್ಛ, 29.12.2019ರ ನಮ್ಮ ಬನವಾಸಿ ಅಂತರ್ಜಾಲ ತಾಣದ ಐದನೆಯ ವಾರ್ಷಿಕೋತ್ಸವದ ಈ ಅಪರೂಪದ ಸಂದರ್ಭದಲ್ಲಿ ನಮಗಾಗಿ. ಫೋಟೋಗಳನ್ನು ನಮ್ಮಬನವಾಸಿಗೆ ಕೊಡುಗೆ ನೀಡಿದ ಆಪ್ತ ಚೇತನಗಳಿಗೆ ವಂದನೆಗಳು.

    -ಬನವಾಸಿಗರು]


    ಮುಂದೆ ನೋಡಿ