ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ, ಜನಾಂದೋಲನಗಳ ಮಹಾಮೈತ್ರಿ, ಜನಚೇತನ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ 5.9.2020ರಂದು ಮೈಸೂರಿನಲ್ಲಿ ನಡೆದ “ನಮ್ಮ ಭೂಮಿ ನಮ್ಮ ಹಕ್ಕು, ಅನ್ಯರಿಗೆ ಮಾರಾಟಕ್ಕಲ್ಲ” – ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ದೇವನೂರ ಮಹಾದೇವ ಅವರು.
(ಫೋಟೋ ಕೃಪೆ- ಎನ್.ಪುನೀತ್ ಮತ್ತು ವಿ.ಎಲ್.ನರಸಿಂಹಮೂರ್ತಿ, ವಿಡಿಯೋ ಕೃಪೆ-ನೇತ್ರರಾಜು ಮೈಸೂರು)
ಮುಂದೆ ನೋಡಿ -
ಹಿರಿಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡಲು ಒತ್ತಾಯಿಸಿ 20.8.2020 ಬೆಳಗ್ಗೆ ಮೈಸೂರಿನ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆಯ ಬಳಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಮೌನ ಪ್ರತಿಭಟನೆಯನ್ನು ಬೆಂಬಲಿಸಿ, ಪ್ರತಿಭಟನಾಕಾರರೊಂದಿಗೆ ದೇವನೂರ ಮಹಾದೇವ ಅವರು….
(ಫೋಟೋ ಕೃಪೆ- ಪುನೀತ್.ಎನ್, ಮೈಸೂರು)
ಮುಂದೆ ನೋಡಿ -
27 ಸೆಪ್ಟೆಂಬರ್ 2013ರಂದು ಬೆಂಗಳೂರಿನಲ್ಲಿ ನಡೆದ ವಾರ್ತಾಭಾರತಿ ಪತ್ರಿಕೆಯ 11ನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂಟ್ಯೂಬ್ ಕೊಂಡಿ ನಮಗಾಗಿ….[ಕೊಡುಗೆ-ವಾರ್ತಾಭಾರತಿ, ವಿಡಿಯೋ ಸಂಪಾದನೆ-ಚಕ್ರಿ ಸಾರಂಗ್]
ಮುಂದೆ ನೋಡಿ -
ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ ಪಡೆದ ನಂತರ 1.3.2013ರಂದು ದೇವನೂರ ಮಹಾದೇವ ಅವರು ನಡೆಸಿಕೊಟ್ಟ ಸಂವಾದದ ಕೊಂಡಿ… [ಕೊಡುಗೆ- ಹಂಪಿ ವಿ.ವಿ, ವಿಡಿಯೋ ಸಂಪಾದನೆ-ಹೆಚ್.ಎನ್. ನಿಶಾಂತ್ ಮತ್ತು ಚಕ್ರಿ ಸಾರಂಗ್]
ಮುಂದೆ ನೋಡಿ -
[ಕಲಾವಿದ ಟಿ.ಎಫ್. ಹಾದಿಮನಿಯವರ ಕೈಯಿಂದ ರಚಿತವಾದ ಮಹಾದೇವರ ರೇಖಾಚಿತ್ರ. ನಮ್ಮ ಬನವಾಸಿಗೆ ಕೊಡುಗೆಯಾಗಿ ನೀಡಿದ್ದಕ್ಕೆ ಹಾರ್ದಿಕ ವಂದನೆಗಳು]
ಮುಂದೆ ನೋಡಿ -
ಮೈಸೂರಿನ ಮಿತ್ರರ ಬಳಗ “readout” ಎಂಬ ಕಥಾ ಸರಣಿಯ ಮೂಲಕ ವಿವಿಧ ಕಥೆಗಾರರ ಕಥೆಗಳನ್ನು ಆಸಕ್ತರಿಂದ ಓದಿಸಿ YouTube ಗೆ ಸೇರಿಸುತ್ತಿದ್ದು, ಆ ಸರಣಿಯಲ್ಲಿ ದೇವನೂರ ಮಹಾದೇವ ಅವರು ‘ಕುಸುಮಬಾಲೆ’ ಕಾದಂಬರಿಯ ಒಂದು ಪ್ರಸಂಗವನ್ನು ಸ್ವತಃ ತಾವೇ ಇಲ್ಲಿ ವಾಚಿಸಿದ್ದಾರೆ. ನಮ್ಮ ಕೇಳುವಿಕೆಗಾಗಿ ಕೊಂಡಿ ಇಲ್ಲಿದೆ…
ಮುಂದೆ ನೋಡಿ -
[ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ, 22 ಜುಲೈ 2017ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಖ್ಯಾತ ವಿಚಾರವಾದಿಗಳಾದ ಡಾ.ಆನಂದ್ ತೇಲ್ತುಂಬ್ಡೆ, ಅನನ್ಯ ವಾಜಪೇಯಿ, ಶ್ರೀಪಾದ್ ಭಟ್ ಹಾಗೂ ವಿ.ಎಲ್.ನರಸಿಂಹಮೂರ್ತಿ ಅವರೊಂದಿಗೆ ದೇವನೂರ ಮಹಾದೇವ ಅವರಿರುವ ಕೆಲ ಚಿತ್ರಗಳು. ಚಿತ್ರ ಕೃಪೆ-ವಿ.ಎಲ್.ನರಸಿಂಹಮೂರ್ತಿ]
ಮುಂದೆ ನೋಡಿ -
ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರ ಬಂಧನವನ್ನು ವಿರೋಧಿಸಿ 16.5.2020ರಂದು ನಡೆದ “ನ್ಯಾಯದ ದಿನ” ಕ್ಕಾಗಿ ದೇವನೂರ ಮಹಾದೇವ ಅವರ ಆರ್ದ್ರ ನುಡಿಗಳು ಮತ್ತು ಇಂಗ್ಲಿಷ್ ಶೀರ್ಷಿಕೆಗಳ ಯೂಟ್ಯೂಬ್ ಕೊಂಡಿ ಇಲ್ಲಿದೆ….
ಮುಂದೆ ನೋಡಿ -
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರನ್ನು ಅನ್ಯಾಯದಿಂದ ಬಂಧಿಸಿರುವುದನ್ನು ವಿರೋಧಿಸಿ 16 ಮೇ 2020ರಂದು “ನ್ಯಾಯದ ದಿನ”ವಾಗಿ ಆಚರಿಸಲು 35 ಚಿಂತಕರನ್ನೊಳಗೊಂಡ ತಂಡವು ದೇಶಾದ್ಯಂತದ ಪ್ರಜ್ಞಾವಂತರನ್ನು ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರ ಮೊದಲ ಮಾತುಗಳು… ಹಾಗೂ ಇಂಗ್ಲಿಷ್ ಶೀರ್ಷಿಕೆಯ ಯೂಟ್ಯೂಬ್ ಕೊಂಡಿ ಇಲ್ಲಿದೆ.
ಮುಂದೆ ನೋಡಿ -
ಮೈಸೂರಿನ ಮಿತ್ರರ ಬಳಗ “readout” ಎಂಬ ಕಥಾ ಸರಣಿಯ ಮೂಲಕ ವಿವಿಧ ಕಥೆಗಾರರ ಕಥೆಗಳನ್ನು ಆಸಕ್ತರಿಂದ ಓದಿಸಿ YouTube ಗೆ ಸೇರಿಸುತ್ತಿದ್ದು, ಆ ಸರಣಿಯಲ್ಲಿ ದೇವನೂರ ಮಹಾದೇವ ಅವರ “ಅಮಾಸ” ಕಥೆಯನ್ನು ಕಿರಣ್ ಗಿರ್ಗಿ ಅವರು ಪ್ರಸ್ತುತ ಪಡಿಸಿದ್ದಾರೆ. ನಮ್ಮ ಕೇಳುವಿಕೆಗಾಗಿ ಕೊಂಡಿ ಇಲ್ಲಿದೆ…
ಮುಂದೆ ನೋಡಿ