ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ದೇವನೂರ ಮಹಾದೇವ ಅವರ ಮೊಮ್ಮಗಳು ಪುಟಾಣಿ ರುಹಾನಿಗೆ ತಾತನೆಂದರೆ ಅಚ್ಚುಮೆಚ್ಚು! ಹಾಗೇ ತಾತನಿಗೂ ಇವಳೆಂದರೆ ಪ್ರಿಯ. ಅವರೊಡನೆ ಅಕ್ಕರೆಯಿಂದ ಒಡನಾಡುತ್ತಲೇ, ಅರಿವಿಲ್ಲದೇ ಅವರನ್ನೇ ಅನುಸರಿಸುತ್ತಾ, ಅನುಕರಿಸುತ್ತಿರುತ್ತಾಳೆ ರುಹಾನಿ. ಈ ಬಾರಿ, ನಮ್ಮ ಬನವಾಸಿಯ ಆರನೆಯ ವರ್ಷದ ವಾರ್ಷಿಕೋತ್ಸವಕ್ಕಾಗಿ ತಾತನೊಡನೆ ರುಹಾನಿಯ ಆಪ್ತ ಕ್ಷಣಗಳು, ಅವಳು ಸೆರೆ ಹಿಡಿದ ತಾತನ ಆಪ್ತ ಚಿತ್ರಗಳು, ತಾತನ ಕುರಿತ ಅಭಿಮಾನದ ಅವಳದೇ ಮುದ್ದು ವಿವರಣೆಯೊಂದಿಗೆ ಕೊಲಾಜ್ ರೂಪದಲ್ಲಿ ನಮ್ಮ ಮುಂದಿದೆ. ಹೀಗಿದನ್ನು ನಮಗೆ ಆಕರ್ಷಕವಾಗಿ ಸಮ್ಮಿಲನಗೊಳಿಸಿಕೊಟ್ಟಿದ್ದು ಏಳನೆ ತರಗತಿ ಓದುತ್ತಿರುವ ಮತ್ತೋರ್ವ ಪುಟಾಣಿ ಚಿಕ್ಕಮಗಳೂರಿನ ಶ್ರಾವಣಿ! ನಮ್ಮ ಬನವಾಸಿ ತಂಡದ ಮನವಿಯ ಮೇರೆಗೆ ಪ್ರೀತಿಯಿಂದ, ಆದರೆ ಸಂಕೋಚದಿಂದಲೇ ಈ ಕೆಲಸಕ್ಕೆ ಬೆಂಬಲ ನೀಡಿದ್ದು ಮಹಾದೇವರ ಎರಡನೆಯ ಮಗಳು ಡಾ.ಮಿತಾ ಮತ್ತು ಅಳಿಯ ಅವಿನಾಶ್.  ಹೀಗೆ ನಮ್ಮ ಬನವಾಸಿ ತಾಣವನ್ನು ಚೆಂದಗೊಳಿಸಲು ಸಹಕರಿಸುತ್ತಿರುವ ಎಲ್ಲ ಆಪ್ತ ಜೀವಗಳಿಗೂ ತಂಡದ ನನ್ನಿ. – ಬನವಾಸಿಗರು


    ಮುಂದೆ ನೋಡಿ
  • ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಆರು ವರ್ಷ ತುಂಬಿದ ಈ ಸಂದರ್ಭದಲ್ಲಿ ಕನ್ನಡದ ಪ್ರಸಿದ್ಧ, ಹಿರಿಯ ಕವಯಿತ್ರಿ ಪ್ರೊ.ಸ.ಉಷಾ ಅವರು ತಾಣದ ಕುರಿತು ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾರೆ…ಅವರಿಗೆ ನಮ್ಮ ಬನವಾಸಿ ತಂಡದ ಪ್ರೀತಿ.


    ಮುಂದೆ ನೋಡಿ
  • ಆರನೆಯ ವರ್ಷದ ಈ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಹಾದೇವರ ಅಪರೂಪದ ಹಳೆಯ  ಫೋಟೋ ಗುಚ್ಛ ನಮಗಾಗಿ ಕಾಯುತ್ತಿವೆ. ಇವನ್ನು ಹುಡುಕಿ ನಮಗೆ ನೀಡಿದ ಆಪ್ತ ಚೇತನಗಳಿಗೆ ವಂದನೆಗಳು. “ಹಳತು ಹೊನ್ನು….”  ವೀಕ್ಷಿಸಲು ಮುಂದೆ ನೋಡಿ.  -ಬನವಾಸಿಗರು


    ಮುಂದೆ ನೋಡಿ
  • ಆರನೆಯ ವರ್ಷದ ನಮ್ಮಬನವಾಸಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಪರೂಪದ ಫೋಟೋ ಗುಚ್ಛ “ಕೆಲ ಅಪರೂಪದ ಕ್ಷಣಗಳು…” ನಮಗಾಗಿ ಕಾಯುತ್ತಿದೆ. ಈ ವಿಶೇಷವಾದ ಪುಟ ವೀಕ್ಷಿಸಲು ಮುಂದೆ ನೋಡಿ

    -ಬನವಾಸಿಗರು


    ಮುಂದೆ ನೋಡಿ
  • ಕ್ರಿಯಾ ಮಾಧ್ಯಮ ಪ್ರಕಾಶದಿಂದ ಪ್ರಕಟವಾದ ಡಾ.ಆನಂದ್ ತೇಲ್ತುಂಬ್ಡೆ ವಿರಚಿತ ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳವಳಿಗಳ ಒರೆಗಲ್ಲು’ ಮತ್ತು ‘ಮಹಾಡ್ – ಮೊದಲ ದಲಿತ ಬಂಡಾಯ’– ಎಂಬ ಶೀರ್ಷಿಕೆಗಳ ಕನ್ನಡ ಅನುವಾದದ ಎರಡು ಪುಸ್ತಕಗಳನ್ನು  ಡಿಸೆಂಬರ್ 19, 2020 ರಂದು ನಡೆದ ಆನ್ ಲೈನ್ ಸಭೆಯಲ್ಲಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಿ ಆಡಿದ ಮಾತುಗಳ ವಿಡಿಯೋ ಕೊಂಡಿ…


    ಮುಂದೆ ನೋಡಿ
  • 8.12.2020ರಂದು ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನು ತಿದ್ದುಪಡಿಗಳನ್ನು ವಿರೋಧಿಸಿ ದೇಶಾದ್ಯಂತ ನಡೆದ ‘ಭಾರತ್ ಬಂದ್’ ಸಂದರ್ಭದಲ್ಲಿ  ಮೈಸೂರಿನಲ್ಲಿ ಜರುಗಿದ ರೈತಪರ ಪ್ರತಿಭಟನೆಯಲ್ಲಿ etvbharath ಟಿವಿ ಚಾನೆಲ್ ಗೆ ದೇವನೂರ ಮಹಾದೇವ ಅವರು ನೀಡಿದ ಕಿರು ಸಂದರ್ಶನದ ವಿಡಿಯೋ ಕೊಂಡಿ….


    ಮುಂದೆ ನೋಡಿ
  • [ಅಂಬೇಡ್ಕರ್ ಪರಿನಿರ್ವಾಣ ದಿನವಾದ 6.12.2020ರಂದು ಮೈಸೂರಿನಲ್ಲಿ, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ನಡೆದ, 2020ರ ಡಿಸೆಂಬರ್ 6ರಿಂದ 14 ಏಪ್ರಿಲ್ 2021ರವರೆಗೆ ರಾಜ್ಯಾದ್ಯಂತ ನಡೆಯಲಿರುವ “ಜನಜಾಗೃತಿ ಅಭಿಯಾನ”ದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು, ವಿವಿಧ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ]


    ಮುಂದೆ ನೋಡಿ
  • ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅಂಬೇಡ್ಕರ್ ಚಿಂತನೆಯಲ್ಲಿ ನಂಬುಗೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣದ ಆಯ್ದ ಭಾಗಗಳನ್ನು ಓದಿಸಿ ಯೂಟ್ಯೂಬ್ ಗೆ ಹಾಕುವ ಕೆಲಸವನ್ನು ಡಾ.ಅರುಣ್ ಜೋಳದಕೂಡ್ಲಗಿಯವರು ಮಾಡುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಬಾಬಾಸಾಹೇಬರ ಚಿಂತನೆಯಲ್ಲಿ ನಂಬಿಕೆ ಇಟ್ಟವರ ಸಹಭಾಗಿತ್ವದಿಂದ ಈ ಕನಸು ನನಸಾಗಿಸುವ ಪ್ರಯತ್ನ ಅವರದು. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡಿಯೋ ರೂಪದ ಆರ್ಕೈವ್ ರೂಪಿಸುವ ಉದ್ದೇಶ ಕೂಡ ಇವರಿಗಿದೆ. ಈ ಅಂಬೇಡ್ಕರ್ ಓದು ಸರಣಿಯ 100ನೆಯ ಕಂತನ್ನು ದೇವನೂರ ಮಹಾದೇವ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ 6.12.2020ರಂದು ಪ್ರಸ್ತುತಪಡಿಸಿದ್ದು ಅದನ್ನು ಯೂಟ್ಯೂಬ್ ಗೆ ಹಾಕಲಾಗಿದೆ. ಅವರ ಮಾತುಗಳ ಕೊಂಡಿ ಮತ್ತು ಬರಹ ಹಾಗೂ ಈ ಸರಣಿಯ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯ ತುಣುಕು ನಮಗಾಗಿ ಇಲ್ಲಿದೆ.


    ಮುಂದೆ ನೋಡಿ
  • ಶಿವಮೊಗ್ಗದ ‘TV BHARATH SHIVAMOGGA’ ಚಾನೆಲ್ ವತಿಯಿಂದ 2020 ನವೆಂಬರ್ ತಿಂಗಳು ಪೂರ್ತಿ ನಡೆದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಚರ್ಚೆ ‘ಸಿರಿಗಂಧ’ದಲ್ಲಿ ದೇವನೂರ ಮಹಾದೇವ ಅವರ ಬದುಕು-ಬರಹ ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರೊಂದಿಗೆ ಚಾನೆಲ್ ನಡೆಸಿದ ಚರ್ಚೆಯ ಯೂಟ್ಯೂಬ್ ಕೊಂಡಿ ಇಲ್ಲಿದೆ….


    ಮುಂದೆ ನೋಡಿ
  • ಮೈಸೂರಿನಲ್ಲಿ 5.10.2020ರಂದು ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ, ‘ದಲಿತ ಯುವತಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಖಂಡಿಸಿ ನಡೆದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ದೇವನೂರ ಮಹಾದೇವ ಅವರು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದ ಫೋಟೋಗಳು ಮತ್ತು ಯೂಟ್ಯೂಬ್ ವಿಡಿಯೋ ಕೊಂಡಿ…


    ಮುಂದೆ ನೋಡಿ