ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • ದೇವನೂರ ಮಹಾದೇವ ಅವರ ಬದುಕು, ಬರಹ, ವ್ಯಕ್ತಿತ್ವಗಳ ದಾಖಲೀಕರಣದ “ನಮ್ಮ ಬನವಾಸಿ” ಅಂತರ್ಜಾಲ ತಾಣಕ್ಕೆ 29.12.2021ಕ್ಕೆ 7 ವರ್ಷ ತುಂಬಿದ ಸಂದರ್ಭದಲ್ಲಿ ಸಾಹಿತಿಗಳು ಮತ್ತು ವಿಮರ್ಶಕರೂ ಆದ ಪ್ರೊ.ರಾಜೇಂದ್ರ ಚೆನ್ನಿಯವರ ಅಭಿಪ್ರಾಯ ಇಲ್ಲಿದೆ…


    ಮುಂದೆ ನೋಡಿ
  • ದೇವನೂರ ಮಹಾದೇವ ಅವರ ಪತ್ನಿ ಲೇಖಕಿ ಪ್ರೊ.ಕೆ.ಸುಮಿತ್ರಾಬಾಯಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು, ಅವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗಿ” ಕೃತಿಗೆ 27.9.2021 ರಂದು ನೀಡಲಾಯ್ತು. ಅವರು ಕಾರಣಾಂತರಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಿರಲಿಲ್ಲವಾದ್ದರಿಂದ ಅಕಾಡೆಮಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನೆಗೇ ತೆರಳಿ ಪ್ರಶಸ್ತಿ ನೀಡಿ ಗೌರವಿಸಿದರು. ಆ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ನಮ್ಮ ಬನವಾಸಿಗೆ ನೀಡಿದ ಆಂದೋಲನ ಪತ್ರಿಕೆಯ ಫೋಟೋಗ್ರಾಫರ್ ಗವಿಮಠ ರವಿ ಅವರಿಗೆ ಹಾಗೂ ಆಂದೋಲನ ಪತ್ರಿಕೆಗೆ ನಮ್ಮ ಹೃದಯಪೂರ್ವಕ ವಂದನೆಗಳು.


    ಮುಂದೆ ನೋಡಿ
  • ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ  13.2.2021ರಂದು ಚಾಮರಾಜನಗರದಲ್ಲಿ ನಡೆದ “ರೈತ ನೇತಾರ ಎಂ.ಡಿ.ನಂಜುಂಡಸ್ವಾಮಿ ನೆನಪು” ಹಾಗೂ “ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆ”ಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಡಿಯೋಕೊಂಡಿ ಮತ್ತು ಚಿತ್ರಗಳು. 


    ಮುಂದೆ ನೋಡಿ
  • ಮಹಾತ್ಮಾಗಾಂಧಿ ಹುತಾತ್ಮ ದಿನವಾದ 30.1.2021ರಂದು ಮೈಸೂರಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ಮತ್ತು ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ “ಸಂಯುಕ್ತ ರೈತ ಹೋರಾಟ ಒಕ್ಕೂಟ”ದಡಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ರೈತಪರ ಹೋರಾಟಗಾರರು ಹಾಗೂ ಪತ್ನಿ ಪ್ರೊ.ಸುಮಿತ್ರಾಬಾಯಿ ಅವರೊಂದಿಗೆ ಭಾಗಿಯಾಗಿದ್ದ ದೇವನೂರ ಮಹಾದೇವ ಅವರ ಫೋಟೋ ಮತ್ತು ಆಡಿದ ಮಾತುಗಳ ವಿಡಿಯೋ ಕೊಂಡಿ.
    ವಿಡಿಯೋ ಹಾಗೂ ಫೋಟೋ ಕೃಪೆ- ಪುನೀತ್. ಎನ್


    ಮುಂದೆ ನೋಡಿ
  • 26.1.2021ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, “ಸಂಯುಕ್ತ ರೈತ ಹೋರಾಟ ಒಕ್ಕೂಟ”ದಡಿ ನಡೆದ ರೈತರ ಪರ್ಯಾಯ “ಜನ ಗಣರಾಜ್ಯೋತ್ಸವ”. ಬೃಹತ್ ರೈತ ಪ್ರತಿಭಟನೆ ಮತ್ತು ಸಮಾವೇಶದಲ್ಲಿ ಭಾಗಿಯಾಗಿದ್ದ ದೇವನೂರ ಮಹಾದೇವ ಅವರ ಕೆಲ ಚಿತ್ರಗಳು…
    ಫೋಟೋ ಕೃಪೆ- ಟಿ.ಜಿ.ಎಸ್.ಅವಿನಾಶ್


    ಮುಂದೆ ನೋಡಿ
  • [ಕರ್ನಾಟಕದಲ್ಲಿ ರೈತ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಯ ಒಗ್ಗೂಡುವಿಕೆಯ ಮೂಲಕ ನಡೆದ ಪರ್ಯಾಯ ರಾಜಕಾರಣ ಕಟ್ಟುವ ಪ್ರಕ್ರಿಯೆಗಳು ದೇಶದಲ್ಲೇ ಅತ್ಯಂತ ಅಪರೂಪವಾದುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 2003-2004ರ ಸುಮಾರಿಗೆ ಪರ್ಯಾಯ ರಾಜಕಾರಣದ ಚರ್ಚೆಗಳು ಪ್ರಾರಂಭಗೊಂಡಿತು. 2005ರ ಹೊತ್ತಿಗೆ ಅದು  ತೀವ್ರಗೊಂಡು ಸರ್ವೋದಯ ಕರ್ನಾಟಕ ಪಕ್ಷವು ಹುಟ್ಟಿಕೊಂಡಿತು. ಈ ಚರ್ಚೆಯ ಹಿನ್ನೆಲೆಯಲ್ಲಿ, ಪ್ರಾರಂಭದ ದಿನಗಳಲ್ಲಿ, ಮೈಸೂರಿನಲ್ಲಿ ದಿನಾಂಕ 26.4.2004ರಲ್ಲಿ ನಡೆದ ಪರ್ಯಾಯ ರಾಜಕಾರಣ ಕುರಿತ ಸಮಾಲೋಚನಾ ಸಮಾವೇಶದ ಚಿತ್ರ ಇಲ್ಲಿದೆ. ಚಿತ್ರದಲ್ಲಿ – ಸಂಸದರಾಗಿದ್ದ ತುಳಸೀದಾಸ್ ದಾಸಪ್ಪ, ದೇವನೂರ ಮಹಾದೇವ, ಸಿ.ಮುನಿಯಪ್ಪ, ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು ಅವರಿದ್ದಾರೆ. ಚಿತ್ರವನ್ನು ತೆಗೆದು, ಅಪರೂಪದ ಚಿತ್ರವನ್ನು ಕಾಪಿರಿಸಿ ನಮ್ಮ ಬನವಾಸಿಗೆ ನೀಡಿದ ಫೋಟೋಗ್ರಾಫರ್ ನೇತ್ರರಾಜು ಅವರಿಗೆ ಹಾಗೂ ಸಂಬಂಧಿಸಿದ ವಿವರಣೆ ಮತ್ತು ಮಾಹಿತಿ ನೀಡಿದ ಇಂದೂಧರ ಹೊನ್ನಾಪುರ ಹಾಗೂ ದೇವನೂರ ಮಹಾದೇವ ಅವರಿಗೆ ತಂಡದ ಕೃತಜ್ಞತೆಗಳು)


    ಮುಂದೆ ನೋಡಿ
  • ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮೈಸೂರಿನಲ್ಲಿ 5.1.2021 ರಂದು ಆಯೋಜಿಸಿದ್ದ, ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸ್ವರಾಜ್ ಇಂಡಿಯಾ, ರೈತಸಂಘ ಹಾಗೂ ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಬೆಂಬಲಿತ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಡಿಯೋ.

    ಕೃಪೆ- ಫೋಟೋಗ್ರಾಫರ್ ನೇತ್ರರಾಜು, ಮೈಸೂರು


    ಮುಂದೆ ನೋಡಿ
  • [ಜನಾಂದೋಲನಗಳ ಮಹಾಮೈತ್ರಿ ವತಿಯಿಂದ 2016ರ ಜುಲೈ 9 ಮತ್ತು 10ರಂದು ಧಾರವಾಡದಲ್ಲಿ ನಡೆದ ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಚಿತ್ರಮುದ್ರಿಕೆಯ ಕೊಂಡಿ… ]


    ಮುಂದೆ ನೋಡಿ
  • ನಮ್ಮ ಬನವಾಸಿಗೆ ಆರು ವರ್ಷ ತುಂಬಿದ [29.12.2020] ಈ ಸಂದರ್ಭದಲ್ಲಿ ತಾಣವನ್ನು ಕುರಿತು ಚಿಂತಕರು, ಪ್ರಸಿದ್ಧ ವಿಮರ್ಶಕರೂ ಆದ ಎಂ.ಎಸ್.ಆಶಾದೇವಿಯವರು ಈ ಅಭಿಪ್ರಾಯವನ್ನು ನೀಡಿದ್ದಾರೆ. ಅವರಿಗೆ ನಮ್ಮ ತಂಡದ ಪ್ರೀತಿಪೂರ್ವಕ ನಮನಗಳು. ಅವರ ಮಾತುಗಳನ್ನು ಕೇಳಲು ಕೆಳಗಿನ ಕೊಂಡಿ ಅನುಸರಿಸಿ…


    ಮುಂದೆ ನೋಡಿ
  • ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಆರು ವರ್ಷಗಳಾದ ಸಂದರ್ಭದಲ್ಲಿ [29.12.2020] ಪ್ರಸಿದ್ಧ ಚಿಂತಕರೂ ಹಾಗೂ ವಿಮರ್ಶಕರಾದ ಡಾ.ರಹಮತ್ ತರೀಕೆರೆಯವರು ಆಡಿದ ಮಾತುಗಳನ್ನು ಕೇಳಲು ಯುಟ್ಯೂಬ್ ಕೊಂಡಿ ಅನುಸರಿಸಿ… 


    ಮುಂದೆ ನೋಡಿ