ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
26.1.2021ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, “ಸಂಯುಕ್ತ ರೈತ ಹೋರಾಟ ಒಕ್ಕೂಟ”ದಡಿ ನಡೆದ ರೈತರ ಪರ್ಯಾಯ “ಜನ ಗಣರಾಜ್ಯೋತ್ಸವ”. ಬೃಹತ್ ರೈತ ಪ್ರತಿಭಟನೆ ಮತ್ತು ಸಮಾವೇಶದಲ್ಲಿ ಭಾಗಿಯಾಗಿದ್ದ ದೇವನೂರ ಮಹಾದೇವ ಅವರ ಕೆಲ ಚಿತ್ರಗಳು…
ಫೋಟೋ ಕೃಪೆ- ಟಿ.ಜಿ.ಎಸ್.ಅವಿನಾಶ್
ಮುಂದೆ ನೋಡಿ -
[ಕರ್ನಾಟಕದಲ್ಲಿ ರೈತ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಯ ಒಗ್ಗೂಡುವಿಕೆಯ ಮೂಲಕ ನಡೆದ ಪರ್ಯಾಯ ರಾಜಕಾರಣ ಕಟ್ಟುವ ಪ್ರಕ್ರಿಯೆಗಳು ದೇಶದಲ್ಲೇ ಅತ್ಯಂತ ಅಪರೂಪವಾದುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 2003-2004ರ ಸುಮಾರಿಗೆ ಪರ್ಯಾಯ ರಾಜಕಾರಣದ ಚರ್ಚೆಗಳು ಪ್ರಾರಂಭಗೊಂಡಿತು. 2005ರ ಹೊತ್ತಿಗೆ ಅದು ತೀವ್ರಗೊಂಡು ಸರ್ವೋದಯ ಕರ್ನಾಟಕ ಪಕ್ಷವು ಹುಟ್ಟಿಕೊಂಡಿತು. ಈ ಚರ್ಚೆಯ ಹಿನ್ನೆಲೆಯಲ್ಲಿ, ಪ್ರಾರಂಭದ ದಿನಗಳಲ್ಲಿ, ಮೈಸೂರಿನಲ್ಲಿ ದಿನಾಂಕ 26.4.2004ರಲ್ಲಿ ನಡೆದ ಪರ್ಯಾಯ ರಾಜಕಾರಣ ಕುರಿತ ಸಮಾಲೋಚನಾ ಸಮಾವೇಶದ ಚಿತ್ರ ಇಲ್ಲಿದೆ. ಚಿತ್ರದಲ್ಲಿ – ಸಂಸದರಾಗಿದ್ದ ತುಳಸೀದಾಸ್ ದಾಸಪ್ಪ, ದೇವನೂರ ಮಹಾದೇವ, ಸಿ.ಮುನಿಯಪ್ಪ, ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು ಅವರಿದ್ದಾರೆ. ಚಿತ್ರವನ್ನು ತೆಗೆದು, ಅಪರೂಪದ ಚಿತ್ರವನ್ನು ಕಾಪಿರಿಸಿ ನಮ್ಮ ಬನವಾಸಿಗೆ ನೀಡಿದ ಫೋಟೋಗ್ರಾಫರ್ ನೇತ್ರರಾಜು ಅವರಿಗೆ ಹಾಗೂ ಸಂಬಂಧಿಸಿದ ವಿವರಣೆ ಮತ್ತು ಮಾಹಿತಿ ನೀಡಿದ ಇಂದೂಧರ ಹೊನ್ನಾಪುರ ಹಾಗೂ ದೇವನೂರ ಮಹಾದೇವ ಅವರಿಗೆ ತಂಡದ ಕೃತಜ್ಞತೆಗಳು)
ಮುಂದೆ ನೋಡಿ -
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಮೈಸೂರಿನಲ್ಲಿ 5.1.2021 ರಂದು ಆಯೋಜಿಸಿದ್ದ, ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸ್ವರಾಜ್ ಇಂಡಿಯಾ, ರೈತಸಂಘ ಹಾಗೂ ಹಸಿರುಸೇನೆ ಮತ್ತು ದಲಿತ ಸಂಘರ್ಷ ಸಮಿತಿ ಬೆಂಬಲಿತ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಡಿಯೋ.
ಕೃಪೆ- ಫೋಟೋಗ್ರಾಫರ್ ನೇತ್ರರಾಜು, ಮೈಸೂರು
ಮುಂದೆ ನೋಡಿ -
[ಜನಾಂದೋಲನಗಳ ಮಹಾಮೈತ್ರಿ ವತಿಯಿಂದ 2016ರ ಜುಲೈ 9 ಮತ್ತು 10ರಂದು ಧಾರವಾಡದಲ್ಲಿ ನಡೆದ ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಚಿತ್ರಮುದ್ರಿಕೆಯ ಕೊಂಡಿ… ]
ಮುಂದೆ ನೋಡಿ -
ನಮ್ಮ ಬನವಾಸಿಗೆ ಆರು ವರ್ಷ ತುಂಬಿದ [29.12.2020] ಈ ಸಂದರ್ಭದಲ್ಲಿ ತಾಣವನ್ನು ಕುರಿತು ಚಿಂತಕರು, ಪ್ರಸಿದ್ಧ ವಿಮರ್ಶಕರೂ ಆದ ಎಂ.ಎಸ್.ಆಶಾದೇವಿಯವರು ಈ ಅಭಿಪ್ರಾಯವನ್ನು ನೀಡಿದ್ದಾರೆ. ಅವರಿಗೆ ನಮ್ಮ ತಂಡದ ಪ್ರೀತಿಪೂರ್ವಕ ನಮನಗಳು. ಅವರ ಮಾತುಗಳನ್ನು ಕೇಳಲು ಕೆಳಗಿನ ಕೊಂಡಿ ಅನುಸರಿಸಿ…
ಮುಂದೆ ನೋಡಿ -
ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಆರು ವರ್ಷಗಳಾದ ಸಂದರ್ಭದಲ್ಲಿ [29.12.2020] ಪ್ರಸಿದ್ಧ ಚಿಂತಕರೂ ಹಾಗೂ ವಿಮರ್ಶಕರಾದ ಡಾ.ರಹಮತ್ ತರೀಕೆರೆಯವರು ಆಡಿದ ಮಾತುಗಳನ್ನು ಕೇಳಲು ಯುಟ್ಯೂಬ್ ಕೊಂಡಿ ಅನುಸರಿಸಿ…
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಮೊಮ್ಮಗಳು ಪುಟಾಣಿ ರುಹಾನಿಗೆ ತಾತನೆಂದರೆ ಅಚ್ಚುಮೆಚ್ಚು! ಹಾಗೇ ತಾತನಿಗೂ ಇವಳೆಂದರೆ ಪ್ರಿಯ. ಅವರೊಡನೆ ಅಕ್ಕರೆಯಿಂದ ಒಡನಾಡುತ್ತಲೇ, ಅರಿವಿಲ್ಲದೇ ಅವರನ್ನೇ ಅನುಸರಿಸುತ್ತಾ, ಅನುಕರಿಸುತ್ತಿರುತ್ತಾಳೆ ರುಹಾನಿ. ಈ ಬಾರಿ, ನಮ್ಮ ಬನವಾಸಿಯ ಆರನೆಯ ವರ್ಷದ ವಾರ್ಷಿಕೋತ್ಸವಕ್ಕಾಗಿ ತಾತನೊಡನೆ ರುಹಾನಿಯ ಆಪ್ತ ಕ್ಷಣಗಳು, ಅವಳು ಸೆರೆ ಹಿಡಿದ ತಾತನ ಆಪ್ತ ಚಿತ್ರಗಳು, ತಾತನ ಕುರಿತ ಅಭಿಮಾನದ ಅವಳದೇ ಮುದ್ದು ವಿವರಣೆಯೊಂದಿಗೆ ಕೊಲಾಜ್ ರೂಪದಲ್ಲಿ ನಮ್ಮ ಮುಂದಿದೆ. ಹೀಗಿದನ್ನು ನಮಗೆ ಆಕರ್ಷಕವಾಗಿ ಸಮ್ಮಿಲನಗೊಳಿಸಿಕೊಟ್ಟಿದ್ದು ಏಳನೆ ತರಗತಿ ಓದುತ್ತಿರುವ ಮತ್ತೋರ್ವ ಪುಟಾಣಿ ಚಿಕ್ಕಮಗಳೂರಿನ ಶ್ರಾವಣಿ! ನಮ್ಮ ಬನವಾಸಿ ತಂಡದ ಮನವಿಯ ಮೇರೆಗೆ ಪ್ರೀತಿಯಿಂದ, ಆದರೆ ಸಂಕೋಚದಿಂದಲೇ ಈ ಕೆಲಸಕ್ಕೆ ಬೆಂಬಲ ನೀಡಿದ್ದು ಮಹಾದೇವರ ಎರಡನೆಯ ಮಗಳು ಡಾ.ಮಿತಾ ಮತ್ತು ಅಳಿಯ ಅವಿನಾಶ್. ಹೀಗೆ ನಮ್ಮ ಬನವಾಸಿ ತಾಣವನ್ನು ಚೆಂದಗೊಳಿಸಲು ಸಹಕರಿಸುತ್ತಿರುವ ಎಲ್ಲ ಆಪ್ತ ಜೀವಗಳಿಗೂ ತಂಡದ ನನ್ನಿ. – ಬನವಾಸಿಗರು
ಮುಂದೆ ನೋಡಿ -
ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಆರು ವರ್ಷ ತುಂಬಿದ ಈ ಸಂದರ್ಭದಲ್ಲಿ ಕನ್ನಡದ ಪ್ರಸಿದ್ಧ, ಹಿರಿಯ ಕವಯಿತ್ರಿ ಪ್ರೊ.ಸ.ಉಷಾ ಅವರು ತಾಣದ ಕುರಿತು ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾರೆ…ಅವರಿಗೆ ನಮ್ಮ ಬನವಾಸಿ ತಂಡದ ಪ್ರೀತಿ.
ಮುಂದೆ ನೋಡಿ -
ಆರನೆಯ ವರ್ಷದ ಈ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಹಾದೇವರ ಅಪರೂಪದ ಹಳೆಯ ಫೋಟೋ ಗುಚ್ಛ ನಮಗಾಗಿ ಕಾಯುತ್ತಿವೆ. ಇವನ್ನು ಹುಡುಕಿ ನಮಗೆ ನೀಡಿದ ಆಪ್ತ ಚೇತನಗಳಿಗೆ ವಂದನೆಗಳು. “ಹಳತು ಹೊನ್ನು….” ವೀಕ್ಷಿಸಲು ಮುಂದೆ ನೋಡಿ. -ಬನವಾಸಿಗರು
ಮುಂದೆ ನೋಡಿ -
ಆರನೆಯ ವರ್ಷದ ನಮ್ಮಬನವಾಸಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಪರೂಪದ ಫೋಟೋ ಗುಚ್ಛ “ಕೆಲ ಅಪರೂಪದ ಕ್ಷಣಗಳು…” ನಮಗಾಗಿ ಕಾಯುತ್ತಿದೆ. ಈ ವಿಶೇಷವಾದ ಪುಟ ವೀಕ್ಷಿಸಲು ಮುಂದೆ ನೋಡಿ
-ಬನವಾಸಿಗರು
ಮುಂದೆ ನೋಡಿ