ಜೀವತಂತು
ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.
ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
-
ಎಲ್ಲರಿಗೂ ಹಂಚಿ ಉಣ್ಣುವ ದೊಂಬರ ಪರ ಪದ್ಧತಿ ಮತ್ತು ಎಲ್ಲೆಂದರೆ ಅಲ್ಲಿ ಬೇರು ಬಿಟ್ಟು ಎದ್ದು ನಿಲ್ಲುವ ಅರಳೀಮರದ ಸಮೀಕರಣದೊಂದಿಗೆ ಸಮಾಜವಾದ ಮತ್ತು ಕಮ್ಯುನಿಸಂನ ಮರು ಹುಟ್ಟಿನ ಕಥೆ ಹೇಳಿದ ದೇವನೂರ ಮಹಾದೇವ ಅವರು.
ಮುಂದೆ ಓದಿ -
ಭಾರತದ ಜಾತ್ಯಸ್ಥ ಮನಸಿನೊಳಗೆ ಇಣುಕಿದರೆ ವಿವೇಕ ವಿವೇಚನೆ ಹಾಗೂ ಸರಳತೆಯ ಜೊತೆಗೇ ಕ್ರೌರ್ಯವನ್ನು ಕಾಣುತ್ತೇವೆ . ಆದರೆ ಇದರಿಂದ ಕ್ರೌರ್ಯವನ್ನು ಕತ್ತರಿಸಿ ಬಿಸಾಕಿ ಭಾರತಕ್ಕೆ ಘನತೆ ಮತ್ತು ಮನುಷ್ಯತ್ವ ತಂದುಕೊಡುವುದು ಹೇಗೆ?-ಎಂಬ ಪ್ರಶ್ನೆಯನ್ನು ಗಾಂಧಿ ಹಾಗೂ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನೂ ಸೇರಿಸಿಕೊಂಡು ಸರಳವಾದ ಒಂದು ರೂಪಕದ ಮೂಲಕ ಇಲ್ಲಿ ಮಹಾದೇವ ಅವರು ವಿವರಿಸಲು ಪ್ರಯತ್ನಿಸಿದ್ದಾರೆ.
ಮುಂದೆ ಓದಿ -
[ಮಹಾರಾಷ್ಟ್ರದ ಪ್ರಸಿದ್ಧ ಬರಹಗಾರರಾದ ದಯಾ ಪವರ್ ಅವರ ಮರಾಠಿ ಭಾಷೆಯ ‘ಹೊಲೆ’ ಎಂಬ ಕಥೆಯ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ದೇವನೂರ ಮಹಾದೇವ ಅವರು ಬಹಳ ಹಿಂದೆಯೇ ಮಾಡಿದ್ದು , ಅದು ಫೆಬ್ರವರಿ 1975ರ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಅವರ ಮಿತ್ರರಾದ ರಾಮದೇವ ರಾಖೆಯವರು ನಮ್ಮ ಬನವಾಸಿಗೆ ನೀಡಿದ್ದಾರೆ. ಅವರಿಗೆ ನಮ್ಮ ವಂದನೆಗಳು.]
ಮುಂದೆ ನೋಡಿ -
[ಹೈದ್ರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ 17.1.2016ರಂದು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಆ ಕುರಿತು ದೇವನೂರ ಮಹಾದೇವ ಅವರು ಆಡಿದ ಒಡಲಾಳದ ಮಾತುಗಳ ಬರಹ ರೂಪ…. ನಮ್ಮ ಮರು ಓದಿಗಾಗಿ]
ಮುಂದೆ ನೋಡಿ -
8.1.2016ರ ಪ್ರಜಾವಾಣಿ, ಸಂಗತದಲ್ಲಿ ಪ್ರಕಟವಾದ ಮಹಾದೇವರ ಲೇಖನ ‘ಬುದ್ಧಿಸಂ-ಭಗವದ್ಗೀತೆ’ –ಅಂಬೇಡ್ಕರ್ ಹೋಲಿಕೆ
ಮುಂದೆ ಓದಿ -
2015 ಡಿಸೆಂಬರ್ 19 ಮತ್ತು 20 ರಂದು ಮಂಗಳೂರಿನಲ್ಲಿ ನಡೆದ ಜನನುಡಿಯ ಉದ್ಘಾಟನಾ ಮಾತುಗಳ ಪರಿಷ್ಕೃತ, ವಿಸ್ತೃತ ಬರಹ ರೂಪ. 24.12.2015ರ ಪ್ರಜಾವಾಣಿಯಲ್ಲಿಯೂ ಪ್ರಕಟಿತ.
» -
2015 ಆಗಸ್ಟ್ 15 ಮತ್ತು 16ರಂದು ದಾವಣಗೆರೆಯಲ್ಲಿ ನಡೆದ “ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರ ಚಿಂತನಾ ಸಮಾವೇಶ”ದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ
ಮುಂದೆ ಓದಿ -
-
ಮೈಸೂರಿನ ಕುವೆಂಪುನಗರದ ಭುವನೇಶ್ವರಿ ಉದ್ಯಾನವನ, ಆಶ್ರಯ ಟ್ರಸ್ಟ್ 2015 ಜೂನ್ 6ರಂದು ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿನ ಭುವನೇಶ್ವರಿ ಉದ್ಯಾನವನದಲ್ಲಿ ‘ನಿರೀಕ್ಷೆ’ ಶಾಲೆಯ ವಿಶೇಷ ಮಕ್ಕಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡನೆಟ್ಟು ನೀರೆರೆದು ಮಹಾದೇವ ಅವರು ಆಡಿದ ಮಾತುಗಳು ಮತ್ತು ಭಾವಚಿತ್ರ. ಜೊತೆಗೆ ಸ್ನೇಕ್ಶ್ಯಾಮ್,ಪ್ರವೀಣ್ ಕೃಪಾಕರ್,ಡಾ.ಡಿ. ತಿಮ್ಮಯ್ಯ, ಉದಯ್ಕುಮಾರ್, ಶ್ರೀನಿಧಿ ಮತ್ತು ಮಕ್ಕಳು. -ಫೋಟೋ ಕೃಪೆ ಆಂದೋಲನ ಪತ್ರಿಕೆ
ಮುಂದೆ ನೋಡಿ -