ಜೀವತಂತು

ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತುಗಳಾಗಿ ದಾಖಲಾದ ಮಹಾದೇವರ ನಾಲ್ಕು ಕೃತಿಗಳಾದ ದ್ಯಾವನೂರು ಮತ್ತು ಇತರ ಕಥೆಗಳು, ಒಡಲಾಳ, ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ ಮತ್ತಿತರ ಬಿಡಿ ಬರಹಗಳ ಭಂಡಾರ ಈ ಜೀವತಂತುವಿನ ಅಂತರಾಳ.

ಪುಸ್ತಕದ ಪೂರ್ಣಪಾಠಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ
Devanuru

 

  • ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಭಾಲಚಂದ್ರ ನೇಮಾಡೆ ಅವರ ‘ಹಿಂದೂ’ ಕಾದಂಬರಿಯನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತ ದೇವನೂರ ಮಹಾದೇವ ಅವರ ಅನಿಸಿಕೆ ಪ್ರಜಾವಾಣಿ ಮುಕ್ತಛಂದ ಪುರವಣಿಯಲ್ಲಿ 24.9.2016 ರಂದು ಪ್ರಕಟವಾಗಿದೆ.


    ಮುಂದೆ ಓದಿ
  • ಚಿಂತಕ ಜೆರೆಮಿ ಸೀಬ್ರೂಕ್ ಅವರ ಆಯ್ದ ಬರಹಗಳನ್ನು ಕವಯಿತ್ರಿ ರೋಸಿ ಡಿಸೋಜ ಹಾಗು ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಅನುವಾದಿಸಿ, ಸಂಪಾದಿಸಿದ್ದಾರೆ. ‘ಸ್ವರ್ಗಕ್ಕೆ ಮೂರೇ ಮೈಲಿ’ ಎಂಬ ಈ ಕೃತಿಯ ಬರಹಗಳು ಅಭಿವೃದ್ಧಿಯ ಆಗುಹೋಗು, ಜಾಗತೀಕರಣದ ಆಳ -ಹರಿವು, ಮನುಷ್ಯನ ಆಶೆ-ಹತಾಶೆಗಳ ಕುರಿತು ಚಿಂತಿಸುತ್ತದೆ. ಈ ಪುಸ್ತಕವನ್ನು ಅಹರ್ನಿಶಿ ಪ್ರಕಾಶನವು ಹೊರತರುತ್ತಿದ್ದು, ದೇವನೂರ ಮಹಾದೇವ ಅವರು ತಮ್ಮ ನೆಚ್ಚಿನ ಚಿಂತಕನ ಕೃತಿಗೆ ಪುಟ್ಟ ಬೆನ್ನುಡಿ ಬರೆದಿದ್ದಾರೆ. ಅದು ಇಲ್ಲಿದೆ.


    ಮುಂದೆ ನೋಡಿ
  • ಮೂರನೆಯ ಮಹಾಯುದ್ಧ ಈಗ ಜರುಗುತ್ತಿದೆ, ಆದರೆ ಅಗೋಚರವಾಗಿ. ಒಟ್ಟಿನಲ್ಲಿ ನಾವು ಸೇವಿಸುವ ಗಾಳಿ. ಕುಡಿಯುವ ನೀರು, ತಿನ್ನುವ ಅನ್ನ ಅಷ್ಟೇ ಅಲ್ಲ, ಈ ಭೂಮಿ ವಿಷಮಯವಾಗುತ್ತಾ ಜೊತೆಗೆ ಬೇಯುತ್ತಿದೆ. ಆದರೂ ಪರಿಸ್ಥಿತಿಗೆ ನಾವು ಹೊಂದಿಕೊಂಡು ಹೋಗುತ್ತಾ ಚಡಪಡಿಸುತ್ತಾ ಜೀವಿಸುತ್ತಿದ್ದೇವೆ, ಅಂಗಾತ ಬಿದ್ದಿಲ್ಲ ಅಷ್ಟೆ. ಹಿಂದಿನ ಯುದ್ಧಗಳಲ್ಲಿ ಒಲೆ ಹತ್ತಿ ಉರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುತ್ತಿತ್ತು. ವ್ಯತ್ಯಾಸವೆಂದರೆ ಇಂದಿನ ಯುದ್ಧ ಧರೆ ಹತ್ತಿ ಉರಿದಂತೆ. ಜಾಗತೀಕರಣದ ಅಭಿವೃದ್ಧಿ ಜಾಡಿನಲ್ಲಿ ಹೆಜ್ಜೆಯಿಡುತ್ತಿರುವ ಭಾರತಕ್ಕೆ ಮುಂದೆ ಸಂಭವಿಸಬಹುದಾದುದು ಹೆಚ್ಚುಕಮ್ಮಿ ಗ್ರೀಸ್‌ನಲ್ಲಿ ಈಗ ಜರುಗುತ್ತಿದೆ ಅನ್ನಿಸಿಬಿಟ್ಟಿತು. ಮುಂದುವರಿದ ಗ್ರೀಸ್‌ಗೆ ಆದದ್ದು ಅದೇ ಜಾಡಿನಲ್ಲಿ ಮುಂದುವರಿಯುತ್ತಿರುವ ಭಾರತಕ್ಕೆ ಆಗುವುದಿಲ್ಲವೆ? ಈ ಪ್ರಶ್ನೆಗಳೊಡನೆ ನಮ್ಮ ಆತ್ಮಾಭಿಮಾನವನ್ನು, ನಿಷ್ಕ್ರಿಯತೆಯನ್ನು ಬಡಿದೆಬ್ಬಿಸುವ ದೇವನೂರ ಮಹಾದೇವ ಅವರ ಲೇಖನ ಪ್ರಜಾವಾಣಿ 17.7.2016 ರ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾಗಿದೆ.


    ಮುಂದೆ ಓದಿ
  • ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ [ರಿ] ವತಿಯಿಂದ ದಿನಾಂಕ 11.6.2016ರಂದು ನಡೆದ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2015 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.


    ಮುಂದೆ ನೋಡಿ
  • ‘ಮಹಾ’ ಎಂಬ ಒಂದೇ ಪದವಿಟ್ಟು ತೂಗಿದರೂ ಸಮಾಜದಲ್ಲಿರುವ ಶ್ರೇಣಿಗೆ ತಕ್ಕಂತೆ ತಕ್ಕಡಿ ಏಳುತ್ತದೆ, ಬೀಳುತ್ತದೆ, ತೂಗುತ್ತದೆ! ತಳಕ್ಕೆ ಹೋಗುತ್ತಾ ಕಳೆದುಕೊಳ್ಳುತ್ತದೆ. ಮೇಲಕ್ಕೆ ಹೋಗುತ್ತಾ ಪಡೆದುಕೊಳ್ಳುತ್ತದೆ. ಇದು ಭಾರತದ ಆಂತರ್ಯವನ್ನು ಅರ್ಥ ಮಾಡಿಕೊಳ್ಳಲು ‘ಮಹಾ’ ಎಂಬ ಈ ಪದ- ಈ ಅನ್ನದ ಅಗಳೂ ಕಣ್ಸನ್ನೆ ಮಾಡುತ್ತದೆಯಲ್ಲಾ ಎಂಬ ಸಂಕಟಾಶ್ಚರ್ಯ ದೇವನೂರ ಮಹಾದೇವ ಅವರದು.


    ಮುಂದೆ ನೋಡಿ
  • ತನ್ನ ಕಥೆ ಬರೆಯುವ ಪ್ರಕ್ರಿಯೆ, ಅದರ ಹಿನ್ನೆಲೆ, ಅದರಲ್ಲಿರುವ ಪ್ರಯೋಗಶೀಲತೆ, ಸೃಜನಶೀಲತೆಯ ಕುರಿತು ಮನದಾಳದಿಂದ ಪ್ರಜಾವಾಣಿ 22.5.2016ರ ಮುಕ್ತಚಂದ ಪುರವಣಿಯಲ್ಲಿ ದೇವನೂರ ಮಹಾದೇವ ಹಂಚಿಕೊಂಡಿದ್ದಾರೆ.


    ಮುಂದೆ ಓದಿ
  • ಎಲ್ಲರಿಗೂ ಹಂಚಿ ಉಣ್ಣುವ ದೊಂಬರ ಪರ ಪದ್ಧತಿ ಮತ್ತು ಎಲ್ಲೆಂದರೆ ಅಲ್ಲಿ ಬೇರು ಬಿಟ್ಟು ಎದ್ದು ನಿಲ್ಲುವ ಅರಳೀಮರದ ಸಮೀಕರಣದೊಂದಿಗೆ ಸಮಾಜವಾದ ಮತ್ತು ಕಮ್ಯುನಿಸಂನ ಮರು ಹುಟ್ಟಿನ ಕಥೆ ಹೇಳಿದ ದೇವನೂರ ಮಹಾದೇವ ಅವರು.


    ಮುಂದೆ ಓದಿ
  • ಭಾರತದ ಜಾತ್ಯಸ್ಥ ಮನಸಿನೊಳಗೆ ಇಣುಕಿದರೆ ವಿವೇಕ ವಿವೇಚನೆ ಹಾಗೂ ಸರಳತೆಯ ಜೊತೆಗೇ ಕ್ರೌರ್ಯವನ್ನು ಕಾಣುತ್ತೇವೆ . ಆದರೆ ಇದರಿಂದ ಕ್ರೌರ್ಯವನ್ನು ಕತ್ತರಿಸಿ ಬಿಸಾಕಿ ಭಾರತಕ್ಕೆ ಘನತೆ ಮತ್ತು ಮನುಷ್ಯತ್ವ ತಂದುಕೊಡುವುದು ಹೇಗೆ?-ಎಂಬ ಪ್ರಶ್ನೆಯನ್ನು ಗಾಂಧಿ ಹಾಗೂ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನೂ ಸೇರಿಸಿಕೊಂಡು ಸರಳವಾದ ಒಂದು ರೂಪಕದ ಮೂಲಕ ಇಲ್ಲಿ ಮಹಾದೇವ ಅವರು ವಿವರಿಸಲು ಪ್ರಯತ್ನಿಸಿದ್ದಾರೆ.


    ಮುಂದೆ ಓದಿ
  • [ಮಹಾರಾಷ್ಟ್ರದ ಪ್ರಸಿದ್ಧ ಬರಹಗಾರರಾದ ದಯಾ ಪವರ್ ಅವರ ಮರಾಠಿ ಭಾಷೆಯ  ‘ಹೊಲೆ’ ಎಂಬ ಕಥೆಯ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ದೇವನೂರ ಮಹಾದೇವ ಅವರು ಬಹಳ ಹಿಂದೆಯೇ ಮಾಡಿದ್ದು , ಅದು ಫೆಬ್ರವರಿ  1975ರ  ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ಅದನ್ನು ಅವರ ಮಿತ್ರರಾದ ರಾಮದೇವ ರಾಖೆಯವರು ನಮ್ಮ ಬನವಾಸಿಗೆ ನೀಡಿದ್ದಾರೆ. ಅವರಿಗೆ ನಮ್ಮ ವಂದನೆಗಳು.]


    ಮುಂದೆ ನೋಡಿ
  • [ಹೈದ್ರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ 17.1.2016ರಂದು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಆ ಕುರಿತು ದೇವನೂರ ಮಹಾದೇವ ಅವರು ಆಡಿದ ಒಡಲಾಳದ ಮಾತುಗಳ ಬರಹ ರೂಪ…. ನಮ್ಮ ಮರು ಓದಿಗಾಗಿ]


    ಮುಂದೆ ನೋಡಿ