ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ 1% ಅತಿಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ: ಈ ಅಭಿಯಾನದಲ್ಲಿ 2020 ಮೇ 1 ರಂದು ಸಂಪತ್ತಿನ ತೆರಿಗೆ ಪಿಟಿಷನ್‍ಗೆ ರಾಷ್ಟ್ರದ ಪ್ರಜ್ಞಾವಂತರು ಸಹಿ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಈ ಆಂದೋಲನವನ್ನು ಹಮ್ಮಿಕೊಳ್ಳಲು ದೇವನೂರ ಮಹಾದೇವ ಅವರೊಂದಿಗೆ ಇನ್ನಿತರರು ಪತ್ರಿಕಾ ಹೇಳಿಕೆಯ ಮೂಲಕ 26.5.2020 ರಂದು ಸಮುದಾಯವನ್ನು ಮನವಿ ಮಾಡಿಕೊಂಡಿದ್ದು, ಪತ್ರದ ಪ್ರತಿ ಇಲ್ಲಿದೆ.]
ಮುಂದೆ ನೋಡಿ -
[ಡಾ.ಆನಂದ್ ತೇಲ್ತುಂಬೆ ಅವರ ಬಂಧನವನ್ನು ವಿರೋಧಿಸಿ 16.5.2020ರಂದು ನಡೆದ “ನ್ಯಾಯದ ದಿನ”ಕ್ಕಾಗಿ ದೇವನೂರ ಮಹಾದೇವ ಅವರ ದಿಕ್ಸೂಚಿ ಮಾತು]
ಮುಂದೆ ನೋಡಿ -
[ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರನ್ನು ಅನ್ಯಾಯದಿಂದ ಬಂಧಿಸಿರುವುದನ್ನು ವಿರೋಧಿಸಿ, ಬಿಡುಗಡೆಗೆ ಆಗ್ರಹಿಸಿ 16 ಮೇ 2020,ರ ದಿನವನ್ನು “ನ್ಯಾಯದ ದಿನ”ವಾಗಿ ಆಚರಿಸಲು ರಾಷ್ಟ್ರದ 35 ಚಿಂತಕರನ್ನೊಳಗೊಂಡ ತಂಡವು ದೇಶಾದ್ಯಂತದ ಪ್ರಜ್ಞಾವಂತರನ್ನು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ ಅವರ ಚಾಲನೆಯ ಮಾತುಗಳು ಇಲ್ಲಿವೆ.]
ಮುಂದೆ ನೋಡಿ -
[ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರಿಗೆ ಬೆಂಬಲ ಘೋಷಿಸಿ 2020 ಮೇ 16ರಂದು ನ್ಯಾಯದ ದಿನವನ್ನಾಗಿ ಆಚರಿಸೋಣ ಎಂದು 35 ಚಿಂತಕರ, ಹೋರಾಟಗಾರರ, ಪತ್ರಕರ್ತರ ಸಹಿಯುಳ್ಳ ಪತ್ರಿಕಾ ಹೇಳಿಕೆಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ 13.5.2020ರಂದು ಬಿಡುಗಡೆ ಮಾಡಿದ್ದಾರೆ. ಪತ್ರದ ಪೂರ್ಣ ಸಾರಾಂಶ ಹೀಗಿದೆ]
ಮುಂದೆ ನೋಡಿ -
[This petition to the Prime Minister was written by the dignitaries of the country On May 6, 2020- to impose 2% wealth tax on the 1% rich to deal with the Corona epidemic and this letter was also signed by Devanur Mahadeva. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು 1% ಶ್ರೀಮಂತರ ಮೇಲೆ 2% ಸಂಪತ್ತಿನ ತೆರಿಗೆ ವಿಧಿಸಲು ಪ್ರಧಾನ ಮಂತ್ರಿಗೆ ಈ ಮನವಿ ಪತ್ರವನ್ನು ಮೇ 6, 2020 ರಂದು, ದೇಶದ ಪ್ರಜ್ಞಾವಂತರು ಸೇರಿ ಬರೆದಿದ್ದು, ಈ ಪತ್ರಕ್ಕೆ ದೇವನೂರ ಮಹಾದೇವ ಅವರು ಸಹ ಸಹಿ ಹಾಕಿದ್ದಾರೆ. ]
ಮುಂದೆ ನೋಡಿ -
[ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರ ಖದೀಮರಾದ ಶ್ರೀಮಂತರ 68,607 ಕೋಟಿಯಷ್ಟು ಹಣವನ್ನು ಮನ್ನಾ ಮಾಡಿ ನಿರ್ಲಜ್ಜತೆ ಮೆರೆದಿದೆ ಎಂದು ಹೆಚ್.ಎಸ್.ದೊರೆಸ್ವಾಮಿ, ದೇವನೂರ ಮಹಾದೇವ ಮುಂತಾದ ಹೋರಾಟಗಾರರು ರಾಷ್ಟ್ರಪತಿಗೆ 2020 ಮೇ 1ರ ಕಾರ್ಮಿಕ ದಿನದಂದು ಬರೆದ ಪತ್ರ .]
ಮುಂದೆ ನೋಡಿ -
[ವಿವಿಧ ಪತ್ರಿಕೆಗಳಲ್ಲಿ ಏಪ್ರಿಲ್ 9, 2020ರಂದು ಪ್ರಕಟಿತ] ಪ್ರೀತಿ, ಶಾಂತಿ, ಸರ್ವರ ಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ಸುರಕ್ಷಿತವಾಗಿರೋಣ!*ಒಂದು ಕೋಮನ್ನು ಗುರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿಗಳ ಘೋಷಣೆಯನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಎಚ್ಚರಿಕೆ ಮಾತ್ರ ಸಾಲದು. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ.
ಮುಂದೆ ನೋಡಿ -
-
(ಬೆಂಗಳೂರಿನ ಸ್ವರಾಜ್ ಅಭಿಯಾನ್ ಸಂಘಟನೆಯ ಕಾರ್ಯಕರ್ತೆಯಾದ ಜರೀನ್ ತಾಜ್‌ರವರು ಲಾಕ್‌ಡೌನ್ ಘೋಷಿಸಿದಾಗಿನಿಂದಲೂ ವಲಸೆ ಕಾರ್ಮಿಕರಿಗೆ, ಬಡಜನರಿಗೆ, ಸ್ಲಂ ನಿವಾಸಿಗಳಿಗೆ ತಮ್ಮಿಂದಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ ಏಪ್ರಿಲ್ 4 ಮತ್ತು 6 ರಂದು ಬಡಜನರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾಗ ಅವರು ಮುಸ್ಲಿಂ ಎಂಬ ಕಾರಣಕ್ಕೆ ಹಲವು RSS ಬೆಂಬಲಿಗರು ಅವರ ಮೆಲೆ ಎರಡು ಬಾರಿ ಹಲ್ಲೆ ನಡೆಸಿದ್ದಾರೆ. ಈಗ ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ನೊಂದುಕೊಂಡು ಹಿರಿಯ ಸಾಹಿತಿ ಮತ್ತು ಸ್ವರಾಜ್ ಇಂಡಿಯಾದ ಮುಖಂಡರಾದ ದೇವನೂರು ಮಹಾದೇವರವರು ಭಾವಪೂರ್ಣ ಪತ್ರ[8.4.2020] ಬರೆದಿದ್ದಾರೆ.)
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಹೊಸ ಕಿರು ಪುಸ್ತಕ…
“ಈಗ ಭಾರತ ಮಾತಾಡುತ್ತಿದೆ….” -ಸಿಎಎ, ಎನ್ ಆರ್ ಸಿ, ಎನ್ ಪಿ ಆರ್,… ಸಂಚಿನ ಕುರಿತು ಇದುವರೆಗೆ ದೇವನೂರ ಮಹಾದೇವ ಅವರು ಅಲ್ಲಿಲ್ಲಿ ಆಡಿದ ಮಾತುಗಳು ಹಾಗೂ ಪ್ರಕಟವಾದ ಬರಹಗಳ ಗುಚ್ಛ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮಾರ್ಚ್ 2020ರಂದು ಪ್ರಕಟಗೊಂಡಿದ್ದು. ಮಾರುಕಟ್ಟೆಯಲ್ಲಿ ದೊರೆಯುತ್ತಿದೆ..
ಮುಂದೆ ನೋಡಿ