ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ರಂಗಾಯಣದ ಬಯಲು ರಂಗಮಂದಿರದ ಕಟ್ಟೆಯ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಣೆಯಲ್ಲಿ ಮಗ್ನರಾದ ದೇವನೂರ ಮಹಾದೇವ ಅವರು.
ಮುಂದೆ ನೋಡಿ -
ಕೆ.ಆರ್ ಪೇಟೆಯ ಶತಮಾನದ ಶಾಲೆ ಆವರಣದಲ್ಲಿ ‘ಸಮಾನ ಶಿಕ್ಷಣ ಜನಾಂದೋಲನಾ ಸಮಿತಿ’ ಆಶ್ರಯದಲ್ಲಿ 27.2.2016, ಶನಿವಾರ ನಡೆದ ಜಾಗೃತಿ ಸಭೆಯಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿ ‘ಬಂಡವಾಳಶಾಹಿಗಳ ಕೈಗೆ ಶಿಕ್ಷಣದ ಜುಟ್ಟು’ ಎಂದು ಕಳವಳ ಪಟ್ಟರು. -ಪ್ರಜಾವಾಣಿ ವಾರ್ತೆ
ಮುಂದೆ ನೋಡಿ -
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡರ ಬಂಧನ ಹಾಗೂ ‘ದೇಶದ್ರೋಹ’ದ ಆಪಾದನೆಯನ್ನು ಖಂಡಿಸಿ ಮೈಸೂರಿನ ಗಾಂಧಿಚೌಕದಲ್ಲಿ ಜಂಟಿ ಕ್ರಿಯಾ ಸಮಿತಿ 29.3.2015 ಗುರುವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ದೇವನೂರ ಮಹಾದೇವ ಮಾತನಾಡಿದರು.-ಪ್ರಜಾವಾಣಿ ವಾರ್ತೆ
ಮುಂದೆ ಓದಿ -
ಫೆಬ್ರವರಿ 2016 ರಲ್ಲಿ ರಾಜ್ಯಾದ್ಯಂತ ನಡೆಯಲಿರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಾಗಿ ಸರ್ವೋದಯ ಕರ್ನಾಟಕ ಪಕ್ಷ ಹೊರಡಿಸಿರುವ ಕರಪತ್ರ.
ಮುಂದೆ ನೋಡಿ -
ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಕುರಿತು ದೇವನೂರ ಮಹಾದೇವ ಅವರು 25.1.2016 ರ ಕನ್ನಡಪ್ರಭ ಪತ್ರಿಕೆಗೆ ನೀಡಿದ ಹೇಳಿಕೆ.
ಮುಂದೆ ನೋಡಿ -
ಬಂಜಗೆರೆ ಜಯಪ್ರಕಾಶ್ ಅವರ ಕೃತಿ ‘ಆನುದೇವಾ. ಹೊರಗಣವನು’ ಮುಟ್ಟುಗೋಲಿನ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ನೀಡಿದ ಅಭಿಪ್ರಾಯ ಲಡಾಯಿ ಪ್ರಕಾಶನ 2013ರಲ್ಲಿ ಹೊರ ತಂದಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ ವಿವಿಧ ಆಯಾಮಗಳು” ಕೃತಿಯಲ್ಲಿ ದಾಖಲಾಗಿರುವಂತೆ….
ಮುಂದೆ ಓದಿ -
ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ತೆಗೆದ ಸಾಕ್ಷ್ಯಚಿತ್ರ ‘ಧರೆ ಹೊತ್ತಿ ಉರಿದೊಡೆ’ಯಲ್ಲಿ ಹೃದಯಹೀನ, ಬುದ್ಧಿಹೀನ ಮಾರುಕಟ್ಟೆ ಆರ್ಥಿಕ ನೀತಿಗಳು ಹಾಗೂ ದಲ್ಲಾಳಿಗಳು ಹೇಗೆ ರೈತರ ಬದುಕನ್ನು ಛಿದ್ರ ಮಾಡುತ್ತಿವೆ ಮತ್ತು ಅದರಿಂದ ಹೊರ ಬಂದು ನೈಸರ್ಗಿಕ ಕೃಷಿ ಮತ್ತು ಸ್ವಯಂ ಮಾರುಕಟ್ಟೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ್ಮನಾಶದ ಹಾದಿಯಿಂದ ಹೇಗೆ ತಪ್ಪಿಸಿಕೊಳ್ಳಬಹುದೆಂಬ ಪರಿಣಾಮಕಾರಿ ಚಿತ್ರಣವಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ವಿವರಣೆ ನೀಡಲಾಗಿದೆ. Infact Films ಮೂಲಕ ತಯಾರಿಸಿರುವ ಈ ಸಾಕ್ಷ್ಯಚಿತ್ರವನ್ನು ಮಾಯಾಜಲದೀಪ್ ಮತ್ತು ಕೆಸ್ತೂರ್ ವಾಸುಕಿಯವರು…
ಮುಂದೆ ನೋಡಿ -
ರತನ್ ಟಾಟಾ ಸಂಪನ್ಮೂಲ ಮತ್ತು ಕೊಳ್ಳುವ ತಾಕತ್ತಿನ ಕುರಿತು ಹೇಳಿದ ಸ್ವಾನುಭವ 3.12.2015ರ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಅನುಭವ ಯಾರದೆಂದು ತಿಳಿಯದೇ ಹಲವು ವರ್ಷಗಳಿಂದ ಮಹಾದೇವ ಅವರು ತಮ್ಮ ಮಾತು-ಬರವಣಿಗೆಯಲ್ಲಿ ಹೇಳುತ್ತಾ ಬಂದಿದ್ದು, ಇದು ಅವರು ಒಪ್ಪುವ ಸಿದ್ಧಾಂತವೇ ಆಗಿ ಹೋಗಿದೆ.
ಮುಂದೆ ಓದಿ -
ಬರಹದ, ಮಾತಿನ ಪ್ರತಿ ಪದವನ್ನೂ ಅಕ್ಕಸಾಲಿಗನಂತೆ ತೂಗಿ ಬಳಸುವ ಮಹಾದೇವ ಅವರು ಪ್ರತಿ ಭಾಷಣದ ಮೊದಲೂ ಟಿಪ್ಪಣಿ ಮಾಡಿಕೊಂಡೇ ಹೊರಡುವುದು. ಅದೂ ಒಂದು ಧ್ಯಾನದಂತೆ…. ಆ ಸ್ಥಿತಿಯ ಛಾಯಾಚಿತ್ರಗಳು.
ಮುಂದೆ ನೋಡಿ -
[Interview by Muralidhar Khajane in ‘The Hindu’ on 15.11.2015 after Mahadeva returned the Padma Shri and Central Sahithya Academy Literary Award. ಪದ್ಮಶ್ರೀ ಮತ್ತು ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಮಹಾದೇವ ಅವರು ವಾಪಸ್ ಮಾಡಿದ ನಂತರ 15.11.2015ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಮುರಳಿಧರ ಖಜಾನೆಯವರು ಮಾಡಿದ ಸಂದರ್ಶನ. ]
ಮುಂದೆ ಓದಿ