ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಕುಸುಮಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದ ಸಂದರ್ಭದಲ್ಲಿ ಮೈಸೂರು ಆಕಾಶವಾಣಿ ಪರವಾಗಿ ಶ್ರೀ ಕಿಕ್ಕೇರಿ ನಾರಾಯಣ ಅವರು ಮಹಾದೇವ ಅವರನ್ನು ಸಂದರ್ಶಿಸಿದ್ದರು. ಅದನ್ನು ಸಂವಾದ ಸಾಹಿತ್ಯ ಪತ್ರಿಕೆಯ 1991ರ ಜನವರಿ -ಫೆಬ್ರವರಿ ಸಂಚಿಕೆಗಾಗಿ ನಾರಾಯಣ ಅವರೇ ಬರಹ ರೂಪಕ್ಕೆ ಇಳಿಸಿ ಕೊಟ್ಟಿದ್ದರು. 11.1.2017ರಂದು ತೀರಿಕೊಂಡ ಕಿಕ್ಕೇರಿ ನಾರಾಯಣ ಅವರ ನೆನಪಿನಲ್ಲಿ ಅವರು ಮಾಡಿದ ಸಂದರ್ಶನ ನಮ್ಮ ಮರು ಓದಿಗಾಗಿ.
ಮುಂದೆ ಓದಿ -
ದೇವನೂರ ಮಹಾದೇವ ಅವರ ಕುಸುಮಬಾಲೆ ಕೃತಿಯ ಇಂಗ್ಲಿಷ್ ಅನುವಾದ ಕುರಿತು ಮೈಸೂರಿನ ವನರಂಗದಲ್ಲಿ [ರಂಗಾಯಣ] ನಡೆದ ಮುಕ್ತಸಂವಾದ ಕಾರ್ಯಕ್ರಮದಲ್ಲಿ ದೇವನೂರರೊಂದಿಗೆ ಅವರ ಮಗಳು ಡಾ.ಮಿತಾ ದೇವನೂರು. ಚಿತ್ರ ಕೃಪೆ-ನಾರಾಯಣ ಕೆ. ಕ್ಯಾಸಂಬಳ್ಳಿ
ಮುಂದೆ ನೋಡಿ -
-
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ 23.12.2016 ಶುಕ್ರವಾರ ಆಯೋಜಿಸಿದ್ದ ‘ವಿಶ್ವ ರೈತ ದಿನಾಚರಣೆ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದೇವನೂರ ಮಹಾದೇವ ಅವರ ಮಾತುಗಳ ಪ್ರಜಾವಾಣಿ ವರದಿ.
ಮುಂದೆ ನೋಡಿ -
ದೇವನೂರ ಮಹಾದೇವ ಅವರಿಗೆ ಇದೇ ಡಿಸೆಂಬರ್ 29ರಂದು ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಕುಪ್ಪಳಿಯಲ್ಲಿ ನೀಡಲಿರುವ ಕಾರ್ಯಕ್ರಮದ ಆಹ್ವಾನಪತ್ರಿಕೆ.
ಮುಂದೆ ನೋಡಿ -
ಆದ್ಧೂರಿ ಮದುವೆಗಳನ್ನು ವಿರೋಧಿಸಿ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಭಾನುವಾರ ನಡೆದ ರೈತಮುಖಂಡ ಎಂ.ರಾಮು ಅವರ ಪುತ್ರ ರಂಜಿತ್ ಹಾಗೂ ತೇಜಸ್ವಿನಿ ಅವರ `ಕುವೆಂಪು ಪ್ರಣೀತ ಮಂತ್ರ ಮಾಂಗಲ್ಯ’ ವಿವಾಹ ಸಮಾರಂಭದಲ್ಲಿ ದೇವನೂರ ಮಹದೇವ ಭಾಗವಹಿಸಿ ಮಾತನಾಡಿದರು. ಅದರ 6.12.2016ರ ಪ್ರಜಾವಾಣಿ ವಾರ್ತೆ.
ಮುಂದೆ ನೋಡಿ -
ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ 29.11.2016ರಂದು ನಡೆದ ಕನ್ನಡ ರಾಜ್ಯೋತ್ಸವದಲ್ಲಿ ದೇವನೂರ ಮಹಾದೇವ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ , ಬಡಗಲಪುರ ನಾಗೇಂದ್ರ, ಡಾ.ರವೀಂದ್ರ, ಕೃಷ್ಣ … ಇನ್ನಿತರರು
ಮುಂದೆ ನೋಡಿ -
ಬೆಳಗಾವಿಯಲ್ಲಿ 21.11.2016 ರಿಂದ ಪ್ರಾರಂಭವಾದ ಅಧಿವೇಶನದಲ್ಲಿ ರೈತರ ಪರವಾದ ಹಕ್ಕೊತ್ತಾಯಗಳನ್ನು ಮಂಡಿಸಲು ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಧರಣಿ, ಪ್ರತಿಭಟನೆ, ಪತ್ರಿಕಾಗೋಷ್ಠಿಗಳನ್ನು ಆಯೋಜಿಸಿದ್ದು ಅದರ ಪ್ರಜಾವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ದಿ ಹಿಂದೂ ಪತ್ರಿಕೆಗಳ 23.11.2016ರ ವರದಿಗಳ ಒಂದು ನೋಟ. ಮಹಾಮೈತ್ರಿಯ ನಾಯಕರುಗಳಾದ ದೇವನೂರ ಮಹಾದೇವ, ಎಸ್.ಆರ್.ಹಿರೇಮಠ, ರಾಘವೇಂದ್ರ ಕುಷ್ಟಗಿ ಇನ್ನಿತರರು ಉಪಸ್ಥಿತರಿದ್ದಾರೆ.
ಮುಂದೆ ನೋಡಿ -
ಭಾನುವಾರದ ಪ್ರಜಾವಾಣಿ ಮುಕ್ತಛಂದದ ಮಕ್ಕಳ ವಿಭಾಗದ ಕಥೆಯನ್ನು ಮೊಮ್ಮಗಳು ರುಹಾನಿಗೆ ಓದಿ ಹೇಳುತ್ತಿರುವ ತಾತ ದೇವನೂರ ಮಹಾದೇವ. ಭಾವಚಿತ್ರ ಕೊಡುಗೆ- ಅಭಿರುಚಿ ಗಣೇಶ್
ಮುಂದೆ ನೋಡಿ -
ಮಾಜಿ ಸಂಸದ ಜನಾರ್ಧನ ರೆಡ್ಡಿ ಮಗಳ ಅದ್ದೂರಿ ಮದುವೆ ಕುರಿತು….17.11.2016 ರ ಕನ್ನಡಪ್ರಭದಲ್ಲಿ ದೇವನೂರ ಮಹಾದೇವ ಅವರ ಅಭಿಪ್ರಾಯ
ಮುಂದೆ ಓದಿ